6 ಸೀಟುಗಳ ಹೋಂಡಾ ಜೇಡ್ ಹೈಬ್ರಿಡ್ ಕಾರು ಬಿಡುಗಡೆ
ಜಪಾನ್‌ನ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ತವರೂರಿನ ಅಭಿಮಾನಿಗಳಿಗಾಗಿ ಹೊಸತೊಂದು ಉಡುಗೊರೆಯನ್ನು ನೀಡಿದೆ. ಹೌದು, ನೂತನ ಹೋಂಡಾ ಜೇಡ್ ಹೈಬ್ರಿಡ್ ಕಾರು ಜಪಾನ್‌ನಲ್ಲಿ ಭರ್ಜರಿ ಬಿಡುಗಡೆ ಕಂಡಿದೆ.
ಇದಕ್ಕೂ ಮೊದಲು ಚೀನಾ ಮಾರುಕಟ್ಟೆ ಪ್ರವೇಶಿಸಿದ್ದ ಈ 6 ಸೀಟುಗಳ ಬಹು ಬಳಕೆಯ ವಾಹನವು ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ. ಇದರಲ್ಲಿ 1.5 ಲೀಟರ್ ಡೈರಕ್ಟ್ ಇಂಜೆಕ್ಷನ್ ಡಿಒಎಚ್‌ಸಿ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಅಂತೆಯೇ 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಸಹ ಪಡೆಯಲಿದೆ.

ಇದು ಲಿಥಿಯಂ ಇಯಾನ್ ಬ್ಯಾಟರಿ ಕೂಡಾ ಹೊಂದಿರಲಿದ್ದು, ಹೈಬ್ರಿಡ್ ಕಾರು ಎಂಬ ಸೂಚಕವನ್ನು ಪರಿಪೂರ್ಣಗೊಳಿಸಲಿದೆ. ಇನ್ನು ಭಾರತೀಯ ರುಪಾಯಿ ಪ್ರಕಾರ ಹೋಂಡಾ ಜೇಡ್ 14.31 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಎಸ್ ಕಾನ್ಸೆಪ್ಟ್ ತಳಹದಿಯಲ್ಲಿ ಜೇಡ್ ವಿನ್ಯಾಸಗೊಳಿಸಲಾಗಿದೆ. ಮೊದಲ ನೋಟಕ್ಕೆ ಇದು ಸೆಡಾನ್ ಸಾಮತ್ಯೆಯನ್ನು ಪಡೆದರೂ ವಿಶಿಷ್ಟ ಎಂಪಿವಿ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಕಾರಿನೊಳಗೂ ಹೆಚ್ಚಿನ ಸ್ಥಳಾವಕಾಶವಿದ್ದು, ಉತ್ತಮ ಲೆಗ್ ಹಾಗೂ ಹೆಡ್ ರೂಂ ಕಾಯ್ದುಕೊಳ್ಳಲಾಗಿದೆ.

ವೈಶಿಷ್ಟ್ಯಗಳು
ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಬ್ರೇಕ್ ಲೈಟ್
ಹೋಂಡಾ ಸೆನ್ಸಿಂಗ್
ಲೇನ್ ವೀಕ್ಷಣೆ ಸಿಸ್ಟಂ,
ಎಂಜಿನಿಯಿರಿಂಗ್,
ಜಿ ಫೋರ್ಸ್ ಕಂಟ್ರೋಲ್ ಟೆಕ್ನಾಲಜಿ,
ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್
ಹಿಲ್ ಸ್ಟ್ಯಾರ್ಟ್ ಅಸಿಸ್ಟ್
ತುರ್ತು ನಿಲುಗಡೆ ಸಿಗ್ನಲ್ ವ್ಯವಸ್ಥೆ


Click it and Unblock the Notifications








