ಮಾರುತಿ ಬಲೆನೊ 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಟೆಸ್ಟಿಂಗ್
ಯಶಸ್ಸಿನ ಉತ್ತುಂಗಕ್ಕೇರಿರುವ ಮಾರುತಿ ಬಲೆನೊ ಹೊಸ ಎಂಜಿನ್ ಆಯ್ಕೆಯೊಂದಿಗೆ ಆಗಮನವಾಗಲಿದೆ. ನೂತನ 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ನೊಂದಿಗೆ ನೂತನ ಬಲೆನೊ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾಗುತ್ತಿದೆ.
ಪ್ರಸ್ತುತ ನೂತನ ಎಂಜಿನ್ ಹೊಂದಿರುವ ಬಲೆನೊ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಇದು ಅಂತರಾಷ್ಟ್ರೀಯ ಮಾರುಕಟ್ಟೆಗೆ ಈಗಾಗಲೇ ಪ್ರವೇಶ ನೀಡಿದೆ.

ಭಾರತದ ಘಟಕದಲ್ಲಿ ಮಾರುತಿ ಬಲೆನೊ ನಿರ್ಮಾಣವಾಗುತ್ತಿದೆ. ಆದರೆ ಪ್ರೀಮಿಯೇ ವರ್ಷನ್ ಇನ್ನಷ್ಟೇ ಭಾರತ ಪ್ರವೇಶ ಪಡೆಯಬೇಕಾಗಿದೆ.
ಮಾರುತಿ ಸುಜುಕಿ ಬೂಸ್ಟರ್ ಎಂಜಿನ್ ಸ್ಥಳೀಯವಾಗಿ ನಿರ್ಮಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇಲ್ಲಿಂದಲೇ ಜಾಗತಿಕ ಮಾರುಕಟ್ಟೆಗೆ ರಫ್ತಾಗುವ ಸಾಧ್ಯತೆಗಳಿವೆ.
ತಾಂತ್ರಿಕತೆ
1.0 ಲೀಟರ್ ಬೂಸ್ಟರ್ ಎಂಜಿನ್
5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್,
108.50 ಅಶ್ವಶಕ್ತಿ,
170 ಎನ್‌ಎಂ ತಿರುಗುಬಲ


Click it and Unblock the Notifications