ಸೈಕಲ್ ಸವಾರರ ಕನಸಿನ ಚಾಲನೆಗಾಗಿ ಹೋಂಡಾ ಆಕ್ಟಿವ್ ಲೈಫ್

By Nagaraja

ಜಪಾನ್ ಮೂಲದ ಪ್ರಖ್ಯಾತ ಕಾರು ಸಂಸ್ಥೆ ಹೋಂಡಾ, ಅತಿ ನೂತನ ಸಿವಿಕ್ ಟೂರರ್ ಕಾನ್ಸೆಪ್ಟ್‌ನೊಂದಿಗೆ ಮುಂದೆ ಬಂದಿದೆ. ಅದುವೇ ಹೋಂಡಾ ಸಿವಿಕ್ ಟೂರರ್ ಆಕ್ಟಿವ್ ಲೈಫ್.

ಪ್ರಮುಖವಾಗಿಯೂ ಸೈಕಲ್ ಸವಾರಿಯನ್ನು ಇಷ್ಟಪಡುವ ವಾಹನ ಪ್ರೇಮಿಗಳಿಗೆ ಇದು ಪರಿಪೂರ್ಣ ಆಯ್ಕೆಯಾಗಿರಲಿದೆ. ಅಲ್ಲದೆ ಇದೇ ತಿಂಗಳಲ್ಲಿ ನಡೆಯಲಿರುವ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನವನ್ನು ಕಾಣಲಿದೆ.

ಸೈಕಲ್ ಸವಾರರ ಕನಸಿನ ಚಾಲನೆಗಾಗಿ ಹೋಂಡಾ ಆಕ್ಟಿವ್ ಲೈಫ್

ನೂತನ ಶೈಲಿಯೊಂದಿಗೆ ಹೆಚ್ಚು ಸ್ಥಳಾವಕಾಶದ ಕಾರು ಇದಾಗಿರಲಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ಸೈಕಲ್ ಸವಾರರ ಕನಸಿನ ಚಾಲನೆಗಾಗಿ ಹೋಂಡಾ ಆಕ್ಟಿವ್ ಲೈಫ್

ಇದರಲ್ಲಿ ಅತಿ ಸುಲಭವಾಗಿ ಎರಡು ಸೈಕಲನ್ನು ತುಂಬಿಕೊಂಡು ಹೋಗಬಹುದಾಗಿದೆ. ಇದಕ್ಕಾಗಿ ಹಿಂಭಾಗದಲ್ಲಿ ಪ್ರತ್ಯೇಕ ಜಾಗವನ್ನು ಒದಗಿಸಲಾಗಿದೆ.

ಸೈಕಲ್ ಸವಾರರ ಕನಸಿನ ಚಾಲನೆಗಾಗಿ ಹೋಂಡಾ ಆಕ್ಟಿವ್ ಲೈಫ್

ಏರೋಡೈನಾಮಿಕ್ ರೂಫ್ ಬಾಕ್ಸ್ ಮಗದೊಂದು ವೈಶಿಷ್ಟ್ಯವಾಗಿದ್ದು, ಚಿಕ್ಕ ಹೆಲ್ಮೆಟ್ ಮುಂತಾದವುಗಳನ್ನು ಹೊತ್ತೊಯ್ಯಬಹುದಾಗಿದೆ. ಇದರ ಜೊತೆಗೆ 1668 ಲೀಟರ್ ಸ್ಥಳಾವಕಾಶದ ಟೂಲ್ ಬಾಕ್ಸ್, ವಾಟರ್ ಟ್ಯಾಂಕ್ ಹಾಗೂ ಫ್ರಂಟ್ ವೀಲ್ ಹೋಲ್ಡರ್ ಕೂಡಾ ಇರಲಿದೆ.

ಸೈಕಲ್ ಸವಾರರ ಕನಸಿನ ಚಾಲನೆಗಾಗಿ ಹೋಂಡಾ ಆಕ್ಟಿವ್ ಲೈಫ್

ಹೊಸ ಸಿವಿಕ್ ಟೂರರ್ ಆಕ್ಟಿವ್ ಲೈಫ್ ಕಾರಲ್ಲಿ ಸ್ಟೀರಿಂಗ್ ವೀಲ್, ಸೀಟು, ಗೇರ್ ಶಿಫ್ಟ್ ಸೇರಿದಂತೆ ಒಳಮೆ ನೀಲಿ ಬಣ್ಣದಿಂದ ಕಂಗೊಳಿಸಲಿದೆ. ಅಲ್ಲದೆ 18 ಇಂಚುಗಳ ಅಲಾಯ್ ವೀಲ್ ಸಹ ಇರಲಿದೆ.

ಸೈಕಲ್ ಸವಾರರ ಕನಸಿನ ಚಾಲನೆಗಾಗಿ ಹೋಂಡಾ ಆಕ್ಟಿವ್ ಲೈಫ್

ಅಂದ ಹಾಗೆ ನೂತನ ಹೋಂಡಾ ಸಿವಿಕ್ ಟೂರರ್ ಆಕ್ಟಿವ್ ಲೈಫ್ ಕಾನ್ಸೆಪ್ಟ್ ಕಾರು 1.6 ಲೀಟರ್ ಐ-ಡಿಟೆಕ್ ಎಂಜಿನ್ ನಿಂದ (i-DTEC) ನಿಯಂತ್ರಿಸಲ್ಪಡಲಿದ್ದು, 120 ಅಶ್ವಶಕ್ತಿ ಉತ್ಪಾದಿಸಲಿದೆ.


Article Published On: Monday, September 14, 2015, 14:58 [IST]
English summary
Honda Civic Tourer Active Life Concept To Debut At Frankfurt
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+