2015 ಜಿನೆವಾ ಮೋಟಾರು ಶೋಗಾಗಿ ಸಾಲು ಗಟ್ಟಿ ನಿಂತ ಬಿಎಂಡಬ್ಲ್ಯು ಕಾರುಗಳು
ಬಹುನಿರೀಕ್ಷಿತ 2015 ಜಿನೆವಾ ಮೋಟಾರು ಶೋ ಹತ್ತಿರವಾಗುತ್ತಿದ್ದಂತೆಯೇ ಜಗತ್ತಿನ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ತಮ್ಮ ತಮ್ಮ ಹೊಸ ಹೊಸ ಕಾರುಗಳೊಂದಿಗೆ ಸಾಲು ಗಟ್ಟಿ ನಿಂತಿದೆ.
ಇವುಗಳ ಪೈಕಿ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಹೊಸ ಹುಮ್ಮಸಿನೊಂದಿಗೆ 2015 ಜಿನೆವಾ ಮೋಟಾರು ಶೋ ಅನ್ನು ಬರ ಮಾಡಿಕೊಳ್ಳುತ್ತಿದೆ.
ಸ್ವಿಜರ್ಲೆಂಡ್ ಜೊತೆಗೆ ಇಡೀ ವಿಶ್ವದ ಹಬ್ಬವಾಗಿರುವ 2015 ಜಿನೆವಾ ಮೋಟಾರು ಶೋದಲ್ಲಿ ಬಿಎಂಡಬ್ಲ್ಯು ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಇದನ್ನು ಈಡೇರಿಸುವಲ್ಲಿ ಸಂಸ್ಥೆಯು ಬದ್ಧತೆಯನ್ನು ಪ್ರದರ್ಶಿಸಿದೆ.

ಜಿನೆವಾದಲ್ಲಿ ಬಿಎಂಡಬ್ಲ್ಯು ಸಾರಥ್ಯ ಇಂತಿದೆ:
ಬಿಎಂಡಬ್ಲ್ಯು 1 ಸಿರೀಸ್
ವೈಶಿಷ್ಟ್ಯಗಳು
- ಕ್ರೀಡಾತ್ಮಕ ವಿನ್ಯಾಸ,
- ಪರಿಷ್ಕೃತ ಮುಂಭಾಗ ಹಾಗೂ ಹಿಂದುಗಡೆಯ ವಿನ್ಯಾಸ,
- ಮೂರು ಹಾಗೂ ಐದು ಬಾಗಿಲುಗಳ ಆಯ್ಕೆ,
- ಕಡಿಮೆ ಹೊಗೆ ಹೊರಸೂಸುವಿಕೆ

ಬಿಎಂಡಬ್ಲು 2 ಸಿರೀಸ್ ಗ್ರ್ಯಾನ್ ಟೂರರ್
ವೈಶಿಷ್ಟ್ಯಗಳು
- ಈ ವಿಭಾಗದಲ್ಲಿ ಹೊಸ ಕಾರು,
- ಏಳು ಪ್ರಯಾಣಿಕರಿಗೆ ಸಂಚರಿಸುವ ಅವಕಾಶ,
- ಹೆಚ್ಚಿನ ಸ್ಥಳಾವಕಾಶ,
- ಹೊಸತಾದಿ ಅಭಿವೃದ್ಧಿಪಡಿಸಿದ ಐದು ಹೊಸ ಟರ್ಬೊ ಚಾರ್ಜ್ಡ್ ಎಂಜಿನ್ (116ರಿಂದ 192 ಅಶ್ವಶಕ್ತಿ),
- ಬಿಎಂಡಬ್ಲ್ಯು ಡೈನಾಮಿಕ್ ಪ್ಯಾಕೇಜ್,
- ಕಡಿಮೆ ಹೊಗೆ ಹೊರಸೂಸುವಿಕೆ

ವೈಶಿಷ್ಟ್ಯಗಳು
- 2015 ಜಿಪಿ ಆವೃತ್ತಿಯಲ್ಲಿ ಕಂಡುಬರಲಿರುವ ಅತ್ಯಂತ ಸುರಕ್ಷಿತ ಕಾರು,
- ನಿರ್ವಹಣೆ ವೃದ್ಧಿಗಾಗಿ ನಾವೀನ್ಯತೆಯ ನೀರಿನ ಇಂಜೆಕ್ಷನ್ ವ್ಯವಸ್ಥೆ


Click it and Unblock the Notifications








