ನಿಮ್ಮನ್ನು ಬೆರಗುಗೊಳಿಸುವ ಬೆಂಝ್ ಮೇಬ್ಯಾಕ್ ಪುಲ್ ಮ್ಯಾನ್ ಲಿಮೊ
ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಬಹುನಿರೀಕ್ಷಿತ ಜಿನೆವಾ ಮೋಟಾರು ಶೋದಲ್ಲಿ ನೂತನ ಮೇಬ್ಯಾಕ್ ಫುಲ್ ಮ್ಯಾನ್ ಅನಾವರಣಗೊಳಿಸಲಿದೆ. ಇದಕ್ಕೂ ಮುಂಚಿತವಾಗಿ ಬೆಂಝ್ ಸಂಸ್ಥೆಯು ಈ ಶಕ್ತಿಶಾಲಿ ಲಿಮೊ ಕಾರಿನ ಬಗೆಗಿನ ವಿವರಗಳನ್ನು ಬಹಿರಂಗಗೊಳಿಸಿದೆ.
ಇದು ಮರ್ಸಿಡಿಸ್ ಮೇಬ್ಯಾಕ್‌ನ ಎರಡನೇ ಲಿಮೊಸಿನ್ ಮಾದರಿಯಾಗಿರಲಿದೆ. ಅಲ್ಲದೆ ಮರ್ಸಿಡಿಸ್ ಮೇಬ್ಯಾಕ್ ಎಸ್ ಕ್ಲಾಸ್ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ನೂತನ ಮರ್ಸಿಡಿಸ್ ಮೇಬ್ಯಾಕ್ ಪುಲ್ ಮ್ಯಾನ್ ಕ್ಲಬ್ ಲಾಂಜ್ ಒಳಮೈಯನ್ನು ಪಡೆದುಕೊಂಡಿದೆ. ಇದರಲ್ಲಿ ಹೆಚ್ಚಿನ ಲೆಗ್ ಜೊತೆಗೆ ಹೆಡ್ ರೂಂ ಕಲ್ಪಿಸಲಾಗಿದೆ.
ವಿಐಪಿ ವ್ಯಕ್ತಿಗಳಿಗೆ ಆರಾಮದಾಯಕ ಪಯಣಕ್ಕೆ ಒತ್ತು ಕೊಡಲಾಗಿದೆ. ಇದು ಎಲ್ಲ ಹಂತದಲ್ಲೂ ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡಲಿದೆ.

ಇಲ್ಲಿ ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸೀಟುಗಳನ್ನು ಹಿಂದೆ ಹಾಗೂ ಮುಂದಕ್ಕೆ ಬಾಗಿಸಬಹುದಾಗಿದೆ. ಅಲ್ಲದೆ ಇದು ಫೇಸ್ ಟು ಫೇಸ್ ಸಿಟ್ಟಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಇದು ಉದ್ಯಮಗಳಿಗೆ ಕಾರಿನೊಳಗೆ ಕುಳಿತುಕೊಂಡು ಚರ್ಚೆಯಲ್ಲಿ ಭಾಗವಹಿಸಲು ನೆರವಾಗಲಿದೆ.
ಕಾರಿನೊಳಗೆ ಲೆಥರ್ ಸ್ಪರ್ಶವನ್ನು ಕಾಣಬಹುದಾಗಿದೆ. ಅಂತೆಯೇ 18.5 ಇಂಚಿನ್ ಪರದೆ, ಬರ್ಮ್‌ಸ್ಟೆರ್ 3ಡಿ ಸೌರಂಡ್ ಸೌಂಡ್ ಸಿಸ್ಟಂಗಳು ನಿಜಕ್ಕೂ ಐಷಾರಾಮಿ ಅನುಭವ ನೀಡಲಿದೆ.

ಒಟ್ಟಿನಲ್ಲಿ ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಪುಲ್ ಮ್ಯಾನ್ ಎಸ್ 600 ಮಾದರಿಯು 6.0 ಲೀಟರ್ ವಿ12 ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 830 ತಿರುಗುಬಲದಲ್ಲಿ 530 ಅಶ್ವಶಕ್ತಿ ಉತ್ಪಾದಿಸಲಿದೆ. ಈ ಆಕರ್ಷಕ ಕಾರಿನ ವಿತರಣೆಯು 2016ರಿಂದ ಆರಂಭವಾಗಲಿದೆ.


Click it and Unblock the Notifications








