ಹೋಂಡಾ ಬಿಆರ್-ವಿ ಮೊದಲ ಮಾದರಿ ಪ್ರದರ್ಶನ

By Nagaraja

ಇಂಡೋನೇಷ್ಯಾ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಬಹುನಿರೀಕ್ಷಿತ ಹೋಂಡಾ ಬಿಆರ್-ವಿ ಮೊದಲ ಮಾದರಿ (Prototype) ಭರ್ಜರಿ ಪ್ರದರ್ಶನ ಕಂಡಿದೆ. ಇದು ನಿಕಟ ಭವಿಷ್ಯದಲ್ಲೇ ಭಾರತ ವಾಹನ ಮಾರುಕಟ್ಟೆ ಪ್ರವೇಶಿಸಲಿದೆ.

ಜನಪ್ರಿಯ ಬ್ರಿಯೊ ತಳಹದಿಯಲ್ಲಿ ನೂತನ ಬಿಆರ್-ವಿ ನಿರ್ಮಾಣವಾಗಲಿದೆ. ಇದೇ ಫ್ಲ್ಯಾಟ್ ಫಾರ್ಮ್ ನಲ್ಲಿ ಹೋಂಡಾ ಮೊಬಿಲಿಯೊ ಎಂಪಿವಿ ಹಾಗೂ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರುಗಳು ನಿರ್ಮಾಣವಾಗಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಹೋಂಡಾ ಬಿಆರ್-ವಿ

ವಾಹನೋದ್ಯಮದ ನಿಕಟ ಮೂಲದ ಪ್ರಕಾರ ಮೊದಲು ಇಂಡೋನೇಷ್ಯಾ ಮಾರುಕಟ್ಟೆ ತಲುಪಲಿರುವ ಹೋಂಡಾ ಬಿಆರ್-ವಿ ಮಿನಿ ಎಸ್‌ಯುವಿ ತದಾ ಬಳಿಕ ಭಾರತ ಪ್ರವೇಶ ಪಡೆಯಲಿದೆ.

ಎಂಜಿನ್ ತಾಂತ್ರಿಕತೆ

  • 1.5 ಲೀಟರ್ ಐ-ವಿಟೆಕ್
  • 120 ಅಶ್ವಶಕ್ತಿ
  • 145 ಎನ್‌ಎಂ ತಿರುಗುಬಲ
  • 6 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್
ಹೋಂಡಾ ಬಿಆರ್-ವಿ
ಆಕರ್ಷಕ ವಿನ್ಯಾಸ, ನಂಬಿಕೆಗ್ರಸ್ತ ಎಂಜಿನ್ ಹೋಂಡಾ ಕಾರುಗಳ ಪ್ರಮುಖ ಆಕರ್ಷಣೆಯಾಗಿದೆ. ಇದನ್ನೇ ಕಾಯ್ದುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಹೆಚ್ಚು ಗ್ರೌಂಡ್ ಕ್ಲಿಯರನ್ಸ್, 16 ಇಂಚುಗಳ ಅಲ್ಯೂಮಿನಿಯಂ ಚಕ್ರ, ಸಿ ಆಕಾರದ ಎಲ್ ಇಡಿ ಟೈಲ್ ಲೈಟ್, ಸ್ಥಳಾವಕಾಶಯುಕ್ತ ಒಳಮೈ ಹೊಸ ಹೋಂಡಾ ಬಿಆರ್-ವಿ ಕಾರಿನ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಹೋಂಡಾ ಬಿಆರ್-ವಿ
ಸುರಕ್ಷತೆ
  • ಡ್ಯುಯಲ್ ಮತ್ತು ಫ್ರಂಟ್ ಎಸ್ ಆರ್ ಎಸ್ ಏರ್ ಬ್ಯಾಗ್,
  • ಎಬಿಎಸ್ ಜೊತೆ ಇಬಿಡಿ
  • ವಾಹನ ಸ್ಥಿರತೆ ಅಸಿಸ್ಟ್
  • ಹಿಲ್ ಸ್ಟ್ಯಾರ್ಟ್ ಅಸಿಸ್ಟ್

ಅಂತಿಮವಾಗಿ ಹೊಸ ಹೋಂಡಾ ಬಿಆರ್-ವಿ ಮುಂದಿನ ಸಾಲಿನಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

Article Published On: Saturday, August 22, 2015, 9:25 [IST]
English summary
Honda BR-V Prototype Revealed At Indonesia Auto Show; India Bound
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+