ಫೋರ್ಡ್ ಫಿಗೊ: ದೇಶದ ಪವರ್‌ಫುಲ್ ಹ್ಯಾಚ್‌ಬ್ಯಾಕ್

By Nagaraja

ದೇಶದ ಶಕ್ತಿಶಾಲಿ ಹ್ಯಾಚ್ ಬ್ಯಾಕ್ ಕಾರುಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿರುವ ಅತಿ ನೂತನ ಫೋರ್ಡ್ ಫಿಗೊ 2015 ಸೆಪ್ಟಂಬರ್ 23ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವಾಹನೋದ್ಯಮದ ನಿಕಟ ಮೂಲಗಳು ತಿಳಿಸಿವೆ.

ಬಲ್ಲ ಮೂಲಗಳ ಪ್ರಕಾರ ಹೊಸ ತಲೆಮಾರಿನ ಫೋರ್ಡ್ ಫಿಗೊ ಕಾರಿನಲ್ಲಿ ಬಳಕೆಯಾಗಲಿರುವ ಶಕ್ತಿಶಾಲಿ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ 100 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದ್ದು, ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ವಾಹನ ಪ್ರೇಮಿಗಳಿಗೆ ಪರಿಪೂರ್ಣ ಚಾಲನಾ ಅನುಭವ ನೀಡಲಿದೆ.

ಫೋರ್ಡ್ ಫಿಗೊ: ದೇಶದ ಪವರ್‌ಫುಲ್ ಹ್ಯಾಚ್‌ಬ್ಯಾಕ್

ಫೋರ್ಡ್ ಫಿಗೊದಲ್ಲಿರುವ ಮತ್ತಷ್ಟು ಶಕ್ತಿಶಾಲಿ 1.5 ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಎಂಜಿನ್ 136 ಎನ್‌ಎಂ ತಿರುಗುಬಲದಲ್ಲಿ 112 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ.

ಫೋರ್ಡ್ ಫಿಗೊ: ದೇಶದ ಪವರ್‌ಫುಲ್ ಹ್ಯಾಚ್‌ಬ್ಯಾಕ್

ಬ್ರೆಜಿಲ್‌ನಲ್ಲಿ ಕಾ (KA) ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿರುವ ನೂತನ ಫೋರ್ಡ್ ಫಿಗೊ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಫೋರ್ಡ್‌ನ ಸಿಂಕ್ ಮಲ್ಟಿಮೀಡಿಯಾ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಸ್ರಿಬ್ಯೂಷನ್ (ಇಬಿಡಿ) ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ.

ಫೋರ್ಡ್ ಫಿಗೊ: ದೇಶದ ಪವರ್‌ಫುಲ್ ಹ್ಯಾಚ್‌ಬ್ಯಾಕ್

ಅಂದ ಹಾಗೆ 2015 ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರು ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಗ್ರಾಂಡ್ ಐ10 ಹಾಗೂ ಟಾಟಾ ಬೋಲ್ಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಫೋರ್ಡ್ ಫಿಗೊ: ದೇಶದ ಪವರ್‌ಫುಲ್ ಹ್ಯಾಚ್‌ಬ್ಯಾಕ್

ಇನ್ನು ಬೆಲೆಯ ಬಗ್ಗೆ ಮಾತನಾಡುವುದಾದ್ದಲ್ಲಿ ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಫೋರ್ಡ್ ಫಿಗೊ: ದೇಶದ ಪವರ್‌ಫುಲ್ ಹ್ಯಾಚ್‌ಬ್ಯಾಕ್

ಒಟ್ಟಿನಲ್ಲಿ ನೂತನ ಫೋರ್ಡ್ ಫಿಗೊ ಮಾರುಕಟ್ಟೆಯಲ್ಲಿ ತಾಜಾತನಕ್ಕೆ ಕಾರಣವಾಗಲಿದ್ದು, ನಿಕಟ ಪೈಪೋಟಿಯನ್ನು ನೀಡುವುದಂತೂ ಗ್ಯಾರಂಟಿ.

More from DriveSpark

Article Published On: Tuesday, September 22, 2015, 11:46 [IST]
English summary
Ford New Figo Hatchback To Launch In India On 23rd Of September
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+