ಟಿಕಾಗೊದಲ್ಲಿ ಮಿಂಚಲಿರುವ ಟೊಯೊಟಾ ಕ್ಯಾಮ್ರಿ, ಕರೊಲ್ಲಾ ವಿಶೇಷ ಆವೃತ್ತಿ
ಈ ಬಾರಿಯ ಚಿಕಾಗೊ ಆಟೋ ಶೋಗಾಗಿ ಟೊಯೊಟಾ ವಿನೂತನ ಯೋಜನೆಗಳೊಂದಿಗೆ ಮುಂದೆ ಬಂದಿದೆ. ಅಂತೆಯೇ ಎರಡು ಜನಪ್ರಿಯ ಮಾದಿರಗಳ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಜಪಾನ್ ಮೂಲದ ಸಂಸ್ಥೆಯು ಹೊಂದಿದೆ.
ಇವುಗಳಲ್ಲಿ ಪ್ರಮುಖವಾಗಿರುವುದು ಟೊಯೊಟಾ ಕ್ಯಾಮ್ರಿ ಹಾಗೂ ಕರೊಲ್ಲಾ ವಿಶೇಷ ಆವೃತ್ತಿ. ಟೊಯೊಟಾದ ಅತ್ಯುತ್ತಮ ಮಾರಾಟದ ಮಧ್ಯಮ ಗಾತ್ರದ ಸೆಡಾನ್ ಕಾರಾಗಿರುವ ಕ್ಯಾಮ್ರಿ ಸಂಪೂರ್ಣ ಹೊಸತನವನ್ನು ಪಡೆಯಲಿದೆ.

ವಿಶೇಷವೆಂದರೆ ಕ್ಯಾಮ್ರಿ ಆವೃತ್ತಿಯು ಸೀಮಿತ 12,000 ಯುನಿಟ್‌ಗಳಷ್ಟೇ ಮಾರಾಟವಾಗಲಿದೆ. ಅಂತೆಯೇ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.
ಎಂಜಿನ್
2016 ಕ್ಯಾಮ್ರಿ ವಿಶೇಷ ಆವೃತ್ತಿಯು 2.5 ಲೀಟರ್ ಫೋರ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ.

ಇನ್ನೊಂದೆಡೆ 11ನೇ ತಲೆಮಾರಿನ ಕರೊಲ್ಲಾ ಸಹ ಹೊಸ ರೂಪ ಪಡೆಯಲಿದೆ. ಇದು ಕೂಡೂ ಸೀಮಿತ 8,000 ಯುನಿಟ್‌ಗಳಷ್ಟೇ ನಿರ್ಮಾಣವಾಗಲಿದೆ. ನಿಮ್ಮ ಮಾಹಿತಾಗಿ ಟೊಯೊಟಾ ಐಕಾನಿಕ್ ಮಾದರಿಗಳಲ್ಲಿ ಒಂದಾಗಿರುವ ಕ್ಯಾಮ್ರಿ 1966ನೇ ಇಸವಿಯಿಂದಲೇ ಮಾರಾಟದಲ್ಲಿದ್ದು, ಇದುವರೆಗೆ 40 ಮಿಲಿಯಿನ್ ಯುನಿಟ್‌ಗಳಷ್ಟು ಮಾರಾಟ ಕಂಡಿದೆ.


Click it and Unblock the Notifications








