ಕ್ರೆಟಾಗೆ ಇಲ್ಲದ ಹ್ಯುಂಡೈ ಡಿಸೆಂಬರ್ ಡಿಲೈಟ್ ಆಫರ್
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ, ಈ 2015ನೇ ವರ್ಷಾಂತ್ಯದ ವೇಳೆಯಲ್ಲಿ ವಾಹನ ಪ್ರೇಮಿಗಳಿಗಾಗಿ ಡಿಸೆಂಬರ್ ಡಿಲೈಟ್ ಆಫರ್ ಗಳನ್ನು ಮುಂದಿಟ್ಟಿದೆ. ಇದರ ಗರಿಷ್ಠ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದಾಗಿದೆ.
Also Read: ಡಿಸೆಂಬರ್ ಸೆಲೆಬ್ರೇಷನ್ಸ್ ಆಫರ್; ರೆನೊ ಕಾರು ಖರೀದಿಗೆ ಇದೇ ಸಕಾಲ!
ಪ್ರಸ್ತುತ ಆಫರ್ ಡಿಸೆಂಬರ್ 31ರ ವರೆಗೆ ಲಭ್ಯವಿರಲಿದ್ದು, ಝಿರೋ ಡೌನ್ ಪೇಮೆಂಟ್, ಮೂರು ವರ್ಷಗಳ ಉಚಿತ ವಾರಂಟಿ ಹಾಗೂ ನಗದು ರಿಯಾಯಿತಿ ಆಫರ್ ಗಳ ಜೊತೆಗೆ ಗರಿಷ್ಠ 70,000 ರು.ಗಳ ವರೆಗೆ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ. ಈ ಎಲ್ಲ ಆಫರ್ ಗಳ ಬಗೆಗಿನ ಸಮಗ್ರ ಮಾಹಿತಿಗಾಗಿ ಹತ್ತಿರದ ಹ್ಯುಂಡೈ ಶೋ ರೂಂಗಳಿಗೆ ಈ ಕೂಡಲೇ ಭೇಟಿ ಕೊಡಿರಿ. ಹ್ಯುಂಡೈನ ಏಳು ಜನಪ್ರಿಯ ಮಾದರಿಗಳಿಗೆ ಆಫರ್ ಗಳನ್ನು ನೀಡಲಾಗುತ್ತಿದ್ದು, ಈ ಬಗ್ಗೆ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಇಯಾನ್
ಪ್ರಾರಂಭಿಕ ಬೆಲೆ 3.1 ಲಕ್ಷ ರು. (ಪೆಟ್ರೋಲ್)
ಹ್ಯುಂಡೈ ಇಯಾನ್ ಪೆಟ್ರೋಲ್ ಮಾದರಿ ಖರೀದಿ ವೇಳೆಯಲ್ಲಿ ಗ್ರಾಹಕರು 44,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಎಕ್ಸ್‌ಸೆಂಟ್
ಪ್ರಾರಂಭಿಕ ಬೆಲೆ 5.18 ಲಕ್ಷ ರು. (ಪೆಟ್ರೋಲ್)
ಹ್ಯುಂಡೈ ಎಕ್ಸ್ ಸೆಂಟ್ ಪೆಟ್ರೋಲ್ ಅಥವಾ ಡೀಸೆಲ್ ಮಾದರಿ ಖರೀದಿ ವೇಳೆಯಲ್ಲಿ 55,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಗ್ರಾಂಡ್ ಐ10
ಪ್ರಾರಂಭಿಕ ಬೆಲೆ 4.69 ಲಕ್ಷ ರು. (ಪೆಟ್ರೋಲ್)
ಹ್ಯುಂಡೈ ಗ್ರಾಂಡ್ ಐ10 ಪೆಟ್ರೋಲ್ ಅಥವಾ ಡೀಸೆಲ್ ಮಾದರಿ ಖರೀದಿಯಲ್ಲಿ ಗರಿಷ್ಠ 55,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ವೆರ್ನಾ
ಪ್ರಾರಂಭಿಕ ಬೆಲೆ 7.80 ಲಕ್ಷ ರು. (ಪೆಟ್ರೋಲ್)
ಅದೇ ರೀತಿ ಹ್ಯುಂಡೈನ ಜನಪ್ರಿಯ ವೆರ್ನಾ ಮಧ್ಯಮ ಗಾತ್ರದ ಸೆಡಾನ್ ಕಾರಿನ ಖರೀದಿ ವೇಳೆಯಲ್ಲೂ ಗರಿಷ್ಠ 65,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ. ಈ ಆಫರ್ ವೆರ್ನಾ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಿಗೂ ಅನ್ವಯವಾಗುತ್ತದೆ.

ಹ್ಯುಂಡೈ ಐ10
ಇಲ್ಲಿ ಹ್ಯುಂಡೈ ಐ10 ಪೆಟ್ರೋಲ್ ಅಥವಾ ಸಿಎನ್‌ಜಿ ವೆರಿಯಂಟ್ ಖರೀದಿ ವೇಳೆಯಲ್ಲೂ 50,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಎಲಂಟ್ರಾ
ಹ್ಯುಂಡೈ ಎಲಂಟ್ರಾ ಪೆಟ್ರೋಲ್ ಅಥವಾ ಡೀಸೆಲ್ ಮಾದರಿ ಖರೀದಿ ವೇಳೆಯಲ್ಲೂ 60,000 ರು.ಗಳ ವರೆಗೆ ಸೇವ್ ಮಾಡುವ ಅವಕಾಶ ನಿಮ್ಮದಾಗಿರುತ್ತದೆ.

ಸಾಂಟಾಫೆ
ಹ್ಯುಂಡೈನ ನೆಚ್ಚಿನ ಕ್ರೀಡಾ ಬಳಕೆಯ ವಾಹನ ಸಾಂಟಾಫೆ ಖರೀದಿಯಲ್ಲೂ ಗರಿಷ್ಟ 70,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಹಾಗಿದ್ದರೂ ಹ್ಯುಂಡೈ ಡಿಸೆಂಬರ್ ಡಿಲೈಟ್ ಆಫರ್ ಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಕ್ರೆಟಾ ಕಾಂಪಾಕ್ಟ್ ಎಸ್‌ಯುವಿ, ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಐ20 ಆಕ್ಟಿವ್ ಪ್ರೀಮಿಯಂ ಕ್ರಾಸೋವರ್ ಮಾದರಿಗಳಿಗೆ ಅನ್ವಯವಾಗುವುದಿಲ್ಲ.

ಕಾರುಗಳಿಗೆ ಭಾರಿ ಡಿಸ್ಕೌಂಟ್; ವರ್ಷಾಂತ್ಯದ ಆಫರ್ ಮಿಸ್ ಮಾಡದಿರಿ!


Click it and Unblock the Notifications