ಮಿಸ್ ಮಾಡದಿರಿ ಹ್ಯುಂಡೈ 'ಫ್ರೀ ಕಾರ್ ಕೇರ್ ಕ್ಲಿನಿಕ್'
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ಸ್ ಇಂಡಿಯಾ ಸಂಸ್ಥೆಯು 19ನೇ ಆವೃತ್ತಿಯ 'ಫ್ರೀ ಕಾರ್ ಕೇರ್ ಕ್ಲಿನಿಕ್' ಕಾರ್ಯಕ್ರಮವನ್ನು ಆಯೋಜಿಸಿದೆ.
ವಾಹನ ಮಾರಾಟದ ನಂತರವೂ ಉತ್ತಮ ಗ್ರಾಹಕ ಸೇವೆ ಕಾಯ್ದುಕೊಳ್ಳುವುದು ಹ್ಯುಂಡೈ ಗುರಿಯಾಗಿದೆ. ಹ್ಯುಂಡೈ ಉಚಿತ ಕಾರ್ ಕೇರ್ ಕ್ಲಿನಿಕ್ ಕಾರ್ಯಕ್ರಮವು 2015 ಮಾರ್ಚ್ 13ರಿಂದ 22ರ ವರೆಗೆ ನಡೆಯಲಿದೆ.

ಈ ಅವಧಿಯಲ್ಲಿ ದೇಶದ್ಯಾಂತ ಸಮಗ್ರ ವಾಹನ ತಪಾಸಣೆಯನ್ನು ಹ್ಯುಂಡೈ ಹಮ್ಮಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ 90ಕ್ಕೂ ಹೆಚ್ಚು ಅಂಶಗಳತ್ತ ಹ್ಯುಂಡೈ ಗಮನ ಕೇಂದ್ರಿಕರಿಸಲಿದೆ. ಇದರಲ್ಲಿ ಎಂಜಿನ್, ಎಲೆಕ್ಟ್ರಿಕಲ್ ಸಿಸ್ಟಂ, ಗೇರ್ ಬಾಕ್ಸ್, ಕಾರಿನಡಿ, ಎಸಿ ಮುಂತಾದ ಭಾಗಗಳು ಸೇರಿರಲಿದೆ.
ಇದೇ ವೇಳೆಯಲ್ಲಿ ಇನ್ನಿತರ ಹಲವು ಪ್ರಯೋಜನಗಳನ್ನು ಹ್ಯುಂಡೈ ತಮ್ಮ ಗ್ರಾಹಕರಿಗಾಗಿ ಒದಗಿಸುತ್ತದೆ. ಇದರಲ್ಲಿ ಬಿಡಿಭಾಗಗಳಿಗೆ, ಆಯ್ದ ಆಕ್ಸೆಸರಿಗಳಿಗೆ, ಮೌಲ್ಯ ವರ್ಧಿತ ಸೇವೆ ಹಾಗೂ ಕಾರ್ಮಿಕ ಶುಲ್ಕದಲ್ಲಿ ರಿಯಾಯಿತಿ ದರ ನೀಡಲಾಗುವುದು.
ಹಾಗೆಯೇ ವಿಸ್ತರಿತ ವಾರಂಟಿ ಗಿಟ್ಟಿಸಿಕೊಳ್ಳುವವರಿಗೆ ಶೇಕಡಾ 20ರಷ್ಟು ಆಫರ್ ಕೂಡಾ ಹ್ಯುಂಡೈ ನೀಡುತ್ತಿದೆ. ಇನ್ನು ಹಳೆಯ ಕಾರುಗಳನ್ನು ಎಕ್ಸ್‌ಚೇಂಜ್ ಮಾಡಲು ಬಯಸುವ ಗ್ರಾಹಕರಿಗೆ ವಿಶೇಷ ಆಫರ್ ಕೂಡಾ ನೀಡಲಾಗುವುದು.
ಆಸಕ್ತ ಗ್ರಾಹಕರು ಹ್ಯುಂಡೈ ಕೇರ್ ಮೊಬೈಲ್ ಅಪ್ಲಿಕೇಷನ್ ಮುಖಾಂತರವೂ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.


Click it and Unblock the Notifications








