ಹ್ಯುಂಡೈ ಐ20 ವಿಶೇಷ ಆವೃತ್ತಿ ಬಿಡುಗಡೆ; ಬೆಲೆ 6.69 ಲಕ್ಷ ರು.
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, ತನ್ನ ಅತ್ಯಂತ ಜನಪ್ರಿಯ ಎಲೈಟ್ ಐ20 ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಾರಂಭಿಕ ಬೆಲೆ 6.69 ಲಕ್ಷ ರು.ಗಳಾಗಿರಲಿದೆ.
ಭಾರತದ ವರ್ಷದ ಕಾರು ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಹ್ಯುಂಡೈ ಎಲೈಟ್ ಐ20 ಪೆಟ್ರೋಲ್ ಹಾಗೂ ಡೀಸೆಲ್ ಸ್ಪೋರ್ಟ್ಸ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಪೆಟ್ರೋಲ್ ವೆರಿಯಂಟ್: 6.69 ಲಕ್ಷ ರು.
- ಡೀಸೆಲ್ ವೆರಿಯಂಟ್: 7.84 ಲಕ್ಷ ರು.
ವಿಶೇಷ ಬಾಡಿ ಗ್ರಾಫಿಕ್ಸ್, 16 ಇಂಚುಗಳ ಡೈಮಂಡ್ ಕಟ್ ಅಲಾಯ್ ವೀಲ್, ಅಲ್ಯೂಮಿನಿಯಂ ಪೆಡಲ್ ಇವೆಲ್ಲವೂ ಐ20 ವಿಶೇಷ ಆವೃತ್ತಿಯ ಪ್ರಮುಖ ಆಕರ್ಷಣೆಯಾಗಿರಲಿದೆ.
ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.2 ಲೀಟರ್ ಕಪ್ಪಾ ಡ್ಯುಯಲ್ ವಿಟಿವಿಟಿ ಪೆಟ್ರೋಲ್ 83 ಅಶ್ವಶಕ್ತಿಯನ್ನು 1.4 ಲೀಟರ್ ಯು2 ಸಿಆರ್‌ಡಿಐ ಎಂಜಿನ್ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.


Click it and Unblock the Notifications