ಸಕತ್ ಬ್ಯೂಟಿಫುಲ್ ಹ್ಯುಂಡೈ ನ್ಯೂ ಜನರೇಷನ್ ಐ20 ಕೂಪೆ
ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಯುಕೆ ಎಲ್ಲ ಹೊಸತನದ ನ್ಯೂಜನರೇಷನ್ ಐ20 ಕೂಪೆ ಕಾರನ್ನು ಪರಿಚಯಿಸಿದೆ.
2015 ಮಾರ್ಚ್ 26ರಿಂದ ಬ್ರಿಟನ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಹೊಸ ಐ20 ಕೂಪೆ ಮಾದರಿಯು ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ
ಎಸ್‌ಇ, ಸ್ಪೋರ್ಟ್ ಮತ್ತು ಸ್ಪೋರ್ಟ್ಸ್ ನೇವಿಗೇಷನ್

ವಿಶೇಷವೆಂದರೆ ಹೊಸ ಹ್ಯುಂಡೈ ಐ20 ಕೂಪೆ ಕಾರಿನಲ್ಲಿ ಸ್ಯಾಟಲೈಟ್ ನೇವಿಗೇಷನ್ ಪರಿಚಯಿಸಲಾಗಿದೆ. ಅಷ್ಟೇ ಯಾಕೆ ಬ್ರಿಟನ್‌ನಲ್ಲಿ ನೂತನ ಕಾರು ಭಾರತೀಯ ರುಪಾಯಿ ಪ್ರಕಾರ 12 ಲಕ್ಷ ರು.ಗಳಿಂದ 15.68 ಲಕ್ಷ ರು.ಗಳ ವರೆಗೆ ದುಬಾರಿಯಾಗಲಿದೆ.

ಇಂಟೇಗ್ರೇಟಡ್ ಸ್ಯಾಟಲೈಟನ್ ನೇವಿಗೇಷನ್, ಏಳು ಇಂಚಿನ್ ಸ್ಕ್ರೀನ್ ಹಾಗೂ ರಿಯರ್ ವ್ಯೂ ಮಿರರ್ ಮುಂತಾದ ವೈಶಿಷ್ಟ್ಯಗಳನ್ನು ಹ್ಯುಂಡೈ ಐ20 ಕೂಪೆಯಲ್ಲಿ ನೋಡಬಹುದಾಗಿದೆ. ಇದು 1.2 ಲೀಟರ್ ಪೆಟ್ರೋಲ್ (84 ಅಶ್ವಶಕ್ತಿ) ಹಾಗೂ 1.4 ಲೀಟರ್ ಡೀಸೆಲ್ (90 ಪಿಎಸ್) ಎಂಜಿನ್ ಪಡೆಯಲಿದೆ. ಪೆಟ್ರೋಲ್ ಮಾದರಿಯು ಐದು ಸ್ಪೀಡ್ ಹಾಗೂ ಡೀಸೆಲ್ ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಹೊರಮೈ ವಿನ್ಯಾಸ, ಅನುಕೂಲತೆ, ಸೌಕರ್ಯ ಹಾಗೂ ಇಂಟಿರಿಯರ್ ಸ್ಪೇಸ್ ಪ್ರಮುಖವೆನಿಸಲಿದೆ. ಇವೆಲ್ಲದರ ಜೊತೆಗೆ ಗ್ರಾಹಕರು ಹೆಚ್ಚುವರಿ ಎರಡು ವೆರಿಯಂಟ್‌ಗಳನ್ನು ಪಡೆಯಬಹುದಾಗಿದೆ. ಇದು ಪ್ರೀಮಿಯಂ ನೇವಿಗೇಷನ್ ಹಾಗೂ ಪ್ರೀಮಿಂ ಎಸ್‌ಇ ನೇವಿಗೇಷನ್ ಎಂದು ಗುರಿತಿಸಲ್ಪಡಲಿದೆ. ಇವೆರಡು ಇಂಟೇಗ್ರೇಟಡ್ ಸ್ಯಾಟಲೈಟನ್ ನೇವಿಗೇಷನ್ ಜೊತೆ ಏಳು ಇಂಚಿನ ಟಚ್ ಸ್ಕ್ರೀನ್, ಡಿಎಬಿ ರೆಡಿಯೋ ಮತ್ತು ರಿಯರ್ ವ್ಯೂ ಕ್ಯಾಮೆರಾ ಪಡೆಯಲಿದೆ.


Click it and Unblock the Notifications








