ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್ ಬಿಡುಗಡೆಗೆ ರೆಡಿ; ಏನಿದೆ ವಿಶೇಷ?

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅತಿ ನೂತನ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಬಹುನಿರೀಕ್ಷಿತ ಕಾರು ಮಾರುತಿಯ ಹಳೆಯ ಎಸ್‌ಎಕ್ಸ್ 4 ಸ್ಥಾನವನ್ನು ತುಂಬಿಕೊಂಡಿತ್ತು.

ಬಿಡುಗಡೆಯಾದ ಕೆಲವೇ ಸಮಯಗಳಲ್ಲಿ ಗಮನಾರ್ಹ ಮಾರಾಟವನ್ನು ಗಿಟ್ಟಿಸಿಕೊಂಡಿರುವ ಸಿಯಾಝ್ ಈಗ ಹೊಸ ಆಯಾಮವನ್ನು ಗಿಟ್ಟಿಸಿಕೊಳ್ಳುತ್ತಿದೆ. ಹೌದು, ಸಿಯಾಝ್ ಹೈಬ್ರಿಡ್ ಕಾರು ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಮಾರುತಿ ಸಿಯಾಝ್

ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ ಸ್ವಾತಂತ್ರೋತ್ಸವದ ಬೆನ್ನಲ್ಲೇ ಸಿಯಾಝ್ ಹೈಬ್ರಿಡ್ ಮಾದರಿಯು ಬಿಡುಗಡೆಯಾಗಲಿದೆ. ಇದು ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

ನೂತನ ಸಿಯಾಝ್ ಹೈಬ್ರಿಡ್ ಕಾರಿನಲ್ಲಿ ಅಂಗಸಂಸ್ಥೆಯ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನ (ಎಸ್ಎಚ್‌ವಿಎಸ್‌) ಆಳವಡಿಕೆಯಾಗಲಿದೆ. ಪ್ರಸ್ತುತ ತಂತ್ರಗಾರಿಕೆಯನ್ನು 2015 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶಿಸಲಾಗಿತ್ತು.

ಇದು ಈಗಿರುವ ಡೀಸೆಲ್ ಕಾರಿನ ಸ್ಥಾನವನ್ನು ತುಂಬಲಿದೆ. ಆದರೆ ಪೆಟ್ರೋಲ್ ಮಾದರಿಯಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಮಾರುತಿ ಸುಜುಕಿ ಸಿಯಾಝ್ ಹೈಬ್ರಿಡ್ ಕಾರಿನಲ್ಲಿ ಡೀಸೆಲ್ ಜೊತೆಗೆ ಲಿಥಿಯಂ ಇಯಾನ್ ಬ್ಯಾಟರಿ ಕಂಡುಬರಲಿದೆ. ಅಲ್ಲದೆ ಬ್ರೇಕಿಂಗ್ ವೇಳೆ ಶಕ್ತಿಯನ್ನು ಪ್ರತ್ಯುತ್ಪಾದಿಸುವ ಸಾಮರ್ಥ್ಯ ಇರಲಿದೆ. ಇದು ಎಂಜಿನ್‌ಗೆ ಹೆಚ್ಚುವರಿ ತಿರುಗಬಲ ವಿತರಿಸಲು ಸಹಕಾರಿಯಾಗಲಿದ್ದು, ಐಡಲ್ ಸ್ಟ್ಯಾರ್ಟ್-ಸ್ಟ್ಯಾಪ್ ತಂತ್ರಗಾರಿಕೆಯು ಕಂಡುಬರಲಿದೆ.

ಇವೆಲ್ಲದರ ನೆರವಿನಿಂದ ನೂತನ ಸಿಯಾಝ್ ಹೈಬ್ರಿಡ್ ಕಾರು ಪ್ರತಿ ಲೀಟರ್ ಗೆ 30 ಕೀ.ಮೀ.ಗಳಷ್ಟು ಮೈಲೇಜ್ ನೀಡಲು ಯಶಸ್ವಿಯಾಗಲಿದೆ. ಅಂದ ಹಾಗೆ ಸಿಯಾಝ್ ಹೈಬ್ರಿಡ್ ಮಾದರಿಯು ಮಾರುತಿಯ ಹೊಸತಾದ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.

ಇನ್ನು ಮಾರುತಿ ಸಿಯಾಝ್ ಹೈಬ್ರಿಡ್ ವೆರಿಯಂಟ್ ಸಾಮಾನ್ಯ ಮಾದರಿಗಿಂತಲೂ 75,000 ರು.ಗಳಿಂದ ಒಂದು ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ. ಹಾಗೆಯೇ ಈಗಿರುವ ಡೀಸೆಲ್ ಮಾದರಿಗಳ ಸ್ಟೋಕ್ ಖಾಲಿ ಮಾಡಲು ಶೋ ರೂಂಗಳಲ್ಲಿ 25,000 ರು.ಗಳ ವರೆಗೆ ಡಿಸ್ಕೌಂಟ್ ಲಭ್ಯವಾಗಲಿದೆ.

ಏತನ್ಮಧ್ಯೆ ಪೆಟ್ರೋಲ್ ಸಿಯಾಝ್ ಮಾದರಿಯಲ್ಲೂ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಇವೆಲ್ಲದರ ಮೂಲಕ ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕುವ ಸ್ಪಷ್ಟ ಯೋಜನೆ ಹೊಂದಿದೆ.

More from DriveSpark

Article Published On: Saturday, August 15, 2015, 14:41 [IST]
English summary
Maruti Suzuki Ciaz Diesel To Be Replaced With SHVS Diesel Hybrid
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+