ಮುಂದಿನ ವರ್ಷಾರಂಭದಲ್ಲಿ ಹೋಂಡಾ ಮಿನಿ ಎಸ್‌ಯುವಿ ಬಿಡುಗಡೆ ಸಾಧ್ಯತೆ

Written By:

ಈಗಷ್ಟೇ ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ಯಶಸ್ವಿ ಬಿಡುಗಡೆಯ ಬಳಿಕ ಭವಿಷ್ಯದ ಯೋಜನೆಯತ್ತ ದಿಟ್ಟ ಹೆಜ್ಜೆಯನ್ನಿಡುತ್ತಿರುವ ಜಪಾನ್ ಮೂಲದ ಹೋಂಡಾ ಸಂಸ್ಥೆಯು ಮಗದೊಂದು ಆಕರ್ಷಕ ಕಾರನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಸಣ್ಣ ಕ್ರೀಡಾ ಬಳಕೆಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇದನ್ನೇ ಗುರಿಯಾಗಿರಿಸಿರುವ ಹೋಂಡಾ, ನೂತನ ಬಿಆರ್-ವಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಹೋಂಡಾ ಬಿಆರ್ ವಿ

ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದು, ಬಿಡುಗಡೆಯಾದ ಮೊದಲ ತಿಂಗಳಲ್ಲೇ 6,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಮೋಡಿ ಮಾಡಿದೆ.

ಈಗ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲೂ ಇದೇ ಯಶಸ್ಸಿನ ಓಟವನ್ನು ಮುಂದುವರಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ನಿಮ್ಮ ಮಾಹಿತಿಗಾಗಿ ಬ್ರಿಯೊ ತಳಹದಿಯಲ್ಲಿ ನೂತನ ಹೋಂಡಾ ಬಿಆರ್-ವಿ ಅಭಿವೃದ್ಧಿಯಾಗಲಿದೆ. ಇದೇ ಫ್ಲ್ಯಾಟ್ ಫಾರ್ಮ್ ನಲ್ಲಿ ಅಮೇಜ್ ಹಾಗೂ ಮೊಬಿಲಿಯೊ ನಿರ್ಮಾಣವಾಗಿತ್ತು ಎಂಬುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಹೋಂಡಾ ಬಿಆರ್ ವಿ

ಹೋಂಡಾ ಬಿಆರ್-ವಿ ಕುರಿತು ಹೇಳುವುದಾದ್ದಲ್ಲಿ ಪ್ರಸ್ತುತ ಕಾರು 2015 ಇಂಡೋನೇಷ್ಯಾ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿದೆ. ಇದು ಆಗಸ್ಟ್ 20ರಿಂದ 30ರ ವರೆಗೆ ನಡೆಯಲಿದೆ.

ಹೊಸ ಹೋಂಡಾ ಬಿಆರ್‌ವಿ ಎಸ್‌ಯುವಿ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಆರು ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ. ಇವೆಲ್ಲವೂ ಗ್ರಾಹಕರಿಗೆ ಅದ್ಬುತ ಚಾಲನಾ ಅನುಭವ ನೀಡುವಲ್ಲಿ ನೆರವಾಗಲಿದೆ.

ಅಂದ ಹಾಗೆ ಹೋಂಡಾ ಬಿಆರ್-ವಿ ಭಾರತದಲ್ಲಿ 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಅಥವಾ ಅನಾವರಣವಾಗುವ ಸಾಧ್ಯತೆಯಿದೆ. ಈ ಬಗ್ಗೆ ಸಂಸ್ಥೆಯಿಂದ ಇನ್ನಷ್ಟೇ ಖಚಿತ ಮಾಹಿತಿಗಳು ಲಭ್ಯವಾಗಬೇಕಾಗಿದೆ.

ಒಟ್ಟಿನಲ್ಲಿ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸ್ಪರ್ಧೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಜನಪ್ರಿಯ ರೆನೊ ಡಸ್ಟರ್, ನಿಸ್ಸಾನ್ ಟೆರನೊ, ಫೋರ್ಡ್ ಇಕೊಸ್ಪೋರ್ಟ್, ಹ್ಯುಂಡೈ ಕ್ರೆಟಾ, ಮಾರುತಿ ಎಸ್ ಕ್ರಾಸ್ ಮತ್ತು ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಮಹೀಂದ್ರ ಟಿಯುವಿ300 ಸವಾಲನ್ನು ಹೋಂಡಾ ಬಿಆರ್-ವಿ ಎದುರಿಸಲಿದೆ.

Read more on ಹೋಂಡಾ honda
English summary
Japanese manufacturer currently does not have a compact SUV model on offer in India. Honda is keen to bring its BR-V model to the country as soon as possible.
Story first published: Thursday, August 13, 2015, 12:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark