ಇನ್ನು ಹೋಂಡಾ ಕಾರುಗಳು ಮತ್ತಷ್ಟು ದುಬಾರಿ

Written By:

ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ಸ್ ಬೆನ್ನಲ್ಲೇ ಮಗದೊಂದು ಜನಪ್ರಿಯ ಕಾರು ತಯಾರಿಕ ಸಂಸ್ಥೆ ಬೆಲೆ ಏರಿಕೆ ನೀತಿ ಅನುಸರಿಸಲು ನಿರ್ಧರಿಸಿದೆ. ಹೌದು, ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಶೇಕಡಾ 1ರಿಂದ 2ರಷ್ಟು ಬೆಲೆ ಏರಿಕೆಗೊಳಿಸಲು ಜಪಾನ್ ಮೂಲದ ಹೋಂಡಾ ಸಂಸ್ಥೆ ನಿರ್ಧರಿಸಿದೆ.

ಇದರೊಂದಿಗೆ ಭಾರತದಲ್ಲಿ ಮಾರಾಟವಾಗುತ್ತಿರುವ ಸಿಟಿ, ಜಾಝ್, ಅಮೇಜ್, ಬ್ರಿಯೊ, ಮೊಬಿಲಿಯೊ ಹಾಗೂ ಸಿಆರ್ ವಿಗಳಂತಹ ಜನಪ್ರಿಯ ಕಾರುಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಜಾಝ್ ಸೇರ್ಪಡೆಗೊಳ್ಳಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಹೋಂಡಾ ಕಾರು

ಪ್ರಸಕ್ತ ಸಾಲಿನಲ್ಲಿ ಇದು ಮೂರನೇ ಬಾರಿಗೆ ಹೋಂಡಾ ಬೆಲೆ ಏರಿಕೆ ನೀತಿ ಅನುಸರಿಸುತ್ತಿದೆ. ಇದಕ್ಕೂ ಮೊದಲು ವರ್ಷಾರಂಭದಲ್ಲಿ ಹಾಗೂ ಎಪ್ರಿಲ್ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆಗೊಳಿಸಲಾಗಿತ್ತು.

2015 ಆರ್ಥಿಕ ಸಾಲಿನ ಎಪ್ರಿಲ್ ನಿಂದ ಜುಲೈ ವರೆಗಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹೋಂಡಾ ಸಂಸ್ಥೆು 189,062 ಯುನಿಟ್ ಗಳ ಮಾರಾಟ ಕಾಣುವ ಮೂಲಕ ಮಾರಾಟದಲ್ಲಿ ಶೇಕಡಾ 12ರಷ್ಟು ವರ್ಧನೆಯನ್ನು ದಾಖಲಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 63,000 ಯುನಿಟ್ ಗಳ ಮಾರಾಟ ಮಾತ್ರ ಕಂಡಿತ್ತು.

ಇದಕ್ಕೆ ಸಂಬಂಧಪಟ್ಟಂತೆ ಈ ವಾರದಲ್ಲೇ ಹೋಂಡಾ ಸಂಸ್ಥೆಯಿಂದ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.

Read more on ಹೋಂಡಾ honda
English summary
Honda To Hike Price Of Models Sold In India From September
Story first published: Wednesday, September 2, 2015, 8:37 [IST]
Please Wait while comments are loading...

Latest Photos