ಮಾರುತಿ ಬಲೆನೊ: ನೀವು ತಿಳಿದುಕೊಳ್ಳಬೇಕಾದ ಅಂಶಗಳು!

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಅತಿ ಶೀಘ್ರದಲ್ಲೇ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮಗ್ರ ವಿವರಗಳನ್ನು ಬಿಡುಗಡೆ ಮಾಡಿದೆ.

ವಾಹನ ಪ್ರೇಮಿಗಳ ಕಾಯುವಿಕೆಗೆ ವಿರಾಮ ಹಾಕಿರುವ ಮಾರುತಿ ಬಲೆನೊ ಇದೇ ಮುಂಬರುವ 2015 ಅಕ್ಟೋಬರ್ 26ರಂದು ಬಿಡುಗಡೆ ಕಾಣಲಿದೆ. ಈ ಮೂಲಕ ಹಬ್ಬದ ಸಂಭ್ರಮದಲ್ಲಿರುವ ವಾಹನ ಪ್ರೇಮಿಗಳಿಗೆ ಪರಿಪೂರ್ಣ ಉಡುಗೊರೆಯೊಂದಿಗೆ ಮುಂದೆ ಬಂದಿರುವ ಮಾರುತಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ಮಾರುತಿ ಬಲೆನೊ: ನೀವು ತಿಳಿದುಕೊಳ್ಳಬೇಕಾದ ಅಂಶಗಳು!

ಪ್ರಾರಂಭದಲ್ಲಿ ವೈಆರ್ ಎ ಕೋಡ್ ಪಡೆದುಕೊಂಡಿದ್ದ ಬಲೆನೊ, ಮಾರುತಿಯ ನೆಕ್ಸಾ ಪ್ರೀಮಿಯಂ ಶೋ ರೂಂಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ. ಇದು ಹ್ಯುಂಡೈ ಐ20, ಫೋಕ್ಸ್ ವ್ಯಾಗನ್ ಪೊಲೊ ಹಾಗೂ ಹೋಂಡಾ ಜಾಝ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಮಾರುತಿ ಬಲೆನೊ: ನೀವು ತಿಳಿದುಕೊಳ್ಳಬೇಕಾದ ಅಂಶಗಳು!

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬಲೆನೊ ಲಭ್ಯವಾಗಲಿದೆ. ಅವುಗಳೆಂದರೆ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಆಗಿರಲಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಹೆಚ್ಚು ಶಕ್ತಿಶಾಲಿ 110 ಅಶ್ವಶಕ್ತಿ ಉತ್ಪಾದಿಸಬಲ್ಲ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯೂ ಲಭ್ಯವಾಗಲಿದೆ.

ಎಂಜಿನ್, ಗೇರ್ ಬಾಕ್ಸ್

ಎಂಜಿನ್, ಗೇರ್ ಬಾಕ್ಸ್

1.2 ಲೀಟರ್ ಪೆಟ್ರೋಲ್: 82.8 ಅಶ್ವಶಕ್ತಿ, 115 ಎನ್ ಎಂ ತಿರುಗುಬಲ

1.3 ಲೀಟರ್ ಡೀಸೆಲ್: 73.9 ಅಶ್ವಶಕ್ತಿ, 190 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ

ಸುರಕ್ಷತೆ

ಸುರಕ್ಷತೆ

 • ಏರ್ ಬ್ಯಾಗ್,
 • ಎಬಿಎಸ್,
 • ಇಬಿಡಿ,
 • ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ಮನರಂಜನೆ

ಮನರಂಜನೆ

 • 7 ಇಂಚುಗಳ ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ ಜೊತೆಗೆ ಆಪಲ್ ಕಾರ್ ಪ್ಲೇ,
 • ಬ್ಲೂಟೂತ್ ಕನೆಕ್ಟಿವಿಟಿ,
 • ನೇವಿಗೇಷನ್,
 • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
ನಾಲ್ಕು ವೆರಿಯಂಟ್

ನಾಲ್ಕು ವೆರಿಯಂಟ್

 • ಸಿಗ್ನಾ,
 • ಡೆಲ್ಟಾ,
 • ಝೆಟಾ,
 • ಆಲ್ಪಾ
ಅಂದಾಜು ಬೆಲೆ

ಅಂದಾಜು ಬೆಲೆ

6 ಲಕ್ಷ ರು.ಗಳಿಂದ 9 ಲಕ್ಷ ರು.

ಆಯಾಮ

ಆಯಾಮ

ಉದ್ದ: 3995 ಎಂಎಂ

ಅಗಲ: 1745 ಎಂಎಂ

ಎತ್ತರ: 1500 ಎಂಎಂ

ಚಕ್ರಾಂತರ: 2530 ಎಂಎಂ

ಗ್ರೌಂಡ್ ಕ್ಲಿಯರನ್ಸ್: 180 ಎಂಎಂ

ಢಿಕ್ಕಿ ಜಾಗ ಸಾಮರ್ಥ್ಯ: 355 ಲೀಟರ್

English summary
Maruti Suzuki Baleno Launch Date Confirmed
Story first published: Saturday, October 10, 2015, 9:45 [IST]
Please Wait while comments are loading...

Latest Photos