ಹ್ಯುಂಡೈ ನವರಾತ್ರಿ ಆಫರ್ ಮಿಸ್ ಮಾಡದಿರಿ

By Nagaraja

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ತನ್ನ ನಿರ್ದಿಷ್ಟ ಮಾದರಿಗಳಿಗೆ ನವರಾತ್ರಿ ಆಫರ್ ಗಳನ್ನು ಮುಂದಿಟ್ಟಿದೆ. ಈ ಮೂಲಕ ಗರಿಷ್ಠ ಮಾರಾಟ ವರ್ಧನೆಯನ್ನು ಗುರಿಯಾರಿಸಿಕೊಂಡಿದೆ.

ಹ್ಯುಂಡೈ ನವರಾತ್ರಿ ಆಫರ್ ಗಳು ಸಾಂಟಾ ಫೆ, ಗ್ರಾಂಡ್ ಐ10, ಎಲಂಟ್ರಾ, ಇಯಾನ್ ಮತ್ತು ವೆರ್ನಾ ಮಾದರಿಗಳಿಗೆ ಮಾತ್ರ ಅನ್ವಯವಾಗಲಿದೆ. ಅಂದರೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕ್ರೆಟಾ ಕಾಂಪಾಕ್ಟ್ ಎಸ್‌ಯುವಿ, ಆಕ್ಟಿವ್ ಐ20 ಕ್ರಾಸೋವರ್ ಹಾಗೂ ಎಲೈಟ್ ಐ20 ಹ್ಯಾಚ್ ಬ್ಯಾಕ್ ಆಫರ್ ಗಳಿಂದ ವಂಚಿತವಾಗಲಿದೆ.

ಹ್ಯುಂಡೈ ನವರಾತ್ರಿ ಆಫರ್ ಮಿಸ್ ಮಾಡದಿರಿ

ಆಫರ್ ಗಳು ಅಕ್ಟೋಬರ್ 31ರ ವರೆಗೆ ಲಭ್ಯವಾಗಲಿದ್ದು, ಗರಿಷ್ಠ ಒಂದು ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಅಲ್ಲದೆ ಅದೃಷ್ಟ ಗ್ರಾಹಕರಿಗೆ ಒಂದು ಲಕ್ಷದ ರು. ವರೆಗಿನ ಚಿನ್ನ ಗೆಲ್ಲುವ ಅವಕಾಶವಿರುತ್ತದೆ.

ಸಾಂಟಾ ಫೆ

ಸಾಂಟಾ ಫೆ

ಹ್ಯುಂಡೈ ಐಷಾರಾಮಿ ಎಸ್‌ಯುವಿ ಸಾಂಪಾಫೆ ಖರೀದಿಯ ವೇಳೆಯಲ್ಲಿ ಒಂದು ಲಕ್ಷದ ವರೆಗೆ ಪ್ರಯೋಜನ ನೀಡಲಾಗುತ್ತಿದೆ.

ಎಲಂಟ್ರಾ

ಎಲಂಟ್ರಾ

ಅದೇ ಹೊತ್ತಿಗೆ ಎಲಂಟ್ರಾ ಖರೀದಿ ವೇಳೆಯಲ್ಲಿ 90,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ವೆರ್ನಾ

ವೆರ್ನಾ

ಇನ್ನು ಹ್ಯುಂಡೈ ಅತಿ ಯಶಸ್ಸಿನ ಕಾರುಗಳಲ್ಲಿ ಒಂದಾಗಿರುವ ವೆರ್ನಾ ಖರೀದಿ ವೇಳೆಯಲ್ಲಿ 83,000 ರು.ಗಳ ವರೆಗಿನ ಪ್ರಯೋಜನ ಪಡೆಯಬಹುದಾಗಿದೆ.

ಎಕ್ಸ್ ‌ಸೆಂಟ್

ಎಕ್ಸ್ ‌ಸೆಂಟ್

ಅದೇ ಹೊತ್ತಿಗೆ ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಖರೀದಿ ವೇಳೆಯಲ್ಲಿ 70,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ. ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್ ಗಳಿಗೂ ಆಫರ್ ಅನ್ವಯವಾಗಲಿದೆ.

ಎಕ್ಸ್‌ಸೆಂಟ್ ಪ್ರಾರಂಭಿಕ ಬೆಲೆ: 5.18 ಲಕ್ಷ ರು.

ಗ್ರಾಂಡ್ ಐ10

ಗ್ರಾಂಡ್ ಐ10

ಅದೇ ರೀತಿ ಗ್ರಾಂಡ್ ಐ10 ಹ್ಯಾಚ್ ಬ್ಯಾಕ್ ಕಾರುಗಳಿಗೆ 70,000 ರು.ಗಳ ವರೆಗಿನ ಪ್ರಯೋಜನ ನೀಡಲಾಗುತ್ತಿದೆ. ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್ ಗಳಿಗೂ ಆಫರ್ ಅನ್ವಯವಾಗಲಿದೆ.

ಗ್ರಾಂಡ್ ಐ10 ಪ್ರಾರಂಭಿಕ ಬೆಲೆ: 4.69 ಲಕ್ಷ ರು.

ಇಯಾನ್

ಇಯಾನ್

ಇನ್ನುಳಿದಂತೆ ಹ್ಯುಂಡೈ ಎಂಟ್ರಿ ಲೆವೆಲ್ ಕಾರು ಇಯಾನ್ ಡಿ ಲೈಟ್ ಪ್ಲಸ್ 2.99 ಲಕ್ಷ ರು.ಗಳಲ್ಲಿ ಲಭ್ಯವಾಗಲಿದೆ. ಇಲ್ಲಿ ಎಕ್ಸ್ ಚೇಂಜ್ ಬೋನಸ್ ಜೊತೆಗೆ ಪೆಟ್ರೋಲ್ ಹಾಗೂ ಸಿಎನ್‌ಜಿ ವೆರಿಯಂಟ್ ಝೀರೋ ಡೌನ್ ಪೇಮೆಂಟ್ ನಲ್ಲಿ ಕಾರು ನಿಮ್ಮದಾಗಿಸಬಹುದಾಗಿದೆ.

Article Published On: Tuesday, October 20, 2015, 15:02 [IST]
English summary
Hyundai special discounts for Navratri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+