ಹೊಸ ಬಣ್ಣ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಹೋಂಡಾ ಸಿಟಿ
ಮಾರುಕಟ್ಟೆಯಲ್ಲಿ ಭಾರಿ ಅಲೆಯೆಬ್ಬಿಸಿರುವ ಹೋಂಡಾ ಸಿಟಿ ಈಗ ಹೊಸ ಬಣ್ಣ ಹಾಗೂ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ಇದನ್ನು ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಖಚಿತಪಡಿಸಿದೆ.
ಈಗಿರುವ ವಿಎಕ್ಸ್ ವೆರಿಯಂಟ್ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಹೊಸ ಮಾದರಿಯು ವಿಎಕ್ಸ್ (ಒಪ್ಷನಲ್) ಎಂದು ಅರಿಯಲ್ಪಡಲಿದೆ. ಅಂದ ಹಾಗೆ ಭಾರತದಲ್ಲಿ ಹೋಂಡಾ ಸಿಟಿ ಬೇಸ್ ವೆರಿಯಂಟ್ ಇ ಬಳಿಕ ಎಸ್, ಎಸ್ ವಿ, ವಿ, ವಿಕ್ಸ್ ಈಗ ನೂತನ ವಿಎಕ್ಸ್ (ಒ) ವೆರಿಯಂಟ್ ಗಳು ಹಿಂಬಾಲಿಸಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿರುವ ಹೋಂಡಾ ಸಿಟಿ ಕಾರಲ್ಲಿ ಮ್ಯಾನುವಲ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಿರುತ್ತದೆ. ಹೋಂಡಾ ಹೊಸ ವೆರಿಯಂಟ್ ಬೆಲೆ ಮಾಹಿತಿ ಇಂತಿದೆ (ದೆಹಲಿ ಎಕ್ಸ್ ಶೋ ರೂಂ).
- ಹೋಂಡಾ ಸಿಟಿ ಐ-ವಿಟೆಕ್ ಮ್ಯಾನುವಲ್ ವಿಎಕ್ಸ್ (ಒ) ಪೆಟ್ರೋಲ್ - 10.64 ಲಕ್ಷ ರು.
- ಹೋಂಡಾ ಸಿಟಿ ಐ-ಡಿಟೆಕ್ ಮ್ಯಾನುವಲ್ ವಿಎಕ್ಸ್ (ಒ) ಡೀಸೆಲ್ - 11.83 ಲಕ್ಷ ರು.

ಹೊಸ ವೈಶಿಷ್ಟ್ಯಗಳು
- ಇಂಟೇಗ್ರೇಟಡ್ ಟಚ್ ಸ್ಕ್ರೀನ್ ಆಡಿಯೋ/ವಿಷ್ಯುವಲ್ ನೇವಿಗೇಷನ್ ಸಿಸ್ಟಂ.
- ಸುರಕ್ಷಾ ಎಚ್ಚರಿಕೆ,
- ಕೀಲೆಸ್ ಎಂಟ್ರಿಗಾಗಿ ಎರಡು ಟ್ರಾನ್ಸ್ ಮಿಟರ್ ಕೀ.
- ಹೊಸತಾದ ವೈಟ್ ಓರ್ಕಿಡ್ ಪಿಯರ್ಲ್ ಬಣ್ಣದ ಆಯ್ಕೆ
ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಕಾರು ಇತ್ತೀಚೆಗಷ್ಟೇ 15 ತಿಂಗಳಲ್ಲಿ ಒಂದು ಲಕ್ಷ ಯುನಿಟ್ ಗಳ ಮಾರಾಟ ಸಂಖ್ಯೆಯನ್ನು ದಾಟಿತ್ತು. ಅಲ್ಲದೆ ಮಧ್ಯಮ ಗಾತ್ರದ ಸೆಡಾನ್ ಕಾರು ವಿಭಾಗದಲ್ಲಿ ಅತಿ ಹೆಚ್ಚಿನ ಯಶಸ್ಸನ್ನು ದಾಖಲಿಸಿದೆ.


Click it and Unblock the Notifications








