ಬಿಎಂಡಬ್ಲ್ಯು ಎಕ್ಸ್6 ಬಿಡುಗಡೆಗೆ ರೆಡಿ; ಏನಿದೆ ವೈಶಿಷ್ಟ್ಯ?

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ನಾಳೆ ಗುರುವಾರದಂದು (2015, ಜುಲೈ 22) ಭಾರತೀಯ ಮಾರುಕಟ್ಟೆಯಲ್ಲಿ ನೂತನ ಎಕ್ಸ್6 ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ. ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಇದು ಭಾರತ ಪ್ರವೇಶವಾಗಲಿದೆ.

ಇದರಂತೆ ಎರಡನೇ ತಲೆಮಾರಿನ ಎಕ್ಸ್6 ಕಾರನ್ನು ಸ್ವೀಕರಿಸಲು ಬಿಎಂಡಬ್ಲ್ಯು ವಾಹನ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಹಳೆಯ ಮಾದರಿಗಿಂತಲೂ 40 ಕೆ.ಜಿಗಳಷ್ಟು ಕಡಿಮೆ ಭಾರವನ್ನು ಹೊಂದಿರುವ ಬಿಎಂಡಬ್ಲ್ಯು ಎಕ್ಸ್6 ಹೆಚ್ಚು ನಿರ್ವಹಣೆ ಜೊತೆಗೆ ಅತ್ಯುತ್ತಮ ಇಂಧನ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ನೆರವಾಗಲಿದೆ.

ಬಿಎಂಡಬ್ಲ್ಯು ಎಕ್ಸ್6

ಎಂಜಿನ್ ತಾಂತ್ರಿಕತೆ
ನೂತನ ಬಿಎಂಡಬ್ಲ್ಯು ಎಕ್ಸ್6, 3.0 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಟ್ವಿನ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 313 ಅಶ್ವಶಕ್ತಿ (630 ಎನ್ಎಂ ತಿರುಗುಬಲ) ಉತ್ಪಾದಿಸಲಿದೆ. ಹಾಗೇಯ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆಯಲಿದೆ. ಇದು ಗಂಟೆಗೆ ಗರಿಷ್ಠ 240 ಕೀ.ಮೀ. ಹಾಗೂ 5.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ವೈಶಿಷ್ಟ್ಯಗಳು

  • ಎಲ್ ಇಡಿ ಹೆಡ್ ಲ್ಯಾಂಪ್,
  • ಬಿಎಂಡಬ್ಲ್ಯು ಪರಿಷ್ಕೃತ ಸಿಗ್ನೇಚರ್ ಕಿಡ್ನಿ ಗ್ರಿಲ್,
  • ದೊಡ್ಡದಾದ ಏರ್ ಡ್ಯಾಮ್,
  • ಒಳಮೈಯಲ್ಲಿ ಗುಣಮಟ್ಟದ ಮರದ ಕೆತ್ತನೆ

Article Published On: Wednesday, July 22, 2015, 11:29 [IST]
English summary
German luxury carmaker BMW is launching the second generation X6 in India tomorrow.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+