ಬರುತ್ತಿದೆ ಹ್ಯುಂಡೈ ಎಲೈಟ್ ಐ20 ವಿಶೇಷ ವಾರ್ಷಿಕ ಆವೃತ್ತಿ

By Nagaraja

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರ್ಸ್, ತನ್ನ ಜನಪ್ರಿಯ ಎಲೈಟ್ ಐ20 ಮೊದಲ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಸದ್ಯದಲ್ಲೇ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹ್ಯುಂಡೈ ಎಲೈಟ್ ಐ20 ಅತಿ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿತ್ತು. ಪ್ರೀಮಿಯಂ ನೋಟ, ವಿಶ್ವಾಸಾರ್ಹತೆ ಇವೆಲ್ಲವೂ ಎಲೈಟ್ ಐ20 ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಹ್ಯುಂಡೈ ಎಲೈಟ್ ಐ20

ಪ್ರಸ್ತುತ ಒಂದನೇ ವರ್ಷಾಚರಣೆಯಲ್ಲಿರುವ ಸಂಸ್ಥೆಯು ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧಗೊಳ್ಳುತ್ತಿದೆ. ಇದು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಹಾಗೂ ವಿಶೇಷ ಆವೃತ್ತಿಯ ಲಾಂಛನವನ್ನು ನಿರೀಕ್ಷೆ ಮಾಡಬಹುದಾಗಿದೆ. ವರದಿಗಳ ಪ್ರಕಾರ ಆಗಸ್ಟ್ ತಿಂಗಳಲ್ಲೇ ವಿಶೇಷ ಆವೃತ್ತಿ ಬಿಡುಗಡೆಯಾಗುವ ಎಲ್ಲ ಸಾಧ್ಯತೆಗಳಿವೆ.

ಹ್ಯುಂಡೈ ಎಲೈಟ್ ಐ20

ಎಲೈಟ್ ಐ20 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು ಇಂತಿದೆ:
  • 1.2 ಲೀಟರ್ ಕಪ್ಪ ಪೆಟ್ರೋಲ್ - ಡ್ಯುಯಲ್ ವಿಟಿವಿಟಿ, 82 ಅಶ್ವಶಕ್ತಿ, 115 ಎನ್‌‍ಎಂ ತಿರುಗುಬಲ, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.
  • 1.4 ಲೀಟರ್ ಯು2 ಸಿಆರ್‌ಡಿಐ ಡೀಸೆಲ್ - 89 ಅಶ್ವಶಕ್ತಿ, 220 ಎನ್‌‍ಎಂ ತಿರುಗುಬಲ, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.

Article Published On: Saturday, August 1, 2015, 10:12 [IST]
English summary
Hyundai Elite i20 Special Edition To Be Launched On 1st Anniversary
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+