ಹ್ಯುಂಡೈ ಕ್ರೆಟಾಗೆ ಭಾರಿ ಡಿಮ್ಯಾಂಡ್; 15 ದಿನಗಳಲ್ಲಿ 10,000 ಬುಕ್ಕಿಂಗ್

By Nagaraja

ಬಿಡುಗಡೆಗೂ ಮುನ್ನವೇ, ಹ್ಯುಂಡೈ ಕ್ರೆಟಾ ಮಿನಿ ಎಸ್ ಯುವಿ ಕಾರಿಗೆ ದೇಶದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಬುಕ್ಕಿಂಗ್ ಆರಂಭಗೊಂಡಿರುವ 15 ದಿನಗಳಲ್ಲೇ 10,000ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಿಮ್ಮ ಮಾಹಿತಿಗಾಗಿ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯಿಂದ ಬಿಡುಗಡೆಯಾಗಲಿರುವ ನೂತನ ಕ್ರೆಟಾ ಜಾಗತಿಕ ಬಿಡುಗಡೆಯು ಭಾರತದಲ್ಲೇ 2016 ಜುಲೈ 21ರಂದು ನಡೆಯಲಿದೆ. ಇದರಂತೆ ಜುಲೈ ಮೊದಲ ವಾರದಿಂದಲೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.

ಹ್ಯುಂಡೈ ಕ್ರೆಟಾ

ನೂತನ ಹ್ಯುಂಡೈ ಕ್ರೆಟಾ ಕಾಂಪಾಕ್ಟ್ ಎಸ್ ಯುವಿ ಕಾರಿನಲ್ಲಿ 1.4 ಲೀಟರ್ ಪೆಟ್ರೋಲ್ ಮತ್ತು 1.4 ಹಾಗೂ 1.6 ಲೀಟರ್ ಡೀಸೆಲ್ ಎಂಜಿನ್ ಗಳು ಬಳಕೆಯಾಗಲಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆಯ ಲಭ್ಯವಾಗಲಿದೆ.

ಆಸಕ್ತ ಗ್ರಾಹಕರು ಹ್ಯುಂಡೈ ಅಧಿಕೃತ ಡೀಲರುಗಳಿಂದ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ. ಪ್ರಸ್ತುತ ಕಾರು ಎಂಟರಿಂದ 11 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿರುವ ರೆನೊ ಡಸ್ಟರ್, ನಿಸ್ಸಾನ್ ಟೆರನೊ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಗಳಂತಹ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

Article Published On: Wednesday, July 15, 2015, 12:44 [IST]
English summary
The upcoming compact SUV from the South Korean carmaker, the Hyundai Creta has created quite a stir even before its launch! It has received 10,000 bookings in just 15 days!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+