ಎಸ್‌-ಕ್ರಾಸ್ ವೈಫಲ್ಯವನ್ನು ಬಲೆನೊ ಮೂಲಕ ಸರಿದೂಗಿಸಿದ ಮಾರುತಿ

Written By:

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಮಾರುತಿ ಎಸ್-ಕ್ರಾಸ್ ಕ್ರಾಸೋವರ್ ಮಾದರಿ ನಿರೀಕ್ಷಿದಷ್ಟು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಮಾರುತಿ ದೇಶದ್ಯಾಂತ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಶೋ ರೂಂ ಮುಖಾಂತರ ಇದೇ ಮೊದಲ ಬಾರಿಗೆ ಎಸ್-ಕ್ರಾಸ್ ಮಾರಾಟವನ್ನು ಪ್ರಾರಂಭಿಸಲಾಗಿತ್ತು.

Also Read: ಬಿಡುಗಡೆಯಾದ 2 ತಿಂಗಳಲ್ಲೇ ಮಾರುತಿ ಎಸ್-ಕ್ರಾಸ್‌ಗೆ 1 ಲಕ್ಷ ಡಿಸ್ಕೌಂಟ್! ಮುಂದಕ್ಕೆ ಓದಲು ಕ್ಲಿಕ್ಕಿಸಿ

ಆದರೆ ಎಸ್-ಕ್ರಾಸ್ ವೈಫಲ್ಯವು ಪ್ರೀಮಿಯಂ ನೆಕ್ಸಾ ಶೋ ರೂಂ ಆರಂಭಿಸಿರುವುದರ ವೈಫಲ್ಯವೇ ಎಂಬ ಬಗ್ಗೆ ಅನುಮಾನ ಪಡಲಾಗಿತ್ತು. ಆದರೆ ಇವೆಲ್ಲವನ್ನು ತಪ್ಪೆಂದು ಸಾಬೀತುಪಡಿಸಿರುವ ನೂತನ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.

ಎಸ್‌-ಕ್ರಾಸ್ ವೈಫಲ್ಯವನ್ನು ಬಲೆನೊ ಮೂಲಕ ಸರಿದೂಗಿಸಿದ ಮಾರುತಿ

2015 ಅಕ್ಟೋಬರ್ 26ರಂದು ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಬಿಡುಗಡೆಯಾಗಿರುವ 16 ದಿನಗಳ ಅವಧಿಯಲ್ಲೇ 21,000 ಯುನಿಟ್ ಗಳ ಮುಂಗಡ ಬುಕ್ಕಿಂಗ್ಸ್ ದಾಖಲಿಸಿದೆ.

ಎಸ್‌-ಕ್ರಾಸ್ ವೈಫಲ್ಯವನ್ನು ಬಲೆನೊ ಮೂಲಕ ಸರಿದೂಗಿಸಿದ ಮಾರುತಿ

ಇದು ನೆಕ್ಸಾ ಶೋ ರೂಂ ಮುಖಾಂತರ ಮಾರಾಟವಾಗುತ್ತಿರುವ ಮಾರುತಿಯ ಎರಡನೇ ಮಾದರಿಯಾಗಿದೆ. ಇದರೊಂದಿಗೆ ನೆಕ್ಸಾ ಶೋ ರೂಂ ಮಾರುತಿಯ ಪಾಲಿಗೆ ವರದಾನವಾಗುತ್ತಿದೆ.

ಎಸ್‌-ಕ್ರಾಸ್ ವೈಫಲ್ಯವನ್ನು ಬಲೆನೊ ಮೂಲಕ ಸರಿದೂಗಿಸಿದ ಮಾರುತಿ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗ್ರಾಹಕರು ಹೊಚ್ಚ ಹೊಸ ಕಾರನ್ನು ಖರೀದಿಸಲು ಬಯಸುತ್ತಾರೆ. ಇದೇ ಸುಸಂದರ್ಭದಲ್ಲಿ ಬಲೆನೊ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಎಸ್‌-ಕ್ರಾಸ್ ವೈಫಲ್ಯವನ್ನು ಬಲೆನೊ ಮೂಲಕ ಸರಿದೂಗಿಸಿದ ಮಾರುತಿ

ಇವೆಲ್ಲವೂ ಮಾರಾಟದ ಅಂಕಿಅಂಶದಲ್ಲಿ ಧನಾತ್ಮಕ ಪರಿಣಾಮ ಬೀರಲು ಕಾರಣವಾಗಿದೆ. ಬಲ್ಲ ಮೂಲಗಳ ಪ್ರಕಾರ ಮಾರುತಿ ಬಲೆನೊ ಕಾಯುವಿಕೆ ಅವಧಿ ಈಗಾಗಲೇ ಆರು ತಿಂಗಳಷ್ಟು ಕಾಲ ವಿಸ್ತರಣೆಯಾಗಿದೆ.

ಎಸ್‌-ಕ್ರಾಸ್ ವೈಫಲ್ಯವನ್ನು ಬಲೆನೊ ಮೂಲಕ ಸರಿದೂಗಿಸಿದ ಮಾರುತಿ

ಪೆಟ್ರೋಲ್ ಹಾಗೂ ಡೀಸೆಲ್ ಬೇಸ್ ವೆರಿಯಂಟ್ ಗಳು ಅನುಕ್ರಮವಾಗಿ 4.99 ಹಾಗೂ 6.16 ಲಕ್ಷ ರು.ಗಳಲ್ಲಿ ಮಾರುಕಟ್ಟೆ ತಲುಪಿರುವ ಬಲೆನೊದ ಇವೆರಡು ಟಾಪ್ ಎಂಡ್ ವೆರಿಯಂಟ್ ಗಳು ಅನುಕ್ರಮವಾಗಿ 7.01 ಹಾಗೂ 8.11 ಲಕ್ಷ ರು.ಗಳಷ್ಟು (ಎಲ್ಲ ಬೆಲೆಗಳು ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸುತ್ತದೆ.

ಇವನ್ನೂ ಓದಿ

ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಭರ್ಜರಿ ಬಿಡುಗಡೆ

English summary
All-New Maruti Baleno Records Phenomenal Bookings Since Launch: Report
Story first published: Friday, November 13, 2015, 6:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark