ಮಾರುತಿ ಎರ್ಟಿಗಾ ಆಟೋಮ್ಯಾಟಿಕ್, ಹೈಬ್ರಿಡ್ ಮಾದರಿ ಬಿಡುಗಡೆಗೆ ರೆಡಿ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಅತಿ ಶೀಘ್ರದಲ್ಲೇ ತನ್ನ ಜನಪ್ರಿಯ ಎರ್ಟಿಗಾ ಬಹು ಬಳಕೆಯ ವಾಹನದ (ಎಂಪಿವಿ) ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ಹಬ್ಬದ ಆವೃತ್ತಿಯಲ್ಲಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.
ಬಲ್ಲ ಮೂಲಗಳ ಪ್ರಕಾರ ಮಾರುತಿ ಎರ್ಟಿಗಾ ಫೇಸ್ ಲಿಫ್ಟ್ ಮಾದರಿಯು 2015 ಅಕ್ಟೋಬರ್ 15ರಂದು ಬಿಡುಗಡೆಯಾಗಲಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ನೂತನ ಎರ್ಟಿಗಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೂ ಲಭ್ಯವಾಗಲಿದೆ.

ಅಲ್ಲದೆ ಸಿಯಾಝ್ ಸೆಡಾನ್ ಕಾರಿಗೆ ಸಮಾನವಾದ ರೀತಿಯಲ್ಲಿ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್‌ಎಚ್‌ವಿಎಸ್) ತಂತ್ರಜ್ಞಾನವನ್ನು ಆಳವಡಿಸುವ ಸಾಧ್ಯತೆಯಿದೆ. ಇದರ 1.3 ಲೀಟರ್ ಡೀಸೆಲ್ ಜೊತೆಗೆ ಪುನರುತ್ಪಾದಕ ಬ್ರೇಕ್ ವ್ಯವಸ್ಥೆಯ ಲಿಥಿಯಂ ಇಯಾನ್ ಬ್ಯಾಟರಿ ಇರಲಿದೆ.
ಮಾರುತಿ ಎರ್ಟಿಗಾ ಹೈಬ್ರಿಡ್ ಮಾದರಿಯು 200 ಎನ್‌ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರಲಿದೆ.
ಇನ್ನು ಕಾರಿನ ಅಂದತೆಯಲ್ಲೂ ಬದಲಾವಣೆ ಕಂಡುಬರಲಿದೆ. ಪರಿಷ್ಕೃತ ಫ್ರಂಟ್ ಮತ್ತು ರಿಯರ್ ಬಂಪರ್, ಫ್ರಂಟ್ ಗ್ರಿಲ್, ಹೊಸ ಫಾಗ್ ಲ್ಯಾಂಪ್ ಹಾಗೂ ಲೈಸನ್ಸ್ ಪ್ಲೇಟ್ ಗೆ ಕ್ರೋಮ್ ಸ್ಪರ್ಶವನ್ನು ನೀಡಲಾಗುವುದು.
ಅಂತೆಯೇ ಕಾರಿನೊಳಗೆ ಸ್ಟ್ಯಾರ್ಟ್/ಸ್ಟಾಪ್ ಬಟನ್, ಕೀಲೆಸ್ ಎಂಟ್ರಿ, ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮಿರರ್, ಹೊಸ ಹೋದಿಕೆ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.
ಭದ್ರತೆಯ ವಿಚಾರವನ್ನು ನೋಡಿದಾಗ ಬೇಸ್ ವೆರಿಯಂಟ್ ನಲ್ಲೂ ಚಾಲಕ ಬದಿಯ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ದೊರಕುವ ಸಾಧ್ಯತೆಯಿದೆ. ಆದರೆ ಬೇಸ್ ವೆರಿಲಂಟ್ ನಲ್ಲಿ ಎಬಿಎಸ್ ಹಾಗೂ ಇಬಿಡಿ ಕೊರತೆ ಕಾಣಲಿದೆ.


Click it and Unblock the Notifications