2 ತಿಂಗಳಿಗೆ ಮಾರುತಿ ಬಲೆನೊ ಕಾಯುವಿಕೆ ಅವಧಿ ವಿಸ್ತರಣೆ

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇತ್ತೀಚೆಗಷ್ಟೇ ಹೊಚ್ಚ ಹೊಸ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆ ಮಾಡಿತ್ತು. ಇದರೊಂದಿಗೆ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಕಾಯುವಿಕೆ ಅವಧಿ ಎರಡು ತಿಂಗಳುಗಳಿಗೆ ವಿಸ್ತರಣೆಯಾಗಿದೆ.

ನಿಮ್ಮ ಮಾಹಿತಿಗಾಗಿ 2015 ಮಾರುತಿ ಬಲೆನೊ ಸೆಪ್ಟೆಂಬರ್ 26ರಂದು ಬಿಡುಗಡೆಯಾಗಿತ್ತು. ಇದು ಪೆಟ್ರೋಲ್ ಹಾಗೂ ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿದ್ದು, ಸಿಗ್ನಾ, ಡೆಲ್ಟಾ, ಝೆಟಾ ಹಾಗೂ ಆಲ್ಪಾಗಳೆಂಬ ನಾಲ್ಕು ವೆರಿಯಂಟ್ ಗಳಲ್ಲಿ ಮಾರಾಟವಾಗುತ್ತಿದೆ.

ಮಾರುತಿ ಬಲೆನೊ

ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಹಾಗೆಯೇ 1.3 ಲೀಟರ್ ಡೀಸೆಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಆಗಮನವಾಗಿದೆ.

ಮಾರುತಿ ಬಲೆನೊ ಪ್ರಮುಖವಾಗಿಯೂ ಹ್ಯುಂಡೈ ಎಲೈಟ್ ಐ20 ಮತ್ತು ಹೋಂಡಾ ಜಾಝ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಭಾರತದಲ್ಲೇ ನಿರ್ಮಾಣವಾಗಲಿರುವ ಬಲೆನೊ ವಿದೇಶಗಳಿಗೂ ರಫ್ತು ಆಗಲಿದೆ.

ಏಳು ಆಕರ್ಷಕ ಬಣ್ಣಗಳಲ್ಲಿ ಕಂಗೊಳಿಸಲಿರುವ ಬಲೆನೊ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್ ಮುಂತಾದ ಸ್ಟ್ಯಾಂಡರ್ಡ್ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಲ್ಲದೆ ಎರಡು ವರ್ಷ ಅಥವಾ 40,000 ಕೀ.ಮೀ.ಗಳ ವಾರಂಟಿಯೂ ಲಭ್ಯವಿರುತ್ತದೆ.

Article Published On: Tuesday, November 3, 2015, 7:51 [IST]
English summary
Maruti Suzuki Baleno Waiting Period Increased To 60 Days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+