ಇನ್ನು ಕೆಲವೇ ದಿನಗಳಲ್ಲಿ 2015 ಹ್ಯುಂಡೈ ವೆರ್ನಾ ಬಿಡುಗಡೆ

By Nagaraja

ಹ್ಯುಂಡೈ ಅಭಿಮಾನಿಗಳಿಗೆ ಮಗದೊಂದು ಶುಭ ಸಮಾಚಾರ ಬಂದಿದ್ದು, ಎಲ್ಲ ಹೊಸತನದಿಂದ ಕೂಡಿರುವ 2015 ವೆರ್ನಾ ಇದೇ ಬರುವ ಫೆಬ್ರವರಿ 16ರಂದು ಭರ್ಜರಿ ಭರ್ಜರಿ ಬಿಡುಗಡೆಯಾಗಲಿದೆ ಎಂಬುದು ತಿಳಿದು ಬಂದಿದೆ.

ಈ ಮೂಲಕ ದೇಶದ ಎರಡನೇ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಮಧ್ಯಮ ಗಾತ್ರದ ಸೆಡಾನ್ ಕಾರುಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸಿಯಾಝ್ ಹಾಗೂ ಹೋಂಡಾ ಸಿಟಿ ಮಾದರಿಗಳಿಗೆ ಸವಾಲೊಡ್ಡಲಿದೆ.

2015 hyundai verna

ದಕ್ಷಿಣ ಕೊರಿಯಾದ ಸಂಸ್ಥೆಯಾಗಿರುವ ಹ್ಯುಂಡೈ ದೇಶದಲ್ಲಿ 10 ಜನಪ್ರಿಯ ಮಾದರಿಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ 2015 ವೆರ್ನಾ ಒಂದಾಗಿದ್ದು, ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ.

ಎಂಜಿನ್
1396 ಸಿಸಿ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ - 105 ಅಶ್ವಶಕ್ತಿ, 138 ತಿರುಗುಬಲ, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಮೈಲೇಜ್ - 17.43 kpl.
1591 ಸಿಸಿ ಫೋರ್ ಸಿಲಿಂಡ್ ಪೆಟ್ರೋಲ್ ಪೆಟ್ರೋಲ್ ಎಂಜಿನ್ - 121 ಅಶ್ವಶಕ್ತಿ, 155 ತಿರುಗುಬಲ, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಮೈಲೇಜ್ - 17.01 kpl.
1396 ಸಿಸಿ ಫೋರ್ ಸಿಲಿಂಡ್ ಡೀಸೆಲ್ ಪೆಟ್ರೋಲ್ ಎಂಜಿನ್ - 89 ಅಶ್ವಶಕ್ತಿ, 224 ತಿರುಗುಬಲ, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಮೈಲೇಜ್ - 23.5 kpl.
1582 ಸಿಸಿ ಫೋರ್ ಸಿಲಿಂಡ್ ಡೀಸೆಲ್ ಪೆಟ್ರೋಲ್ ಎಂಜಿನ್ - 126 ಅಶ್ವಶಕ್ತಿ, 259 ತಿರುಗುಬಲ, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್, ಮೈಲೇಜ್ - 22.32 kpl.

ಇವೆಲ್ಲದರ ಜೊತೆಗೆ 1.6 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಐಚ್ಛಿಕ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರಲಿದೆ. ಒಟ್ಟಿನಲ್ಲಿ ಹೊರಮೈ ಜೊತೆಗೆ ಒಳಮೈಯಲ್ಲಿ ಬದಲಾವಣೆ ಕಂಡುಬರಲಿರುವ ಹ್ಯುಂಡೈ ವೆರ್ನಾ ವಾಹನ ಪ್ರೇಮಿಗಳನ್ನು ಆಕರ್ಷಿಸಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

More from DriveSpark

Article Published On: Thursday, February 5, 2015, 16:22 [IST]
English summary
Hyundai Motors currently offers ten products in the Indian market. They provide Eon, i10, Grand i10, Xcent, Elite i20, Verna, Elantra, Sonata and Santa Fe and Santro Xing. They plan to introduce more products in the coming 2015 year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+