ಆಡಿಯಿಂದ ನಿರ್ಮಾಣವಾಗುತ್ತಿದೆ ಎಲೆಕ್ಟ್ರಿಕ್ ಎಸ್‌ಯುವಿ
ಜಗತ್ತಿನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ ನೂತನ ಎಲೆಕ್ಟ್ರಿಕ್ ಕ್ರೀಡಾ ಬಳಕೆಯ ವಾಹನದ ಅಭಿವೃದ್ಧಿಯಲ್ಲಿ ತೊಡಗಿದೆ. ಈ ಮೂಲಕ ಬದಲಾಗುತ್ತಿರುವ ವಾಹನ ಜಗತ್ತಿನ ಸಾಲಿನಲ್ಲಿ ತಾವು ಇದ್ದೇವೆ ಎಂಬುದನ್ನು ಖಾತ್ರಿಪಡಿಸಿದೆ.
ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ 2015 ಜಿನೆವಾ ಮೋಟಾರು ಶೋದಲ್ಲಿ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಆಡಿ ಇದನ್ನು ಖಚಿತಪಡಿಸಿದ್ದಲ್ಲದೆ ಈ ಸಂಬಂಧ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿದೆ.

ಆಡಿ ಕನಸು ನನಸಾದ್ದಲ್ಲಿ ಟೆಸ್ಲಾದಂತಹ ಪರಿಪೂರ್ಣ ಎಲೆಕ್ಟ್ರಿಕ್ ವಾಹನ ತಯಾರಿಕ ಸಂಸ್ಥೆಗಳಿಗೆ ಪೈಪೋಟಿ ಒಡ್ಡಲಿದೆ.
ಆಡಿ ವಿದ್ಯುತ್ ಚಾಲಿತ ಕ್ರೀಡಾ ಬಳಕೆಯ ವಾಹನವು ಅತ್ಯಧಿಕ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರು ಪಡೆಯಲಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 50 ವ್ಯಾಪ್ತಿಯ ವರೆಗೂ ಚಲಿಸಲಿದೆ.
ಅಷ್ಟೇ ಅಲ್ಲದೆ ಟಕ್ಯೂ ಇ-ಟ್ರಾನ್' ಎಂದು ಆಡಿ ಇದನ್ನು ಗುರುತಿಸಿಕೊಂಡಿದೆ. ಒಟ್ಟಿನಲ್ಲಿ ಆಡಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಯಾವಾಗ ನನಸಾಗಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.


Click it and Unblock the Notifications








