ಮುಂದಿನ ವರ್ಷಾರಂಭದಲ್ಲಿ ಹೋಂಡಾ ಕಾರುಗಳು ದುಬಾರಿ
ಹೊಸ ವರ್ಷ ಆಗಮನವಾಗುತ್ತಿರುವಂತೆಯೇ ಬಹುತೇಕ ಎಲ್ಲ ಜನಪ್ರಿಯ ಸಂಸ್ಥೆಗಳು ಬೆಲೆ ಏರಿಕೆ ನೀತಿಯನ್ನು ಅನುಸರಿಸಿದೆ. ಈ ಪಟ್ಟಿಗೀಗ ಮಗದೊಂದು ವಾಹನ ಸಂಸ್ಥೆಯೊಂದು ಸೇರ್ಪಡೆಯಾಗಿದೆ.
2016ನೇ ಸಾಲಿನಿಂದ ಬೆಲೆ ಏರಿಕೆಗೊಳಿಸಲು ಜಪಾನ್ ಮೂಲದ ಪ್ರಖ್ಯಾತ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ನಿರ್ಧರಿಸಿದೆ. ದೇಶದಲ್ಲಿ ಮಾರಾಟದಲ್ಲಿರುವ ಹೋಂಡಾ ಕಾರುಗಳಿಗೆ 16,000 ರು.ಗಳ ವರೆಗೆ ಬೆಲೆ ಏರಿಕೆ ಕಂಡುಬರಲಿದೆ.

ನಿರ್ಮಾಣ ವೆಚ್ಚ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೋಂಡಾ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹೋಂಡಾ ಕಾರ್ಸ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ ಸೆನ್, 10,000 ರು.ಗಳಿಂದ 16,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸುವುದು ಅನಿವಾರ್ಯವೆನಿಸಿದೆ ಎಂದಿದ್ದಾರೆ.
ಸದ್ಯ ಹೋಂಡಾ ಸಂಸ್ಥೆಯು 4.23 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ 23.13 ಲಕ್ಷ ರು.ಗಳ (ದೆಹಲಿ ಎಕ್ಸ್ ಶೋ ರೂಂ ಬೆಲೆ) ವರೆಗಿನ ಶ್ರೇಣಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications