ಬಿಎಂಡಬ್ಲ್ಯು ಎಂ5 ಆಲ್ ವೀಲ್ ಡ್ರೈವ್ ಖಚಿತ
ಗರಿಷ್ಠ ನಿರ್ವಹಣೆಯ ಆಡಿ ಆರ್‌ಎಸ್ ಮಾಜಿ ಬಾಸ್ ಆಗಿರುವ ಫ್ರಾನ್ಸಿಸ್ಕಸ್ ವ್ಯಾನ್ ಮೀಲ್ ಈಗ ಬಿಎಂಡಬ್ಲ್ಯು ಎಂ ಕಾರುಗಳ ನೇತೃತ್ವವನ್ನು ವಹಿಸಿದ್ದು, 2015 ಡೆಟ್ರಾಯ್ಟ್ ಆಟೋ ಶೋದಲ್ಲಿ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ, ನಿಕಟ ಭವಿಷ್ಯದಲ್ಲೇ ಬಿಎಂಡಬ್ಲ್ಯು ಎಂ5 ಆಲ್ ವೀಲ್ ಡ್ರೈವ್ ಆಗಮನವಾಗುವುದು ಖಚಿತ ಎಂದಿದ್ದಾರೆ.
"ಭವಿಷ್ಯದಲ್ಲಿ ಶಕ್ತಿ ಹೆಚ್ಚಿಸುವುದು ನಮ್ಮ ಇರಾದೆಯಾಗಿದೆ. ವಿಶೇಷವಾಗಿಯೂ ಎಂ ಹಾಗೂ ಮುಂದಿನ ಜನಾಂಗದ ಎಂ5 ಮಾದರಿಗಳಲ್ಲಿ ಟಾರ್ಕ್ ಹಾಗೂ ಅಶ್ವಶಕ್ತಿ ಹೆಚ್ಚಿಸಲು ಬದ್ದವಾಗಿದ್ದೇವೆ" ಎಂದಿದ್ದಾರೆ.

"ನಾನಿಲ್ಲಿ ಫೋರ್ ವೀಲ್ ಡ್ರೈವ್ ಎಂದು ಹೇಳಲು ಇಚ್ಛಿಸುವುದಿಲ್ಲ. ಏಕೆಂದರೆ ಭಾವನಾತ್ಮಕವಾಗಿ ಇದು ನೇರ ಚಾಲನೆಗೆ ಹೊಂದಿಕೊಂಡಿರುತ್ತದೆ" ಎಂದಿದ್ದಾರೆ.
ಅಂದ ಹಾಗೆ ಬಿಎಂಡಬ್ಲ್ಯು ಎಂ5 ಹಾಗೂ ಎಂ6 ಮಾದರಿಗಳು ಆಲ್ ವೀಲ್ ಡ್ರೈವ್ ಸಿಸ್ಟಂ ಹೊಂದಿರುವ ಮುಂಚೂಣಿಯ ವಾಹನಗಳಲ್ಲಿ ಗುರುತಿಸಿಕೊಳ್ಳಲಿದೆ. ಇನ್ನು 2018ರ ವೇಳೆಯಲ್ಲಿ ನೆಕ್ಸ್ಟ್ ಜನರೇಷನ್ ಎಂ5 ಬಿಡುಗಡೆಯಾಗುವ ಸಾಧ್ಯತೆಯಿದೆ.
ಬಿಎಂಡಬ್ಲ್ಯು ಎಂ5 ಪವರ್ ಶೋ ವೀಡಿಯೋ ವೀಕ್ಷಿಸಿ


Click it and Unblock the Notifications








