ಇಂಡೋನೇಷ್ಯಾದಲ್ಲಿ ಹೋಂಡಾ ಬಿಆರ್-ವಿ ಲಾಂಚ್; ನೆಕ್ಸ್ಟ್ ಭಾರತ
ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಹೋಂಡಾ, ಅತಿ ನೂತನ ಬಿಆರ್-ವಿ ಕಾರನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅಲ್ಲದೆ ಇನ್ನು ಕೆಲವೇ ಸಮಯದೊಳಗೆ ಈ ಬಹುನಿರೀಕ್ಷಿತ ಕಾರು ಭಾರತ ಪ್ರವೇಶಯವನ್ನು ಪಡೆಯಲಿದೆ.
ಈ ಹಿಂದೆ 2015 ಇಂಡೋನೇಷ್ಯಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಹೋಂಡಾ ಬಿಆರ್-ವಿ ಇಂಡೋನೇಷ್ಯಾದಲ್ಲಿ ಬಿಡುಗಡೆಗೂ ಮುನ್ನವೇ 4,000 ಯುನಿಟ್ ಗಳಷ್ಟು ಮುಗಂಡ ಬುಕ್ಕಿಂಗ್ಸ್ ಗಳನ್ನು ದಾಖಲಿಸಿಕೊಂಡಿದೆ.

ಐಕಾನಿಕ್ ಸಿಆರ್-ವಿ ಕ್ರೀಡಾ ಬಳಕೆಯ ವಾಹನದ ಕಿರಿಯ ಸೋದರ ಎಂದೇ ಪರಿಗಣಿಸಲ್ಪಡುವ ಹೋಂಡಾ ಬಿಆರ್-ವಿ 1.5 ಲೀಟರ್ ಐವಿಟೆಕ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 6 ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಇರಲಿದೆ.

ಇದರ ಪೆಟ್ರೋಲ್ ಎಂಜಿನ್ 145 ಎನ್ ಎಂ ತಿರುಗುಬಲದಲ್ಲಿ 118.31 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇನ್ನು ಭಾರತದಲ್ಲಿ 1.5 ಲೀಟರ್ ಐಡಿಟೆಕ್ ಡೀಸೆಲ್ ಎಂಜಿನ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರತಿಸ್ಪರ್ಧಿಗಳು
ಭಾರತದಲ್ಲಿ ಫೋರ್ಡ್ ಇಕೊಸ್ಪೋರ್ಟ್, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಎಸ್ ಕ್ರಾಸ್ ಮತ್ತು ರೆನೊ ಡಸ್ಟರ್ ಮಾದರಿಗಳಿಗೆ ನೂತನ ಬಿಆರ್-ವಿ ಪ್ರತಿಸ್ಪರ್ಧಿಯಾಗಲಿದೆ.

ಭಾರತದಲ್ಲಿ ಅಂದಾಜು ಬೆಲೆ
ಇನ್ನು ಭಾರತದಲ್ಲಿ ಬೇಸ್ ವೆರಿಯಂಟ್ ಎಂಟು ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ 12 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಹೋಂಡಾ ಬಿಆರ್-ವಿ ಬೆಲೆ ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ
- ಹೋಂಡಾ ಬಿಆರ್-ವಿ ಎಸ್ ಮ್ಯಾನುವಲ್ ಗೇರ್ ಬಾಕ್ಸ್: 10.93 ಲಕ್ಷ ರು.
- ಹೋಂಡಾ ಬಿಆರ್-ವಿ ಇ ಮ್ಯಾನುವಲ್ ಗೇರ್ ಬಾಕ್ಸ್: 11.42 ಲಕ್ಷ ರು.
- ಹೋಂಡಾ ಬಿಆರ್-ವಿ ಇ ಸಿವಿಟಿ: 11.90 ಲಕ್ಷ ರು.
- ಹೋಂಡಾ ಬಿಆರ್-ವಿ ಇ ಪ್ರೆಸ್ಟೀಜ್ ಸಿವಿಟಿ: 12.63 ಲಕ್ಷ ರು.
- 4455 ಎಂಎಂ ಉದ್ದ,
- 1735 ಎಂಎಂ ಅಗಲ,
- 1650 ಎಂಎಂ ಎತ್ತರ,
- 2660 ಎಂಎಂ ವೀಲ್ ಬೇಸ್,
- 201 ಎಂಎಂ ಗ್ರೌಂಡ್ ಕ್ಲಿಯರನ್ಸ್
- ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
- ಎಲ್ ಇಡಿ ಸ್ಥಾನನಿರ್ಣಯ ಲ್ಯಾಂಪ್,
- ಸಿ ಆಕಾರದ ಎಲ್ ಇಡಿ ಟೈಲ್ ಲೈಟ್ಸ್,
- 16 ಇಂಚುಗಳ ಅಲಾಯ್ ವೀಲ್
- ಎರಡು ವಿಧಗಳಲ್ಲಿ ಸೀಟುಗಳ ಆಯ್ಕೆ
- ಮೂರು ಸಾಲಿನಲ್ಲಿ ಏಳು ಸೀಟು,
- ಎರಡು ಸಾಲಿನಲ್ಲಿ ಐದು ಸೀಟು,
- ಬಹು ವಿಧದಲ್ಲಿ ಹೊಂದಾಣಿಸಬಹುದಾದ ಕ್ರಿಯಾತ್ಮಕತೆ,
- ಯುಟಿಲಿಟಿ ಜಾಗ,
- ವಿಭಜಿತ ಸೀಟು,
- ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಪರದೆ,
- ಹಿಂಭಾಗದ ಪ್ರಯಾಣಿಕರಿಗೂ ಎಸಿ ವ್ಯವಸ್ಥೆ,
- ಏರ್ ವೆಂಟ್ಸ್,
- ಡ್ಯುಯಲ್ ಎಸ್ ಆರ್ ಎಸ್ ಏರ್ ಬ್ಯಾಗ್,
- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
- ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯುಷನ್ (ಇಬಿಡಿ),
- ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ (ವಿಎಸ್‌ಎ),
- ಹಿಲ್ ಸ್ಟ್ಯಾರ್ಟ್ ಅಸಿಸ್ಟ್ (ಎಚ್‌ಎಎಸ್

ನೂನತ ಬಿಆರ್-ವಿ ಕಾರನ್ನು ಸಂಸ್ಥೆಯು 'ಆಕ್ಟಿವ್ ಸ್ಪೋರ್ಟ್ ಕ್ರಾಸೋವರ್' ಎಂದೇ ವಿಶ್ಲೇಷಿಸುತ್ತಿದೆ.

ಆಯಾಮ

ಹೊರಮೈ

ಒಳಮೈ

ವಿಶಿಷ್ಟತೆ



Click it and Unblock the Notifications