3,879 ಸಿಟಿ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದ ಹೋಂಡಾ

Written By:

ಹೋಂಡಾ ಸಿಟಿ ಕಾರಿನ ಸಿವಿಟಿ (Continuously Variable Transmission) ಮಾದರಿಯ ನಿಯಂತ್ರಣ ಸಾಫ್ಟ್‌ವೇರ್‌ನಲ್ಲಿ ಅಪ್‌ಡೇಟ್ ಮಾಡುವ ಹಿನ್ನೆಲೆಯಲ್ಲಿ 3,879 ಕಾರುಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ. ಇದು ಜಾಗತಿಕ ರಿಕಾಲ್ ಭಾಗವಾಗಿದೆ.

ಯಾವಾಗ ನಿರ್ಮಾಣ ?

2014 ಫೆಬ್ರವರಿ 14ರಿಂದ 2014 ನವೆಂಬರ್ 14ರ ವರೆಗೆ ನಿರ್ಮಾಣವಾದ ಹೋಂಡಾ ಸಿಟಿ ಸಿವಿಟಿ ಮಾದರಿಗಳನ್ನು ವಾಪಾಸ್ ಕರೆಯಲಾಗುತ್ತಿದೆ.

ಹೋಂಡಾ ಸಿಟಿ

ನಿಮ್ಮ ಕಾರಿಗೂ ತೊಂದರೆ ತಟ್ಟಿದೆಯೇ?

ಹಾಗಿದ್ದರೂ ನಿಮ್ಮ ಕಾರಿಗೂ ತೊಂದರೆ ತಟ್ಟಿದೆಯೇ ಎಂಬುದನ್ನು ಹೋಂಡಾ ಅಧಿಕೃತ ವೆಬ್ ಸೈಟ್ ನಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ಲಿಸಿ ಚಾಸೀ ನಂಬರ್ (ಉದಾ: MAKGM66**********) ದಾಖಲಾತಿ ಮಾಡಿ ಪರೀಶೀಲಿಸಬಹುದಾಗಿದೆ.

ಹೋಂಡಾ ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ಲಿಸಿ

ಏನಿದು ಸಮಸ್ಯೆ?

ಹೋಂಡಾ ಸಿವಿಟಿ ತಂತ್ರಾಂಶದಲ್ಲಿ ಸಾಫ್ಟ್‌ವೇರ್ ಅಪ್ ಡೇಟ್ ಮಾಡಬೇಕಾದ ಅಗತ್ಯವಿದ್ದು, ಸಂಸ್ಥೆಯ ಎಂಜಿನಿಯರ್ ಗಳು ಇದನ್ನು ಮಾಡಿಕೊಡಲಿದ್ದಾರೆ. ಆದರೆ ಇದರಿಂದ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಯುಂಟಾಗುವುದಿಲ್ಲ.

ಪ್ರಸ್ತುತ ಉಚಿತವಾಗಿ ಹೋಂಡಾ ಸಂಸ್ಥೆಯು ಸಾಫ್ಟ್ ವೇರ್ ಅಪ್ ಡೇಷನ್ ಮಾಡಿಕೊಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹೋಂಡಾ ಡೀಲರ್ ಗಳು ಅಕ್ಟೋಬರ್ 24ರಂದೇ ಗ್ರಾಹಕರನ್ನು ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿದೆ.

ನೂತನ ಹೋಂಡಾ ಸಿಟಿ 1497 ಸಿಸಿ ಐ-ವಿಟೆಕ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 5 ಸ್ಪೀಡ್ ಮ್ಯಾನುವಲ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೂ ಲಭ್ಯವಿರುತ್ತದೆ. ಇದು 145 ಎನ್‍‌ಎಂ ತಿರುಗುಬಲದಲ್ಲಿ 117.32 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಈ ಪೈಕಿ ಸಿಟಿವಿ ವೆರಿಯಂಟ್ ಪ್ರತಿ ಲೀಟರ್ ಗೆ 18 ಕೀ.ಮೀ. ಹಾಗೂ ಮ್ಯಾನುವಲ್ ವೆರಿಯಂಟ್ 17.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಇನ್ನು ಸಿಟಿ ಇ ಬೇಸ್ ವೆರಿಯಂಟ್ ವೆರಿಯಂಟ್ 7.99 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದ್ದು, ಟಾಪ್ ವಿಎಕ್ಸ್ ವೆರಿಯಂಟ್ 12.50 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ. ಅದೇ ಹೊತ್ತಿಗೆ ಎಸ್‌ವಿ ಹಾಗೂ ವಿಎಕ್ಸ್ ಸಿವಿಟಿ ವೆರಿಯಂಟ್ ಗಳು ಅನುಕ್ರಮವಾಗಿ 10.38 ಲಕ್ಷ ರು. ಹಾಗೂ 12.07 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಈ ಎಲ್ಲ ಬೆಲೆಗಳನ್ನು ಮುಂಬೈ ಎಕ್ಸ್ ಶೋ ರೂಂ ಬೆಲೆಯ ಆಧಾರದಲ್ಲಿ ಕೊಡಲಾಗಿದೆ.

Read more on ಹೋಂಡಾ honda
English summary
Honda Recalls 3,879 Units Of The City (CVT) Variants In India
Story first published: Monday, October 26, 2015, 16:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark