ಬಿಡುಗಡೆಗೆ ಮುನ್ನ ಹ್ಯುಂಡೈ ಕ್ರೆಟಾ ಬುಕ್ಕಿಂಗ್ ಆರಂಭ
ಜಾಗತಿಕ ಬಿಡುಗಡೆಗೂ ಮುಂಚಿತವಾಗಿ ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ ಕಾಂಪಾಕ್ಟ್ ಎಸ್ ಯುವಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ಎಲೈಟ್ ಐ20 ಹಾಗೂ ಐ20 ಆಕ್ಟಿವ್ ಕ್ರಾಸೋವರ್ ಬಳಿಕ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈನಿಂದ ಆಗಮನವಾನವಾಗುತ್ತಿರುವ ಅತಿ ನೂತನ ಮಾದರಿ ಇದಾಗಿದೆ.
ನೂತನ ಕ್ರೆಟಾ ಕಾರಿನಡಿಯಲ್ಲಿ 1.4 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಇರಲಿದೆ. ಅಲ್ಲದೆ ಡೀಸೆಲ್ ಎಂಜಿನ್ ನಲ್ಲಿ ಆಟೋಮ್ಯಾಟಿಕ್ ಸಹ ಲಭ್ಯವಿರಲಿದೆ.

ಭಾರತ ಮಾರುಕಟ್ಟೆಯಲ್ಲಿ ರೆನೊ ಡಸ್ಟರ್, ನಿಸ್ಸಾನ್ ಟೆರೆನೊ, ಫೋರ್ಡ್ ಇಕೊಸ್ಪೋರ್ಟ್ ಹಾಗೂ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಮಾರುತಿ ಎಸ್ ಕ್ರಾಸ್ ಮಾದರಿಗಳಿಗೆ ನೂತನ ಕ್ರೆಟಾ ಪ್ರತಿಸ್ಪರ್ಧಯಾಗಿರಲಿದೆ. ಇದರ ಬೆಲೆ ಎಂಟರಿಂದ 10 ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.
ನೂತನ ಕ್ರೆಟಾ ಕಾರಿನಲ್ಲೂ ಹ್ಯುಂಡೈ ಫ್ಲೂಯಿಡಿಕ್ 2.0 ವಿನ್ಯಾಸ ತಂತ್ರಜ್ಞಾನವನ್ನು ಅನುಸರಿಸಲಿದೆ. ಅಲ್ಲದೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಇವೆಲ್ಲವೂ ಭಾರತದಲ್ಲಿ ಗುಣಮಟ್ಟದ ಉತ್ಪನ್ನ ನೀಡಲು ಸಹಕಾರಿಯಾಗಲಿದೆ.
ಒಟ್ಟಿನಲ್ಲಿ ಮಗದೊಂದು ವಿಶ್ವದರ್ಜೆಯ ಕಾರು ಭಾರತ ಪ್ರವೇಶಿಸಲು ಕ್ಷಣಗಣನೆ ಆರಂಭಗೊಂಡಿದ್ದು, ಹೆಚ್ಚಿನ ಮಾರಾಟದೊಂದಿಗೆ ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ.


Click it and Unblock the Notifications








