2015 ಹ್ಯುಂಡೈ ಎಲಂಟ್ರಾ; ಒಂದು ವಿಸೃತ ಮಾಹಿತಿ

By Nagaraja

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು ಇತ್ತೀಚೆಗಷ್ಟೇ ದೇಶದಲ್ಲಿ ಎಲ್ಲ ಹೊಸತನದ 2015 ಎಲಂಟ್ರಾ ಕಾರನ್ನು ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪೆಟ್ರೋಲ್ ಪ್ರಾರಂಭಿಕ ಬೆಲೆ 14.13 ಲಕ್ಷ ರು.ಗಳಾಗಿರಲಿದೆ. ಹಾಗೆಯೇ ಡೀಸೆಲ್ ಪ್ರಾರಂಭಿಕ ಬೆಲೆ 14.57 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಒಂದೆಡೆ ಹೊಸ ತಲೆಮಾರಿನ ಎಲಂಟ್ರಾ ಬಿಡುಗಡೆಗೊಳ್ಳಲು ಸಜ್ಜಾಗಿರುವಂತೆಯೇ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ವೆರಿಯಂಟ್ ಗಳಲ್ಲಿ ಸಿಗಲಿದೆ.

ಎಂಜಿನ್

ಎಂಜಿನ್

1.8 ಲೀಟರ್ ಡ್ಯುಯಲ್ ವಿಟಿವಿಟಿ ಪೆಟ್ರೋಲ್ - 149.5 ಅಶ್ವಶಕ್ತಿ

1.6 ಲೀಟರ್ ವಿಜಿಟಿ ಸಿಆರ್ ಡಿಐ ಡೀಸೆಲ್ - 128 ಅಶ್ವಶಕ್ತಿ.

ಗೇರ್ ಬಾಕ್ಸ್ - 6 ಸ್ಪೀಡ್ ಆಟೋಮ್ಯಾಟಿಕ್ ಜೊತೆ ಮ್ಯಾನುವಲ್

ವಿಶೇಷತೆ

ವಿಶೇಷತೆ

ಆಟೋ ಹೆಡ್ ಲ್ಯಾಂಪ್, ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್, ಆಟೋ ಕ್ರೂಸ್ ಕಂಟ್ರೋಲ್, 10 ವಿಧದ ಪವರ್ ಸೀಟು ಜೊತೆ ಸೊಂಟಕ್ಕೆ ಬೆಂಬಲ.

ಮೈಲೇಜ್

ಮೈಲೇಜ್

ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಪೆಟ್ರೋಲ್ ಮಾದರಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 16.3 ಕೀ.ಮೀ. ಮೈಲೇಜ್ ನೀಡಲಿದೆ. ಹಾಗೆಯೇ ಡೀಸೆಲ್ ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ವೆರಿಯಂಟ್ ಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 22.7 ಹಾಗೂ 19.11 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸುರಕ್ಷತೆ

ಸುರಕ್ಷತೆ

ಆರು ಏರ್ ಬ್ಯಾಗ್, ಇಎಸ್ ಸಿ, ಎಬಿಎಸ್ ಜೊತೆ ಇಬಿಡಿ, ಹಿಲ್ ಅಸಿಸ್ಟ್ ಕಂಟ್ರೋಲ್ ಇತ್ಯಾದಿ.

ವೆರಿಯಂಟ್

ವೆರಿಯಂಟ್

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಎಸ್ ಎಕ್ಸ್ ರಿಯಂಟ್ ನಲ್ಲಿ ಮಾತ್ರ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಾಗಲಿದೆ. ಇನ್ನು ಪೆಟ್ರೋಲ್ ಮಾದರಿಯು ಎಸ್, ಮಿಡ್ ಎಸ್, ಮಿಡ್ ಎಸ್ ಎಕ್ಸ್ ಮತ್ತು ಟಾಪ್ ಎಂಡ್ ಎಸ್ ಎಕ್ಸ್ ಆಟೋಮ್ಯಾಟಿಕ್ ವೆರಿಯಂಟ್ ಪಡೆಯಲಿದೆ. ಹಾಗೆಯೇ ಡೀಸೆಲ್ ಮಾದರಿಯು ಎಸ್, ಎಸ್ ಎಕ್ಸ್ ಹಾಗೂ ಎಸ್ ಎಕ್ಸ್ ಆಟೋಮ್ಯಾಟಿಕ್ ವೆರಿಯಂಟ್ ಗಳು ಪಡೆಯಲಿದೆ.

More from DriveSpark

Article Published On: Saturday, May 9, 2015, 15:03 [IST]
English summary
Hyundai has launched its all-new 2015 Elantra in India. Their new sedan follows their 3D philosophy of Driving Pleasure, Design Finesse and Delightful Performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+