ಸುಜುಕಿ ಹೊಸ ಎಸ್ ಯುವಿ ಹೆಸರು ಏನಾಗಿರಬಹುದು ಗೊತ್ತಾ?

By Nagaraja

ಬಹಳ ಕಾಲದಿಂದಲೇ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅಂಗಸಂಸ್ಥೆಯಾಗಿರುವ ಸುಜುಕಿಯಿಂದ ಕ್ರೀಡಾ ಬಳಕೆಯ ವಾಹನ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬ ಬಗ್ಗೆ ವರದಿಗಳು ಬರುತ್ತಿವೆ.

ಅಷ್ಟಕ್ಕೂ ಈಗ ಕಾಲ ಸನ್ನಿಹಿತವಾಗುತ್ತಿದ್ದು, ನೂತನ ಸುಜುಕಿ ಕಾಂಪಾಕ್ಟ್ ಎಸ್ ಯುವಿ ಹೆಸರು ಏನಾಗಿರಬಹುದು ಗೊತ್ತಾ ? ಅದುವೇ ವಿಟಾರಾ ಬ್ರೆಝಾ (Vitara Brezza). ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಪ್ರಕಟಣೆ ಬರಬೇಕಾಗಿದೆ. ಪ್ರಸ್ತುತ ಕಾರು ಮಾರುತಿ ಅಡಿಯಲ್ಲಿ ದೇಶಕ್ಕೆ ಪರಿಚಯಿಸುವ ಸಾಧ್ಯತೆಯಿದೆ.

suzuki vitara

ಈ ಬಹುನಿರೀಕ್ಷಿತ ಎಸ್ ಯುವಿ 1.3 ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಐದು ವೆರಿಯಂಟ್ ಗಳನ್ನು ಪಡೆಯಲಿದೆ. ಇದು ಆಂತರಿಕವಾಗಿ 'ವೈಬಿಎ' ಎಂಬ ಕೋಡ್ ಪಡೆದುಕೊಂಡಿದೆ.

ನಿರೀಕ್ಷಿತ ವೆರಿಯಂಟ್ ಗಳು: ಎಲ್, ವಿ, ವಿ ಪ್ಲಸ್, ಝಡ್, ಝಡ್ ಪ್ಲಸ್.

ಮುಂಬರುವ ದಿನಗಳಲ್ಲಿ ಎಸ್ ಎಕ್ಸ್4-ಕ್ರಾಸ್ ಮಾದರಿಯನ್ನು ಮಾರುತಿ ಬಿಡುಗಡೆ ಮಾಡಲಿದೆ. ಇದು ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಗೆ ಮಾರುತಿಯ ಉತ್ತರವಾಗಲಿದೆ. ಈ 4.3 ಮೀಟರ್ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಕಳೆದ ವರ್ಷದಿಂದಲೇ ನಡೆಯುತ್ತಿದೆ.

Article Published On: Saturday, March 28, 2015, 7:24 [IST]
English summary
Maruti new compact SUV name Vitarra Brezza?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+