ಅತಿ ಶೀಘ್ರದಲ್ಲೇ ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಮಗದೊಂದು ಐಕಾನಿಕ್ ಕಾರಾಗಿರುವ 'ಬಲೆನೊ' ನಿರ್ಮಾಣ ಪ್ರಕ್ರಿಯೆಯನ್ನು ಹರಿಯಾಣದಲ್ಲಿ ಸ್ಥಿತಗೊಂಡಿರುವ ತನ್ನ ಮಾನೇಸರ್ ಘಟಕದಲ್ಲಿ ಆರಂಭಿಸಿದೆ.
ಮಾರುತಿ ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಸಹ ಇತ್ತೀಚೆಗಷ್ಟೇ ಪ್ರಾರಂಭವಾಗಿರುವ ಸಂಸ್ಥೆಯ ಪ್ರೀಮಿಯಂ ನೆಕ್ಸಾ ಶೋ ರೂಂಗಳ ಮುಖಾಂತರ ಮಾರಾಟವಾಗಲಿದೆ. ವೈಆರ್‌ಎ ಎಂಬ ಕೋಡ್ ಪಡೆದಿರುವ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಪ್ಟೆಂಬರ್ 15ರಿಂದ ಆರಂಭವಾಗಲಿರುವ ವಿಶ್ವದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲೂ ಭರ್ಜರಿ ಪ್ರದರ್ಶನ ಕಾಣಲಿದೆ.

ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಸಾಧಿಸಿರುವ ಹ್ಯುಂಡೈ ಎಲೈಟ್ ಐ10, ಫೋಕ್ಸ್ ವ್ಯಾಗನ್ ಪೊಲೊ, ಹೋಂಡಾ ಜಾಝ್ ಮುಂತಾದ ಮಾದರಿಗಳಿಗೆ ನೂತನ ಮಾರುತಿ ಕಾರು ಪೈಪೋಟಿ ಒಡ್ಡಲಿದೆ.
ಬಲ್ಲ ಮೂಲಗಳ ಪ್ರಕಾರ ಮಾರುತಿ ಬಲೆನೊ ಏಳರಿಂದ ಒಂಬತ್ತು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ. ಅಲ್ಲದೆ ಪ್ರೀಮಿಯಂ ಕಾರಿಗೆ ತಕ್ಕ ವೈಶಿಷ್ಟ್ಯಗಳನ್ನು ಪಡೆಯಲಿದೆ.
ಇನ್ನುಳಿದಂತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಫಾಗ್ ಲೈಟ್ಸ್, ಅಲಾಯ್ ವೀಲ್, ಕ್ರೋಮ್ ಡೋರ್ ಹ್ಯಾಂಡಲ್, ಕೀಲೆಸ್ ಎಂಟ್ರಿ, ಟರ್ನ್ ಇಂಡಿಕೇಟರ್, ಹೊರಗಿನ ರಿಯರ್ ವ್ಯೂ ಮಿರರ್ ಜೊತೆಗೆ ರಿಯರ್ ಸ್ಪಾಯ್ಲರ್ ಪಡೆಯಲಿದೆ.
ಇನ್ನು ಅಂತಿಮವಾಗಿ ದೇಶದ ಜನಪ್ರಿಯ ಸ್ವಿಫ್ಟ್ ನಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಅಲ್ಲದೆ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆ ಮಾರುಕಟ್ಟೆ ಪ್ರವೇಶ ಪಡೆಯಲಿದೆ.


Click it and Unblock the Notifications