ಮಿನಿ ಎಸ್‌ಯುವಿಗಳ ರೇಸ್; ಕಣಕ್ಕಿಳಿಯಲಿರುವ ಹೋಂಡಾ

By Nagaraja

ದೇಶದ ಎಲ್ಲ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ತನ್ನ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆಗೊಳಿಸಿದೆ. ದೇಶದ ಅಗ್ರ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಹ ತನ್ನ ಬಹುನಿರೀಕ್ಷಿತ ಎಸ್-ಕ್ರಾಸ್ ಮಾದರಿಯನ್ನು ಈಗಾಗಲೇ ಅನಾವರಣಗೊಳಿಸಿದೆ.

ಇನ್ನೊಂದೆಡೆ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಈಗಾಗಲೇ ಕ್ರೆಟಾ ಮಿನಿ ಎಸ್ ಯುವಿ ಬಿಡುಗಡೆಗೊಳಿಸಿದೆ. ಇನ್ನು ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಹಾಗೂ ನಿಸ್ಸಾನ್ ಟೆರನೊಗಳಂತಹ ಮಾದರಿಗಳು ಆಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಹೋಂಡಾ ಬಿಆರ್-ವಿ

ಈ ಎಲ್ಲ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅವಲೋಕನ ಮಾಡುತ್ತಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆಯಾಗಿರುವ ಹೋಂಡಾ ಸಹ ಭಾರತಕ್ಕೆ ಸಣ್ಣ ಎಸ್‌ಯುವಿ ಪರಿಚಯಿಸುವ ಯೋಜನೆ ಹೊಂದಿದೆ. ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯ ಸಾಮರ್ಥ್ಯ ಅರಿತುಕೊಂಡಿರುವ ಹೋಂಡಾ ಸಹ ಲಾಭ ಗಳಿಕೆಯನ್ನು ಗುರಿಯಾಗಿರಿಸಿಕೊಂಡಿದೆ.

ಹೋಂಡಾ ಬಗ್ಗೆ ಮಾತನಾಡುವುದಾದ್ದಲ್ಲಿ ಅಮೇಜ್ ಕಾಂಪಾಕ್ಟ್ ಸೆಡಾನ್, ಸಿಟಿ ಸೆಡಾನ್ ಹಾಗೂ ಮೊಬಿಲಿಯೊ ಎಂಪಿವಿಗಳಂತಹ ಸಾಲು ಸಾಲು ಯಶಸ್ವಿ ಕಾರುಗಳ ಬಳಿಕ ಇತ್ತೀಚೆಗಷ್ಟೇ ಹೊಸ ತಲೆಮಾರಿನ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು.

ಹೋಂಡಾ ಬಿಆರ್-ವಿ

ಭಾರತದಲ್ಲಿ ಎಲ್ಲ ವಿಭಾಗದಲ್ಲೂ ತನ್ನ ಸಾನಿಧ್ಯವನ್ನು ದಾಖಲಿಸಲು ಹೊರಟಿರುವ ಹೋಂಡಾ ಪಾಲಿಗೆ, ಕಾಂಪಾಕ್ಟ್ ಎಸ್‌ಯುವಿ ಹೆಚ್ಚು ನಿರೀಕ್ಷೆಗೆ ಎಡೆ ಮಾಡಿಕೊಟ್ಟಿದೆ.

ಹೋಂಡಾ ಬಿಆರ್-ವಿ
ಮುಂಬರುವ 2015 ಆಗಸ್ಟ್ 20ರಿಂದ 30ರ ವರೆಗೆ ಸಾಗಲಿರುವ ಇಂಡೋನೇಷ್ಯಾ ಆಟೋ ಶೋದಲ್ಲಿ ಬ್ರಿಯೊ ತಳಹದಿಯಲ್ಲಿ ರೂಪುಗೊಂಡಿರುವ ಅತಿ ನೂತನ ಬಿಆರ್-ವಿ ಮೊದಲ ಮಾದರಿಯು ಭರ್ಜರಿ ಪ್ರದರ್ಶನ ಕಾಣಲಿದೆ. ಅಲ್ಲದೆ ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ.

Article Published On: Wednesday, July 22, 2015, 16:45 [IST]
English summary
Honda India Taking Compact SUV Market Seriously; Exploring Options
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+