ಹೋಂಡಾ ಕಾರುಗಳಿಗೆ ತಟ್ಟಿದ ಸಮಸ್ಯೆ; ದೇಶದಲ್ಲೇ ಭಾರಿ ರಿಕಾಲ್
ಗಮನಾರ್ಹ ಬೆಳವಣಿಗೆಯೊಂದರಲ್ಲಿ ದೇಶದ ಅತಿ ದೊಡ್ಡ ರಿಕಾಲ್‌ನಲ್ಲಿ ಜಪಾನ್ ಮೂಲದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯು ಬರೋಬ್ಬರಿ 223578 ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದೆ.
ಪ್ರಮುಖವಾಗಿಯೂ ಟಕಟ ಪೂರೈಸಿರುವ ಏರ್ ಬ್ಯಾಗ್ ಸಮಸ್ಯೆಯ ಹಿನ್ನೆಲೆಯಲ್ಲಿ ಹೋಂಡಾ ತನ್ನ ಜನಪ್ರಿಯ ಹಿಂದಿನ ತಲೆಮಾರಿನ ಸಿಆರ್-ವಿ, ಸಿವಿಕ್, ಸಿಟಿ ಹಾಗೂ ಜಾಝ್ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದೆ.

ಪ್ರಕಟಣೆ ಏನು ಹೇಳುತ್ತಿದೆ?
ಹೋಂಡಾ ಇಂಡಿಯಾ ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವಂತೆಯೇ ಚಾಲಕ ಬದಿ, ಪ್ರಯಾಣಿಕ ಬದಿ ಗಾಳಿಚೀಲಗಳ ವಾಯುಪೂರಕಗಳಲ್ಲಿ ಸಂಭವನೀಯ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಆರ್-ವಿ, ಸಿವಿಕ್, ಸಿಟಿ ಹಾಗೂ ಜಾಝ್ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಲಾಗುತ್ತಿದೆ. ಇದು ಹೋಂಡಾದ ಜಾಗತಿಕ ರಿಕಾಲ್ ಕಾರ್ಯಕ್ರಮದ ಭಾಗವಾಗಿರಲಿದೆ.
ಯಾವಾಗ ನಿರ್ಮಾಣ?
ಹೋಂಡಾ ಸಿಟಿ - 2007ರಿಂದ 2012
ಹೋಂಡಾ ಸಿವಿಕ್ - 2003ರಿಂದ 2012
ಹೋಂಡಾ ಸಿಆರ್-ವಿ - 2004ರಿಂದ 2011
ಹೋಂಡಾ ಜಾಝ್ - 2009ರಿಂದ 2011
ಎಷ್ಟೆಷ್ಟು ರಿಕಾಲ್?
ಹೋಂಡಾ ಸಿಟಿ - 143154
ಹೋಂಡಾ ಸಿವಿಕ್ - 54,200
ಹೋಂಡಾ ಸಿಆರ್-ವಿ - 13,073
ಹೋಂಡಾ ಜಾಝ್ - 15,707
ನೀವೇನು ಮಾಡಬೇಕು?
ಮೇಲೆ ತಿಳಿಸಿದ ಅವಧಿಯಲ್ಲಿ ಈ ನಿರ್ದಿಷ್ಟ ವಾಹನಗಳನ್ನು ನೀವು ಖರೀದಿಸಿದ್ದಲ್ಲಿ ಅಥವಾ ನಿಮ್ಮ ಸಂಶಯವನ್ನು ದೂರ ಮಾಡಲು ಹೋಂಡಾ (www.hondacarindia.com) ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅಥವಾ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಪರಿಶೀಲಿಸಬಹುದಾಗಿದೆ. ಇದಕ್ಕಾಗಿ 17 ಅಂಕಿಗಳ ವಾಹನ ಚಾಸೀ ನಂಬರ್ ಎಂಟರ್ ಮಾಡಬೇಕಾಗುತ್ತದೆ.
ಉದಾ: JHLRD************ ಅಥವಾ JHMFD************ ಅಥವಾ JHMRE************ ಅಥವಾ MAKFD************ ಅಥವಾ MAKGD************ ಅಥವಾ MAKGG************ ಅಥವಾ MAKGM************
ಹೋಂಡಾ ಗ್ರಾಹಕ ಮಾಹಿತಿ ಪುಟಕ್ಕಾಗಿ ಇಲ್ಲಿ ಕ್ಲಿಕ್ಕಿಸಿ


Click it and Unblock the Notifications