ನಮ್ಮ ಆಲ್ಟೊ ವಿಶ್ವದಲ್ಲೇ ನಂ.1 ಕಾರು
ಮಾರುತಿ ಸುಜುಕಿ ಆಲ್ಟೊ ಭಾರತದ ನೆಚ್ಚಿನ ಕಾರು ಬ್ರಾಂಡ್ ಎಂಬುದರಲ್ಲಿ ಎರಡು ಮಾತೇ ಇಲ್ಲ. ಭಾರತದಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಆಲ್ಟೊ ಮಗದೊಮ್ಮೆ ವಿಶ್ವ ದರ್ಜೆಯಲ್ಲಿ ಹೆಸರು ಮಾಡಿದೆ.
ಹೌದು, 2014ನೇ ಸಾಲಿನಲ್ಲಿ ಅತಿ ಹೆಚ್ಚು ಮಾರಾಟವಾದ ಸಣ್ಣ ಕಾರೆಂಬ ಹೆಗ್ಗಳಿಕೆಗೆ ದೇಶದ ಜನಸಾಮಾನ್ಯ ಕಾರು ಮಾರುತಿ ಸುಜುಕಿ ಪಾತ್ರವಾಗಿದೆ. ಇದು ತನ್ನ ಪ್ರತಿಸ್ಪರ್ಧಿಯಾದ ಜರ್ಮನಿಯ ಫೋಕ್ಸ್‌ವ್ಯಾಗನ್ ಗಾಲ್ಫ್ ಮಾದರಿಯನ್ನು ಹಿಮ್ಮೆಟ್ಟಿಸಿದೆ.

01. ಮಾರುತಿ ಸುಜುಕಿ ಆಲ್ಟೊ (ಭಾರತ)
ಕಳೆದ ಒಂಬತ್ತು ವರ್ಷಗಳಿಂದ ದೇಶದಲ್ಲಿ ನಂ.1 ಮಾರಾಟದ ಕಾರು ಸ್ಥಾನ ಕಾಪಾಡಿಕೊಂಡು ಬಂದಿರುವ ಆಲ್ಟೊ 2014ನೇ ಸಾಲಿನಲ್ಲಿ ಒಟ್ಟು 264,544 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ. 2013ನೇ ಸಾಲಿಗೆ ಹೋಲಿಸಿದಾಗ ಇದು ಕಡಿಮೆಯಾದರೂ ಇದರಿಂದ ಆಲ್ಟೊ ಅಗ್ರಸ್ಥಾನಕ್ಕೆ ಮಾತ್ರ ಯಾವುದೇ ಕುತ್ತು ಸಂಭವಿಸಿಲ್ಲ. 2013ರಲ್ಲಿ 265,777 ಯುನಿಟ್‌ಗಳಷ್ಟು ಆಲ್ಟೊ ಮಾರಾಟವಾಗಿದ್ದವು.

02. ಫೋಕ್ಸ್‌ವ್ಯಾಗನ್ ಗಾಲ್ಪ್ (ಜರ್ಮನಿ)
ಜರ್ಮನಿಯ ಹೆಸರಾಂತ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಗಾಲ್ಪ್ ಸಣ್ಣ ಕಾರು ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯನ್ನು ಕಾಯ್ದುಕೊಂಡಿದೆ. 2013ನೇ ಸಾಲಿನಲ್ಲಿ 24,249 ಯುನಿಟ್‌ಗಳಷ್ಟು ಮಾರಾಟ ಕಾಯ್ದುಕೊಂಡಿದ್ದ ಗಾಲ್ಫ್ 29014ರಲ್ಲಿ ಶೇಕಡಾ 4.42ರಷ್ಟು ವರ್ಧನೆ ದಾಖಲಿಸಿದ್ದು ಒಟ್ಟು 255044 ಯುನಿಟ್ ಮಾರಾಟ ಕಂಡುಕೊಂಡಿದೆ.

03. ದೈಹಟ್ಸು ಟ್ಯಾಂಟೊ (ಜಪಾನ್)
2014ರಲ್ಲಿ ಒಟ್ಟು ಮಾರಾಟ - 234,456 ಯುನಿಟ್
2013ರ ಮಾರಾಟ ಸಂಖ್ಯೆ - 144,629 ಯುನಿಟ್
ವ್ಯತ್ಯಾಸ - ಶೇ. 62.11ರಷ್ಟು ಏರಿಕೆ

04. ಟೊಯೊಟಾ ಅಕ್ವಾ (ಜಪಾನ್)
2014ರಲ್ಲಿ ಒಟ್ಟು ಮಾರಾಟ - 233209 ಯುನಿಟ್
2013ರ ಮಾರಾಟ ಸಂಖ್ಯೆ - 262367 ಯುನಿಟ್
ವ್ಯತ್ಯಾಸ - ಶೇ. 11.11ರಷ್ಟು ಇಳಿಕೆ

05. ಹೋಂಡಾ ಫಿಟ್ (ಜಪಾನ್)
2014ರಲ್ಲಿ ಒಟ್ಟು ಮಾರಾಟ - 202838 ಯುನಿಟ್
2013ರ ಮಾರಾಟ ಸಂಖ್ಯೆ - 181414 ಯುನಿಟ್
ವ್ಯತ್ಯಾಸ - ಶೇ. 11.81ರಷ್ಟು ಏರಿಕೆ

ಭಾರತದ ಮೂಲದ ಮಗದೊಂದು ಜನಪ್ರಿಯ ಮಾದರಿಯಾಗಿರುವ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರು ಸಹ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
2014ರಲ್ಲಿ ಒಟ್ಟು ಮಾರಾಟ - 202831 ಯುನಿಟ್
2013ರ ಮಾರಾಟ ಸಂಖ್ಯೆ - 199347 ಯುನಿಟ್
ವ್ಯತ್ಯಾಸ - ಶೇ. 1.75ರಷ್ಟು ಏರಿಕೆ

07. ಫಿಯೆಟ್ ಪ್ಯಾಲಿಯೊ (ಬ್ರೆಜಿಲ್)
2014ರಲ್ಲಿ ಒಟ್ಟು ಮಾರಾಟ - 183,745 ಯುನಿಟ್
2013ರ ಮಾರಾಟ ಸಂಖ್ಯೆ - 177014 ಯುನಿಟ್
ವ್ಯತ್ಯಾಸ - ಶೇ. 3.80ರಷ್ಟು ಏರಿಕೆ

08. ಫೋಕ್ಸ್‌ವ್ಯಾಗನ್ ಗೋಲ್ (ಬ್ರೆಜಿಲ್)
2014ರಲ್ಲಿ ಒಟ್ಟು ಮಾರಾಟ - 183366 ಯುನಿಟ್
2013ರ ಮಾರಾಟ ಸಂಖ್ಯೆ - 255057 ಯುನಿಟ್
ವ್ಯತ್ಯಾಸ - ಶೇ. 28.11ರಷ್ಟು ಇಳಿಕೆ

09. ಹೋಂಡಾ ಎನ್-ಬಾಕ್ಸ್ (ಜಪಾನ್)
2014ರಲ್ಲಿ ಒಟ್ಟು ಮಾರಾಟ - 179939 ಯುನಿಟ್
2013ರ ಮಾರಾಟ ಸಂಖ್ಯೆ - 234995 ಯುನಿಟ್
ವ್ಯತ್ಯಾಸ - ಶೇ. 23.43ರಷ್ಟು ಇಳಿಕೆ

10. ಸುಜುಕಿ ವ್ಯಾಗನಾರ್ (ಜಪಾನ್)
2014ರಲ್ಲಿ ಒಟ್ಟು ಮಾರಾಟ - 175369 ಯುನಿಟ್
2013ರ ಮಾರಾಟ ಸಂಖ್ಯೆ - 186175 ಯುನಿಟ್

ವ್ಯತ್ಯಾಸ - ಶೇ. 5.80ರಷ್ಟು ಇಳಿಕೆ


Click it and Unblock the Notifications








