ಕಣ್ಮನ ಸೆಳೆದ 2016 ಹ್ಯುಂಡೈ ವೆಲೊಸ್ಟರ್
ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಕೆಲವೊಂದು ಸಣ್ಣ ಪುಟ್ಟ ಬದಲವಾವಣೆಗಳೊಂದಿಗೆ ಹೊಸ ವೆಲೊಸ್ಟರ್ ಮಾದರಿಯನ್ನು ಪರಿಚಯಿಸಿದೆ.
2015 ಚಿಕಾಗೊ ಆಟೋ ಶೋದಲ್ಲಿ ಹೊಸ ಹ್ಯುಂಡೈ ವೆಲೊಸ್ಟರ್ ಅನಾವರಣಗೊಂಡಿದೆ. ಇದು ಕಾರಿನ ಮುಂಭಾಗದಲ್ಲಿ ಫ್ರಂಟ್ ಗ್ರಿಲ್, 17 ಇಂಚಿನ ಅಲಾಯ್ ವೀಲ್, 10ಎಂಎಂ ಹೆಚ್ಚುವರಿ ಅಗಲವಾದ ಚಕ್ರಗಳು ಹಾಗೂ 18 ಇಂಚಿನ ಅಲಾಯ್ ವೀಲ್ ಆಯ್ಕೆಯನ್ನು ಹೊಂದಿರುತ್ತದೆ.

ಇನ್ನು ಕಾರಿನೊಳಗೂ ಕೆಲವೊಂದು ಬದಲಾವಣೆಗಳನ್ನು ಕಾಣಬಹುದಾಗಿದೆ. ಇದರಲ್ಲಿ ಪ್ರಮುಖವಾಗಿಯೂ ಇನ್ಪೋಟೈನ್ಮೆಂಟ್ ಸಿಸ್ಟಂನಲ್ಲಿ ಬದಲಾವಣೆ ಕಂಡುಬಂದಿದೆ.

ಅಮೆರಿಕದಲ್ಲಿ ಮಾರಾಟವಾಗಲಿರುವ ವೆಲೊಸ್ಟರ್ ಟರ್ಬೊ ವೆರಿಯಂಟ್ ಏಳು ಇಂಚಿನ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಪ್ರಸಕ್ತ ಸಾಲಿನಲ್ಲೇ ಹೊಸ ವೆಲೊಸ್ಟರ್ ಕ್ರಾಸೋವರ್ ಮಾದರಿಯು ಅರಬ್ ರಾಷ್ಟ್ರಗಳನ್ನು ತಲುಪಲಿದೆ.


Click it and Unblock the Notifications








