ಬಿಎಂಡಬ್ಲ್ಯು ಶಕ್ತಿಶಾಲಿ ಎಕ್ಸ್5ಎಂ, ಎಕ್ಸ್6ಎಂ ಬಿಡುಗಡೆ
ಜರ್ಮನಿಯ ಐಷಾರಾಮಿ ವಾಹನ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು ಅತಿ ನೂತನ ಎಕ್ಸ್5ಎಂ ಮತ್ತು ಎಕ್ಸ್6ಎಂ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಬಿಎಂಡಬ್ಲ್ಯು ಎಂ ಶ್ರೇಣಿಯ ಕಾರುಗಳು ಮತ್ತಷ್ಟು ಬಲಾಢ್ಯಗೊಂಡಿದೆ.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಬಿಎಂಬ್ಲ್ಯು ಎಕ್ಸ್5ಎಂ: 1.55 ಕೋಟಿ ರು.
- ಬಿಎಂಡಬ್ಲ್ಯು ಎಕ್ಸ್6ಎಂ: 1.60 ಕೋಟಿ ರು.
ಬಿಎಂಬ್ಲ್ಯು ಎಂ3, ಎಂ4, ಎಂ5 ಮತ್ತು ಎಂ6 ಗ್ರ್ಯಾನ್ ಕೂಪೆ ಮಾದರಿಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದು, ಈ ಸಾಲಿಗೀಗ ಎಕ್ಸ್5ಎಂ ಮತ್ತು ಎಕ್ಸ್6ಎಂ ಸೇರ್ಪಡೆಗೊಂಡಿದೆ.

ಎಂಜಿನ್ ತಾಂತ್ರಿಕತೆ
ನೂತನ ಬಿಎಂಡಬ್ಲ್ಯು ಎಕ್ಸ್5ಎಂ ಮತ್ತು ಎಕ್ಸ್6ಎಂ ಮಾದರಿಗಳು 4.4 ಲೀಟರ್ ಟ್ವಿನ್ ಟರ್ಬೊ, ವಿ8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 750 ಎನ್ಎಂ ತಿರುಗುಬಲದಲ್ಲಿ 575 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಎಂಟು ಸ್ಪೀಡ್ ಎಂ ಸ್ಟೆಪ್ ಟ್ರಾನಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ವೇಗವರ್ಧನೆ
4.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸಬಲ್ಲ ನೂತನ ಬಿಎಂಡಬ್ಲ್ಯು ಕಾರುಗಳು ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ವೈಶಿಷ್ಟ್ಯಗಳು
- ಪಾರ್ಕ್ ಡಿಸ್ಟಾನ್ಸ್ ಕಂಟ್ರೋಲ್,
- ಅಡಾಪ್ಟಿವ್ ಎಲ್‌ಇಡಿ ಹೆಡ್ ಲೈಟ್,
- ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್,
- ಆಟೋಮ್ಯಾಟಿಕ್ ಡಿಮ್ಮಿಂಗ್ ಓಆರ್‌ವಿಎಂ,
- ಹೆಡ್ ಲೈಟ್ ವಾಶರ್ ಸಿಸ್ಟಂ,
- ಆ್ಯಂಟಿ ಡಿಜಲ್ ಹೈ ಬೀಮ್ ಫಂಕ್ಷನ್,
- ಆಕ್ಟಿವ್ ಕಾರ್ನರಿಂಗ್ ಫಂಕ್ಷನ್

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಎಎಂಜಿ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.
ಎಂಎಲ್63, ಜಿಎಲ್63 ಎಎಂಜಿ ಎಸ್‌ಯುವಿ

ಬಿಎಂಡಬ್ಲ್ಯು ಎಕ್ಸ್5ಎಂ ಮತ್ತು ಎಕ್ಸ್6ಎಂ ದೇಶಕ್ಕೆ ಎಂಟ್ರಿ ಕೊಟ್ಟಿರುವ ಸಂಸ್ಥೆಯ ಮೊದಲ ಗರಿಷ್ಠ ನಿರ್ವಹಣೆಯ ಕ್ರೀಡಾ ಬಳಕೆಯ ವಾಹನವಾಗಿದ್ದು, ಕಂಪ್ಲೀಟ್ ಬಿಲ್ಟ್ ಯುನಿಟ್ ಮುಕಾಂತರ ಮಾರಾಟವಾಗಲಿದೆ.

ಈ ಪೈಕಿ ಬಿಎಂಡಬ್ಲ್ಯು ಎಕ್ಸ್5ಎಂ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್ ಎಂದೂ ಎಕ್ಸ್6ಎಂ ಸ್ಪೋರ್ಟ್ಸ್ ಆಕ್ಟಿವಿಟಿ ಕೂಪೆ ಎಂದೂ ಗುರುತಿಸಲ್ಪಡಲಿದೆ.


Click it and Unblock the Notifications