ವಾಹನಗಳ ಹೊರಮೈ ವಿನ್ಯಾಸ ನಿರ್ಣಾಯಕ: ಜೆಡಿ ಪವರ್
ಹೇಗೆ ಒಂದು ಕಾರಿನ ಹೊರ ನೋಟವು ಖರೀದಿಗಾರರನ್ನು ಆಕರ್ಷಿಸುತ್ತಿದೆಯೇ ಅದೇ ರೀತಿ ಕಾರಿನ ಹೊರಮೈ ವಿನ್ಯಾಸ ಸಹ ಅಷ್ಟೇ ನಿರ್ಣಾಯಕ ಎಂದು ಜೆಡಿ ಪವರ್ ನಡೆಸಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಹಕ ಸಂತೃಪ್ತಿ ಬಗ್ಗೆ ನಡೆಸಲಾಗಿರುವ Automotive Performance, Execution and Layout (APEAL)ಅಧ್ಯಯನ ವರದಿಯಲ್ಲಿ ಜೆಡಿ ಪವರ್ ಇದನ್ನು ಬಯಲುಗೊಳಿಸಿದೆ.

ಸಣ್ಣ ಕಾರುಗಳಲ್ಲೂ ವಾಹನ ಹೊರಮೈಯ ಮಹತ್ವ ಹೆಚ್ಚಾಗಿದೆ. ಮಧ್ಯಮ ಗಾತ್ರದ ಹಾಗೂ ಉಪಯುಕ್ತ ವಾಹನಗಳು ಸಹ ಇದರಿಂದ ಹೊರತಾಗಿಲ್ಲ ಎಂದು ತಿಳಿಸಲಾಗಿದೆ.
ಹೊಸ ಕಾರು ಖರೀದಿಸುವ ಗ್ರಾಹಕರು ಕಾರಿನ ಒಟ್ಟಾರೆ ವಿನ್ಯಾಸದ ಮೇಲೆ ಅತಿ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ಕಾರಿನ ಶೈಲಿಯ ಹೊರತಾಗಿ, ವೈಶಿಷ್ಟ್ಯಗಳು, ಅಲಾಯ್ ವೀಲ್ ಇದೆಯೇ, ಸ್ಟೀರಿಂಗ್ ವೀಲ್ ನಲ್ಲೇ ಇತರೆ ಕ್ರಿಯಾತ್ಮಕತೆ, ಹ್ಯಾಂಡ್ಸ್ ಫ್ರೀ ಸಂಪರ್ಕ, ರಿವರ್ಸ್ ಪಾರ್ಕಿಂಗ್ ನೆರವು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಏರ್ ಬ್ಯಾಗ್ ಮುಂತಾದ ಸೌಲಭ್ಯಗಳ ಬಗ್ಗೆ ಗಮನ ಕೊಡುತ್ತಾರೆ.
ಒಟ್ಟು ಎಂಟು ವಿಧಗಳ ವಿಭಾಗದಲ್ಲಿ ಟೊಯೊಟಾ (ಎಟಿಯೋಸ್, ಎಟಿಯೋಸ್ ಲಿವಾ, ಎಟಿಯೋಸ್ ಲಿವಾ ಕ್ರಾಸ್) ಮತ್ತು ಹ್ಯುಂಡೈ (ಇಯಾನ್, ಐ10, ಎಲೈಟ್ ಐ20/ಆಕ್ಟಿವಾ) ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡರೆ ಮಧ್ಯಮ ಗಾತ್ರ ಹಾಗೂ ಎಸ್‌ಯುವಿಗಳಲ್ಲಿ ಅನುಕ್ರಮವಾಗಿ ಫೋಕ್ಸ್ ವ್ಯಾಗನ್ ಮತ್ತು ಮಹೀಂದ್ರ ಎಕ್ಸ್‌ಯುವಿ500 ಅಗ್ರ ಸ್ಥಾನ ಕಾಯ್ದುಕೊಂಡಿದೆ.


Click it and Unblock the Notifications








