ಟಾಟಾ ನಿರ್ಮಿಸುತ್ತಿದೆಯೇ ಬೋಲ್ಟ್ ಪವರ್‌ಫುಲ್ ವರ್ಷನ್?

By Nagaraja

ಹೌದು, ಹಾಗೊಂದು ಪ್ರಶ್ನೆ ನಮ್ಮಲ್ಲೂ ಬಹಳ ಕುತೂಹಲಕ್ಕೆಡೆ ಮಾಡಿದೆ. ಇತ್ತೀಚೆಗಿನ ಬೆಳವಣಿಗೆಯು ಇದಕ್ಕೆ ಪುಷ್ಠ ನೀಡುವಂತಿದೆ. ಏಕೆಂದರೆ ಜಿನೆವಾದಲ್ಲಿ ನಡೆಯುತ್ತಿರುವ 2015 ಮೋಟಾರು ಶೋದಲ್ಲಿ ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನ ಪವರ್‌ಫುಲ್ ವರ್ಷನ್ ಪ್ರದರ್ಶನಗೊಳಿಸಿದೆ.

ಬೋಲ್ಟ್ ಸ್ಪೋರ್ಟ್ ಎಂಬ ಹೆಸರಿನಿಂದ ಅರಿಯಲ್ಪಡುವ ಹೊಸ ಮಾದರಿಯು ಜಿನೆವಾದಲ್ಲಿ ಸೇರಿರುವ ವಾಹನ ಪ್ರೇಮಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದು ಪ್ರಸಕ್ತ ವರ್ಷಾಂತ್ಯದಲ್ಲೇ ಭಾರತಕ್ಕೆ ತಲುಪಲಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

tata bolt

ಟಾಟಾ ಬೋಲ್ಟ್ ಸ್ಪೋರ್ಟ್ ಮಾದರಿಯಲ್ಲಿ ಶಕ್ತಿಶಾಲಿ 1.2 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಇದು 170 ತಿರುಗುಬಲದಲ್ಲಿ 120 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಈ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಕಾರಿನಲ್ಲಿ ಇಕೊ, ಸಿಟಿ ಹಾಗೂ ಸ್ಪೋರ್ಟ್‌ಗಳೆಂಬ ಮೂರು ಚಾಲನಾ ಮೋಡ್‌ಗಳನ್ನು ಕಾಯ್ದುಕೊಳ್ಳಲಿದೆ. ಟಾಟಾದ ಹೊರಿಝೋನೆಕ್ಸ್ಟ್ ಸಿದ್ಧಾಂತದಲ್ಲಿ ನಿರ್ಮಾಣಗೊಂಡಿರುವ ಬೋಲ್ಟ್ ಈಗಾಗಲೇ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.

tata bolt

ಇನ್ನು ಬೋಲ್ಟ್ ಕ್ರೀಡಾ ವರ್ಷನ್‌ನಲ್ಲಿ 17 ಇಂಚಿನ ಅಲಾಯ್ ವೀಲ್, ಫ್ರಂಟ್ ಗ್ರಿಲ್, ಬಂಪರ್, ರಿಯರ್ ಬಂಪರ್ ಹಾಗೂ ಕಾರಿನೊಳಗೆ ಲೆಥರ್ ಹೋದಿಕೆಯನ್ನು ಕಾಣಬಹುದಾಗಿದೆ. ಅಂತೆಯೇ ಟಚ್ ಸ್ಕ್ರೀನ್ ಹರ್ಮಾನ್ ಮಾಹಿತಿ ಮನರಂಜನಾ ವ್ಯವಸ್ಥೆ ಕೂಡಾ ಇರಲಿದೆ.

ಅಷ್ಟೇ ಯಾಕೆ ಸನ್ ರೂಫ್ ಸಹ ಹೊಸ ಬೋಲ್ಟ್ ಸ್ಪೋರ್ಟ್ ಕಾರಿನ ವೈಶಿಷ್ಟ್ಯವಾಗಿದೆ. ಅಂತಿಮವಾಗಿ ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ವೇಗ ಗ್ರಹಿಕೆಯ ಆಡಿಯೋ ಕಂಟ್ರೋಲ್ ಮುಂತಾದ ವ್ಯವಸ್ಥೆಗಳು ಇರಲಿದೆ.

More from DriveSpark

Article Published On: Saturday, March 7, 2015, 16:22 [IST]
English summary
The 2015 Geneva Motor Show witnessed participation by Indian automobile giant, Tata Motors. It showcased it all-new hatchback the Bolt in a sporty avatar. The Indian manufacturer displayed its Bolt Sport model with significant updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+