2017ರಲ್ಲಿ ನೂತನ ಹೋಂಡಾ ಬ್ರಿಯೊ ಸಣ್ಣ ಕಾರು ಭಾರತಕ್ಕೆ

Written By:

2011ನೇ ಇಸವಿಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಂಡಿರುವ ಹೋಂಡಾ ಬ್ರಿಯೊ ಇನ್ನೆರಡು ವರ್ಷದೊಳಗೆ ಹೊಸ ಸ್ವರೂಪ ಪಡೆದುಕೊಳ್ಳಲಿದೆ. ಹೌದು, ಸಂಪೂರ್ಣ ಹೊಸತನದ ಹೋಂಡಾ ಬ್ರಿಯೊ 2017ರಲ್ಲಿ ಬಿಡುಗಡೆಯಾಗಲಿದೆ.

ಇದಕ್ಕೂ ಮೊದಲು ಉತ್ತಮ ಮಾರಾಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈಗಷ್ಟೇ ಕೆಲವೊಂದು ಮಾರ್ಪಾಡುಗಳೊಂದಿಗೆ ಫೇಸ್ ಲಿಫ್ಟ್ ಮಾದರಿಯು ಅನಾವರಣಗೊಂಡಿದೆ. ಇದು 2015 ಇಂಡೋನೇಷ್ಯಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದೆ.

honda bonda

ಪ್ರಮುಖವಾಗಿ ಭಾರತ, ಥಾಯ್ಲೆಂಡ್ ಹಾಗೂ ಇಂಡೋನೇಷ್ಯಾದಂತಹ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಹೋಂಡಾ ಬ್ರಿಯೊ ಸಣ್ಣ ಕಾರನ್ನು ಪರಿಚಯಿಸಲಾಗಿತ್ತು. ಈಗ ನೂತನ ತಳಹದಿಯ ಬ್ರಿಯೊ ಭಾರತದಲ್ಲೇ ಸ್ಥಳೀಯವಾಗಿ ನಿರ್ಮಾಣವಾಗಲಿದೆ.

ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುವುದು ಸಂಸ್ಥೆಯ ಯೋಜನೆಯಾಗಿದೆ. ಅಂದರೆ 1.1 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಬಳಕೆಯ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿದೆ.

ಭಾರತಕ್ಕೆ ಸಾಲು ಸಾಲು ಯಶಸ್ವಿ ಮಾದರಿಗಳನ್ನು ಕೊಟ್ಟಿರುವ ಹೋಂಡಾ ಸಂಸ್ಥೆಗೆ ಹೊಸ ಬ್ರಿಯೊ ಸಣ್ಣ ಹ್ಯಾಚ್ ಬ್ಯಾಕ್ ಕಾರು ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Read more on ಹೋಂಡಾ honda
English summary
Honda Brio Hatchback To Be Updated For India By 2017
Story first published: Friday, August 21, 2015, 7:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark