ಒನ್ ಟೈಮ್ ಪಾರ್ಕಿಂಗ್ ಶುಲ್ಕ; ದೆಹಲಿಯಲ್ಲೂ ದುಬಾರಿಯಾಗಲಿದೆ ಕಾರು

By Nagaraja

ಇನ್ನು ಮುಂದೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಕಾರು ಖರೀದಿ ತ್ರಾಸದಾಯಕವಾಗಲಿದೆ. ಯಾಕೆಂದರೆ ಉತ್ತರ ದೆಹಲಿ ಮುನಿಸಿಪಲ್ ಕಾರ್ಪೋರೇಶನ್ ಒನ್ ಟೈಮ್ ಪಾರ್ಕಿಂಗ್ ಶುಲ್ಕ ಮತ್ತಷ್ಟು ದುಬಾರಿ ಮಾಡುವ ಇರಾದೆಯಲ್ಲಿದೆ.

Also Read: ಪ್ರಪಂಚದ ಅತಿದೊಡ್ಡ ರೊಬೊಟಿಕ್ ಪಾರ್ಕಿಂಗ್ ಟವರ್

ಕಡಿಮೆ ತೆರಿಗೆ ರಚನೆಯನ್ನು ಹೊಂದಿರುವ ಕೇಂದ್ರಡಾಳಿತ ದೆಹಲಿಯಲ್ಲಿ ವಾಹಗಳು ಅತಿ ಹೆಚ್ಚು ಮಾರಾಟವಾಗುತ್ತಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ದುಸ್ತರವಾಗಿದೆಯೆಂದರೆ ಒಂದೇ ಮನೆಯಲ್ಲೇ ನಾಲ್ಕೈದು ಕಾರುಗಳಿವೆ. ಇದರಿಂದಾಗಿ ಸಾರ್ವಜನಿಕ ಪಾರ್ಕಿಂಗ್ ಪ್ರದೇಶಕ್ಕೆ ತೊಂದರೆಯಾಗುತ್ತಿದ್ದು, ವಾಹನ ದಟ್ಟಣೆ ನಿರಂತರ ಜಾಸ್ತಿಯಾಗುತ್ತಲೇ ಇದೆ.

ಒನ್ ಟೈಮ್ ಪಾರ್ಕಿಂಗ್ ಶುಲ್ಕ; ದೆಹಲಿಯಲ್ಲೂ ದುಬಾರಿಯಾಗಲಿದೆ ಕಾರು

ಈ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಿರುವ ದೆಹಲಿ ನಗರಸಭೆ ವಾಹನಗಳ ಮೇಲೆ ಒನ್ ಟೈಮ್ ಪಾರ್ಕಿಂಗ್ ಫೀ ವಿಧಿಸಲಿದೆ. ಈ ಮೂಲಕ ನೂತನ ವಾಹನ ಖರೀದಿಗಾರರ ಪ್ರಮಾಣವನ್ನು ಇಳಿಕೆ ಮಾಡುವ ಇರಾದೆಯಲ್ಲಿದೆ. ಅಲ್ಲದೆ ಇಲ್ಲಿ ಸಂಗ್ರಹವಾಗುವ ನಿಧಿಯನ್ನು ಸಾರ್ವಜನಿಕ ಪಾರ್ಕಿಂಗ್ ಸೌಕರ್ಯಕ್ಕಾಗಿ ವಿನಿಯೋಗಿಸಲಾಗುವುದು.

ಒನ್ ಟೈಮ್ ಪಾರ್ಕಿಂಗ್ ಶುಲ್ಕ; ದೆಹಲಿಯಲ್ಲೂ ದುಬಾರಿಯಾಗಲಿದೆ ಕಾರು

ಹೊಸ ನಿಯಮ ಜಾರಿಯಾಗಲಿರುವಂತೆಯೇ ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳ ಮೇಲೆ ನೇರ ಪ್ರಭಾವ ಬೀರಲಿದೆ. ಪ್ರಸ್ತುತ ಕಮರ್ಷಿಯಲ್ ವಾಹನ, ಆಟೋ ರಿಕ್ಷ ಹಾಗೂ ಬಸ್ಸುಗಳಿಗೆ ವಾರ್ಷಿಕ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದ್ದು, ಖಾಸಗಿ ಕಾರು ಹಾಗೂ ಬೈಕ್ ಮೇಲೆ ಒನ್ ಟೈಮ್ ಪಾರ್ಕಿಂಗ್ ಶುಲ್ಕ ಹೇರಲಾಗುವುದು.

ಒನ್ ಟೈಮ್ ಪಾರ್ಕಿಂಗ್ ಶುಲ್ಕ; ದೆಹಲಿಯಲ್ಲೂ ದುಬಾರಿಯಾಗಲಿದೆ ಕಾರು

ಒನ್ ಟೈಮ್ ಪಾರ್ಕಿಂಗ್ ಶುಲ್ಕವು ಗ್ರಾಹಕರು ಖರೀದಿಸುವ ವಾಹನಗಳ ಬೆಲೆ ಹಾಗೂ ಮಾದರಿಗಳ ಮೇಲೆ ಅವಲಂಬಿತವಾಗಿರಲಿದೆ. 60,000 ರು.ಗಳೊಳಗಿನ ದ್ವಿಚಕ್ರ ವಾಹನ ಖರೀದಿಸಿದ್ದಲ್ಲಿ ಸಾವಿರ ರುಪಾಯಿ ಒನ್ ಟೈಮ್ ಪಾರ್ಕಿಂಗ್ ಶುಲ್ಕ ವಿಧಿಸಲಾಗುವುದು.

ಒನ್ ಟೈಮ್ ಪಾರ್ಕಿಂಗ್ ಶುಲ್ಕ; ದೆಹಲಿಯಲ್ಲೂ ದುಬಾರಿಯಾಗಲಿದೆ ಕಾರು

ಅದೇ ವೇಳೆ 60,000 ರು.ಗಿಂತಲೂ ಮೇಲ್ಪಟ್ಟ ದ್ವಿಚಕ್ರ ವಾಹನಗಳ ಮೇಲೆ ಶೇಕಡಾ ಎರಡರಷ್ಟು ಒಂದು ಬಾರಿಯ ಪಾರ್ಕಿಂಗ್ ಶುಲ್ಕ ವಿಧಿಸಲಾಗುವುದು. ಈ ಸಂಬಂಧ ಸಮಗ್ರ ಪಟ್ಟಿಯನ್ನು ಮುಂದಿನ ಸ್ಲೈಡರ್ ಮುಖಾಂತರ ಕೊಡಲಾಗುವುದು. ಇದಕ್ಕಾಗಿ ಮುಂದಕ್ಕೆ ಕ್ಲಿಕ್ಕಿಸುತ್ತಾ ಸಾಗಿರಿ.

ಒನ್ ಟೈಮ್ ಪಾರ್ಕಿಂಗ್ ಶುಲ್ಕ: ದ್ವಿಚಕ್ರ ವಾಹನ

ಒನ್ ಟೈಮ್ ಪಾರ್ಕಿಂಗ್ ಶುಲ್ಕ: ದ್ವಿಚಕ್ರ ವಾಹನ

60,000 ರು.ಗಳ ವರೆಗೆ: 1,000 ರು.

60,000 ರು.ಗಳಿಂತ ಮೇಲೆ: ವಾಹನ ಬೆಲೆಯ ಶೇಕಡಾ 2ರಷ್ಟು

ಒನ್ ಟೈಮ್ ಪಾರ್ಕಿಂಗ್ ಶುಲ್ಕ; ದೆಹಲಿಯಲ್ಲೂ ದುಬಾರಿಯಾಗಲಿದೆ ಕಾರು

4 ಲಕ್ಷ ರು.ಗಳ ವರೆಗೆ: 8,000 ರು. (ಈಗ 2,000 ರು. ಮಾಡಲಾಗುತ್ತಿದೆ)

4 ಲಕ್ಷ ರು.ಗಳಿಂದ 6 ಲಕ್ಷ ರು. ಗಳ ವರೆಗೆ: ವಾಹನ ಬೆಲೆಯ ಶೇಕಡಾ 4 (ಅಂದರೆ 16,000 ರು.)

8 ಲಕ್ಷ ರು.ಗಳಿಂದ 12 ಲಕ್ಷ ರು. ಗಳ ವರೆಗೆ: ವಾಹನ ಬೆಲೆಯ ಶೇಕಡಾ 6 (ಅಂದರೆ 48,000 ರು.)

12 ಲಕ್ಷ ರು.ಗಳಿಂದ 20 ಲಕ್ಷ ರು. ಗಳ ವರೆಗೆ: ವಾಹನ ಬೆಲೆಯ ಶೇಕಡಾ 8 (ಅಂದರೆ 96,000 ರು.)

40 ಲಕ್ಷ ರು.ಗಿಂತಲೂ ಮೇಲ್ಪಟ್ಟ ಕಾರುಗಳಿಗೆ ಶೇಕಡಾ 15ರಷ್ಟು ಶುಲ್ಕ (ಅಂದರೆ 6 ಲಕ್ಷ ರು.)

ವಿ.ಸೂ: ಈಗ ಚಾಲ್ತಿಯಲ್ಲಿರುವಂತೆಯೇ ನಾಲ್ಕು ಲಕ್ಷ ರು.ಗಿಂತಲೂ ಮೇಲ್ಪಟ್ಟ ಕಾರುಗಳಿಗೆ 4,000 ರು.ಗಳ ಶುಲ್ಕ ವಿಧಿಸಲಾಗುತ್ತಿದೆ.

ಒನ್ ಟೈಮ್ ಪಾರ್ಕಿಂಗ್ ಶುಲ್ಕ: ವಾಣಿಜ್ಯ ವಾಹನಗಳು

ಒನ್ ಟೈಮ್ ಪಾರ್ಕಿಂಗ್ ಶುಲ್ಕ: ವಾಣಿಜ್ಯ ವಾಹನಗಳು

ಬಸ್: 32,000 ರು. (ಪ್ರಸ್ತುತ ಶುಲ್ಕ 4,000 ರು.)

ಆಟೋ ರಿಕ್ಷಾಗಳಿಗೆ ವಾರ್ಷಿಕ 2,000 ರು.

ಒನ್ ಟೈಮ್ ಪಾರ್ಕಿಂಗ್ ಶುಲ್ಕ; ದೆಹಲಿಯಲ್ಲೂ ದುಬಾರಿಯಾಗಲಿದೆ ಕಾರು

ಜಗತ್ತಿನ ಮೊದಲ ಚಾಲಕ ರಹಿತ ಬಸ್ ಇದೇನಾ ?

More from DriveSpark

Article Published On: Saturday, November 7, 2015, 16:15 [IST]
English summary
Official: Cars To Get Costlier In New Delhi With One-Time Parking Fees
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+