ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

Written By:

2015 ಲಾಸ್ ಏಜಂಲೀಸ್ ಮೋಟಾರು ಶೋದಲ್ಲಿ 10ನೇ ತಲೆಮಾರಿನ ಹೋಂಡಾ ಸಿವಿಕ್ ಕೂಪೆ ಭರ್ಜರಿ ಎಂಟ್ರಿ ಕಾಣಲಿದೆ. ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಕಾನ್ಸೆಪ್ಟ್ ವಿನ್ಯಾಸದಿಂದ ಅನೇಕ ರಚನಾ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.

Also Read: ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

ಇದಕ್ಕೂ ಮೊದಲು ವರ್ಷಾರಂಭದಲ್ಲಿ ಸಾಗಿದ ನ್ಯೂಯಾರ್ಕ್ ಮೋಟಾರು ಶೋದಲ್ಲಿ ಹೋಂಡಾ ಸಿವಿಕ್ ಕೂಪೆ ಕಾರಿನ ಕಾನ್ಸೆಪ್ಟ್ ಮಾದರಿಯನ್ನು ಪರಿಚಯಿಸಲಾಗಿತ್ತು. ಈಗ ಲಾಸ್ ಏಜಂಲೀಸ್ ಶೋಗಿಂತಲೂ ಮುಂಚಿತವಾಗಿ ಅನಾವರಣ ಕಂಡಿದೆ.

ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

ನೂತನ ಸಿವಿಕ್ ಕೂಪೆ ಕಾರಿನ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಹೋಂಡಾ ವಾಹನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ನ್ಯೂಯಾರ್ಕ್ ಆಟೋ ಶೋದಲ್ಲಿ ಪ್ರದರ್ಶನ ಮಾಡಿದಕ್ಕಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ.

ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

ಸ್ವಭಾವ ರೇಖೆ, ಹೊಸ ಬಾಡಿ ಕಿಟ್, ಕಪ್ಪು ವರ್ಣದ ಗ್ರಿಲ್, ದೊಡ್ಡದಾದ ರಿಯರ್ ವೀಗ್ ಹಾಗೂ ಸೆಂಟ್ರಲ್ ಎಕ್ಸಾಸ್ಟ್ ಟಿಪ್ ಗಳು ಹೊರಮೈಯಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ.

ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

ಹೋಂಡಾ ಸಂಸ್ಥೆಯಿಂದ ಮಾಹಿತಿಗಳ ಪ್ರಕಾರ 2016 ಹೋಂಡಾ ಸಿವಿಕ್ ಕೂಪೆ 2016 ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

ಹೊಸತಾದ ಕ್ರೀಡಾತ್ಮಕ ಚಾಸೀ, ಹೆಚ್ಚು ಸ್ಥಳಾವಕಾಶಯುಕ್ತ ಒಳಮೈ, ಗರಿಷ್ಠ ಸುರಕ್ಷತೆಯು ಕಾರಿಗೆ ರಕ್ಷಣೆಯಾಗಿ ಪರಿಣಮಿಸಲಿದೆ.

ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

ತನ್ನ ಸೋದರ ಸೆಡಾನ್ ಕಾರಿನಂತೆ 2016 ಸಿವಿಕ್ ಕೂಪೆ ಎರಡು ಎಂಜಿನ್ ಗಳನ್ನು ಪಡೆಯಲಿದೆ. ಇದರ 2.0 ಲೀಟರ್ ಡಿಒಎಚ್‌ಸಿ ಐ-ವಿಟೆಕ್ ಎಂಜಿನ್ 187 ಎನ್ ಎಂ ತಿರುಗುಬಲದಲ್ಲಿ 158 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.5 ಲೀಟರ್ ಡಿಒಎಚ್‌ಸಿ ಡೈರಕ್ಟ್ ಇಂಜೆಕ್ಟಡ್ ಟರ್ಬೊಚಾರ್ಜ್ಡ್ ಎಂಜಿನ್ 219 ಎನ್‌ಎಂ ತಿರುಗುಬಲದಲ್ಲಿ 174 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸಕತ್ ಹಾಟ್ ಹೊಸ ತಲೆಮಾರಿನ ಹೋಂಡಾ ಸಿವಿಕ್ ಕೂಪೆ

ಉಳಿದಂತೆ ಎಲ್ ಇಡಿ ಹೆಡ್ ಲೈಟ್, ರಿಮೋಟ್ ಎಂಜಿನ್ ಸ್ಟ್ಯಾರ್ಟ್, ಆಟೋ ಕ್ಲೈಮೇಟ್ ಕಂಟ್ರೋಲ್, ಹೀಟಡ್ ಫ್ರಂಟ್ ಸೀಟ್, ಸೈಡ್ ಮಿರರ್, ರೈನ್ ಸೆನ್ಸಿಂಗ್ ವೈಪರ್, ಟಿಎಫ್ ಟಿ ಸೆಂಟರ್ ಮಿರರ್, ಏಳು ಇಂಚುಗಳ ಟಚ್ ಸ್ಕ್ರೀನ್ ಪರದೆ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗಲಿದೆ.

Read more on ಹೋಂಡಾ honda
English summary
Production Ready Honda Civic Coupe Unveiled In LA - Photos
Story first published: Friday, November 20, 2015, 15:40 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark