ಜಿನೆವಾದಲ್ಲಿ ಬಿಎಂಡಬ್ಲ್ಯು ಎಕ್ಸ್5 ಹೈಬ್ರಿಡ್ ಕಾರು ಅನಾವರಣ
ನೂತನ ತಂತ್ರಜ್ಞಾನಗಳನ್ನು ಅವಿಷ್ಕರಿಸುವುದರಲ್ಲಿ ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಮುಂಬರುವ 2015 ಜಿನೆವಾ ಮೋಟಾರು ಶೋದಲ್ಲಿ ಅತ್ಯಾಕರ್ಷಕ ಹೈಬ್ರಿಡ್ ಮಾದಿರಯೊಂದನ್ನು ಪ್ರದರ್ಶಿಸಲಿದೆ.
ಬಲ್ಲ ಮೂಲಗಳ ಪ್ರಕಾರ ಬಿಎಂಡಬ್ಲ್ಯು ಎಕ್ಸ್5 ಎಕ್ಸ್ ಡ್ರೈವ್40ಇ ಹೈಬ್ರಿಡ್ ಮಾದರಿಯು ಮಾರ್ಚ್ 5ರಿಂದ 15ರ ವರೆಗೆ ಸ್ವಿಜರ್ಲೆಂಡ್‌ನಲ್ಲಿ ಸಾಗಲಿರುವ ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಳ್ಳಲಿದೆ.

ಇದಾದ ಬೆನ್ನಲ್ಲೇ ಎಪ್ರಿಲ್ ತಿಂಗಳಲ್ಲಿ ನಿರ್ಮಾಣ ಪ್ರಕ್ರಿಯೆ ಆರಂಭಿಸಲಿದೆ. ಇದರೊಂದಿಗೆ ಎಕ್ಸ್5 ಹೈಬ್ರಿಡ್ ಮಾದರಿಯು ಜನಪ್ರಿಯ ಐ3 ಹಾಗೂ ಐ8 ಕಾರುಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.
ಹೊಸತಾದ ಎಕ್ಸ್5 ಎಕ್ಸ್ ಡ್ರೈವ್40ಇ ಮಾದರಿಯು 2.0 ಲೀಟರ್ 4 ಸಿಲಿಂಡರ್ ಆಂತರಿಕ ದಹನಕಾರಿ ಎಂಜಿನ್ ಪಡೆದುಕೊಳ್ಳಲಿದ್ದು, 350 ತಿರುಗುಬಲದಲ್ಲಿ 245 ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನು ಇದರಲ್ಲಿ 95 ಅಶ್ವಕ್ತಿ ಸಾಮರ್ಥ್ಯದ (250 ತಿರುಗುಬಲ) ಎರೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ. ಅಂತೆಯೇ 8 ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ.
ಇವೆರಡು ಜೊತೆಗೂಡಿದಾಗ ಎಕ್ಸ್5 ಹೈಬ್ರಿಡ್ ಕಾರು ಬರೋಬ್ಬರಿ 600 ತಿರುಗುಬಲದಲ್ಲಿ 340 ಅಶ್ವಶಕ್ತಿ ಹುಟ್ಟುಹಾಕಲಿದೆ. ಇದು ಅತ್ಯಂತ ಶಕ್ತಿಶಾಲಿ ಕಾರಿನಲ್ಲಿ ಗುರುತಿಸಲು ಸಹಕಾರಿಯಾಗಲಿದ್ದು, ಏಳು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ವರ್ಧಿಸಲಿದೆ.
ಇನ್ನು ಎಲೆಕ್ಟ್ರಿಕ್ ಮೋಡ್‌ನಲ್ಲಿ ಮಾತ್ರವಾಗಿ 32 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ಎಲೆಕ್ಟ್ರಿಕ್ ಮೋಡ್ ಗರಿಷ್ಠ ವೇಗ ಗಂಟೆಗೆ 120 ಕೀ.ಮೀ. ಆಗಿರಲಿದೆ.


Click it and Unblock the Notifications








