ಮಾರುತಿ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಫೀಚರ್

Written By:

ವಿದೇಶಗಳಿಗೆ ಹೋಲಿಸಿದಾಗ ಭಾರತೀಯ ಪ್ರಯಾಣಿಕ ಕಾರುಗಳ ಭದ್ರತಾ ಗುಣಮಟ್ಟ ತೀರಾ ಕಳಪೆ ಮಟ್ಟದಲ್ಲಿದೆ. ಕನಿಷ್ಠ ಏರ್ ಬ್ಯಾಗ್ ಫೀಚರ್ ಕೂಡಾ ಲಭ್ಯವಾಗದಿರುವುದು ಅತೀವ ಖೇದಕರ ಸಂಗತಿ.

Also Read: ಇಂದು ಅವರು, ನಾಳೆ ನೀವು, ನಾಳಿದ್ದು ಇನ್ಯಾರೊ ಮುಂದಕ್ಕೆ ಓದಲು ಕ್ಲಿಕ್ಕಿಸಿ

ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏರ್ ಬ್ಯಾಗ್ ಗಳಂತಹ ಸುರಕ್ಷಾ ವೈಶಿಷ್ಟ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ದೇಶದ ಮುಂಚೂಣಿಯ ಸಂಸ್ಥೆಗಳು ಕಾರಿನ ಭದ್ರತೆಯತ್ತವೂ ಗಮನ ಕೊಡುತ್ತಿದೆ.

ಮಾರುತಿ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಫೀಚರ್

ಇನ್ನೊಂದೆಡೆ ಸರಕಾರ ಸಹ ಇದರತ್ತ ಕಾರ್ಯಪ್ರವೃತ್ತವಾಗಿದ್ದು 2017ರ ವೇಳೆಯಾಗುವಾಗ ಎನ್‌ಸಿಎಪಿ ಯುರೋಪ್ ಮಾದರಿ ಢಿಕ್ಕಿ ಪರೀಕ್ಷೆಗಳಂತಹ ಸೇಫ್ಟಿ ವೈಶಿಷ್ಟ್ಯಗಳನ್ನು ಕಡ್ಡಾಯಗೊಳಿಸಲಿದೆ.

ಮಾರುತಿ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಫೀಚರ್

ಇತ್ತ ಮಾರುತಿ ಸಂಸ್ಥೆಯು ತನ್ನ ಎಂಟ್ರಿ ಲೆವೆಲ್ ಅಥವಾ ಸಣ್ಣ ಕಾರುಗಳಲ್ಲೂ ಎಬಿಎಸ್ ಹಾಗೂ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆಯನ್ನು ನೀಡುವ ಕುರಿತಂತೆ ಉತ್ಸುಕತೆಯನ್ನು ವ್ಯಕ್ತಪಡಿಸಿದೆ.

ಮಾರುತಿ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಫೀಚರ್

ಅಂದರೆ ಮಾರುತಿ ಆಲ್ಟೊ800 ಹಾಗೂ ಆಲ್ಟೊ ಕೆ10 ಗಳಂತಹ ಮಾದರಿಗಳಲ್ಲಿ ಐಚ್ಛಿಕ ಏರ್ ಬ್ಯಾಗ್ ಸುರಕ್ಷಾ ಸೌಲಭ್ಯಗಳು ಲಭ್ಯವಾಗಲಿದೆ. ಫೋರ್ಡ್, ಟೊಯೊಟಾ ಹಾಗೂ ಫೋಕ್ಸ್ ವ್ಯಾಗನ್ ಗಳಂತಹ ಸಂಸ್ಥೆಗಳು ಸ್ಟ್ಯಾಂಡರ್ಡ್ ಆಗಿ ತನ್ನೆಲ್ಲ ಶ್ರೇಣಿಗಳ ವಾಹನಗಳಿಗೆ ಏರ್ ಬ್ಯಾಗ್ ಗಳಂತಹ ಸೌಲಭ್ಯ ನೀಡುತ್ತಿರುವುದು ಸಹ ಮಾರುತಿಯ ಈ ಪೂರಕ ಬೆಳವಣಿಗೆ ಸಾಕ್ಷಿಯಾಗಿದೆ.

ಮಾರುತಿ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಫೀಚರ್

ಜಾಗತಿಕ ಅಂಕಿಅಂಶಗಳನ್ನು ಪರೀಶೀಲಿಸಿದಾಗ ವಿಸ್ತಾರವಾದ ಮಾರುಕಟ್ಟೆ ಹೊಂದಿರುವ ಹೊರತಾಗಿಯೂ ದೇಶದಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಾಹನ ತಯಾರಿಕ ಸಂಸ್ಥೆಗಳ ಜೊತೆಗೆ ಕೇಂದ್ರ ಸರಕಾರವು ಎಚ್ಚೆತ್ತುಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ.

ಮಾರುತಿ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಫೀಚರ್

ಅಷ್ಟಕ್ಕೂ ದೇಶದಲ್ಲಿ ದೈನಂದಿನ ಹೆಚ್ಚುತ್ತಿರುವ ಅಪಘಾತಗಳ ಹಿಂದಿರುವ ಕಾರಣಗಳೇನು? ನಿಯಮಗಳು ಪಾಲನೆಯಾಗುತ್ತಿಲ್ಲವೇ? ಈ ಬಗ್ಗೆ ಮುಕ್ತವಾಗಿ ಚರ್ಚಿಸಿರಿ.

ಇವನ್ನೂ ಓದಿ

ಕಾರು ಅಪಘಾತಕ್ಕೆ 25 ಕಾರಣ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನ! ಮುಂದಕ್ಕೆ ಓದಿ

English summary
Maruti To Offer Airbags And Anti-Lock Braking System For Mass Market Models
Story first published: Monday, October 19, 2015, 14:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark