ಲಂಬೋರ್ಗಿನಿಯಿಂದ ಮಗದೊಂದು ಸೂಪರ್ ಕಾರು ಅನಾವರಣ
ಇಟಲಿಯ ಸೂಪರ್ ಕಾರು ತಯಾರಿಕ ಸಂಸ್ಥೆ ಲಂಬೋರ್ಗಿನಿ ಅತಿ ನೂತನ ಅವೆಂಟಡೊರ್ ಸೂಪರ್ ವೆಲೊಸ್ ರೋಡ್ ಸ್ಟರ್ (Aventador Superveloce Roadster) ಮಾದರಿಯನ್ನು ಅನಾವರಣಗೊಳಿಸಿದೆ. ಇದು ಸೀಮಿತ 500 ಯುನಿಟ್ ಗಳಷ್ಟು ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.
ವಿಶೇಷವೆಂದರೆ ಕನ್ವರ್ಟಿಬಲ್ ಶೈಲಿಯ ವಿನ್ಯಾಸವನ್ನು ಈ ದುಬಾರಿ ಸೂಪರ್ ಕಾರು ಪಡೆಯಲಿದೆ. ಇದು ಮೊದಲ ಬಾರಿಗೆ 2015 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿತ್ತು.

ಕಾರಿನಡಿಯಲ್ಲಿ ನೈಸರ್ಗಿಕ ಚೋಷಿತ ಶಕ್ತಿಶಾಲಿ 6.5 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದ್ದು, 750 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 2.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ಅಂತೆಯೇ ಗಂಟೆಗೆ ಗರಿಷ್ಠ 350 ಕೀ.ಮೀ. ವೇಗವರ್ಧಿಸಬಲ್ಲ ಈ ಸೂಪರ್ ಕಾರಿನಲ್ಲಿ ಸೂಪರ್ ವೆಲೊಸ್ ಎಂಬ ಪದವು ಸೂಪರ್ ಫಾಸ್ಟ್ ಎಂಬುದನ್ನು ಸೂಚಿಸುತ್ತದೆ. ಇನ್ನು ಭಾರತೀಯ ರುಪಾಯಿ ಪ್ರಕಾರ ಲಂಬೋರ್ಗಿನಿ ಐಷಾರಾಮಿ ಕಾರು 3.5 ಕೋಟಿ ರು.ಗಳಷ್ಟು ಬೆಲೆ ಬಾಳಲಿದೆ.


Click it and Unblock the Notifications








