ಮಾರುತಿ ಸಿಯಾಝ್ ಆರ್‌ಎಸ್ ಸೀಮಿತ ಆವೃತ್ತಿ ಬಿಡುಗಡೆ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸಿಯಾಝ್ ಆರ್‌ಎಸ್ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಈ ಹಬ್ಬದ ಆವೃತ್ತಿಯಲ್ಲಿ ಮತ್ತಷ್ಟು ಮೆರಗು ತುಂಬಿದೆ.
ಪ್ರಾರಂಭಿಕ ಬೆಲೆ: 9.2 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಮಾರುತಿ ಸಿಯಾಝ್ ಆರ್‌ಎಸ್ ಮಾದರಿಯಲ್ಲಿ ಹೆಚ್ಚು ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದ್ದು, ಸ್ಪೋರ್ಟಿ ಬ್ಲ್ಯಾಕ್ ಇಂಟಿರಿಯರ್, ಗ್ರೇ ಕ್ರೋಮ್ ಫಿನಿಶಿಂಗ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಅಂತೆಯೇ ಮುಂಭಾಗ, ಹಿಭಾಂಗ, ಬದಿಯಲ್ಲಿ ವಿಶೇಷ ಸ್ಪಾಯ್ಲರ್ ಕೂಡಾ ನೀಡಲಾಗಿದೆ. ಹಾಗೆಯೇ ಕಾರಿನ ಒಟ್ಟಾರೆ ಏರೋಡೈನಾಮಿಕ್ ವಿನ್ಯಾಸವನ್ನು ಇಮ್ಮಡಿಗೊಳಿಸಿದೆ.

ಪೆಟ್ರೋಲ್ ಹಾಗೂ ಹೈಬ್ರಿಡ್ ಡೀಸೆಲ್ ಮಾದರಿಗಳಲ್ಲಿ ಮಾರುತಿ ಸಿಯಾಝ್ ಲಭ್ಯವಾಗಲಿದೆ. ಇನ್ನುಳಿದಂತೆ ಸಿಯಾಝ್ ಝಡ್ ಪ್ಲಸ್ ವೆರಿಯಂಟ್ ನಲ್ಲಿರುವ ಎಲ್ಲ ಸೌಲಭ್ಯಗಳು ಲಭ್ಯವಾಗಲಿದೆ.

ಇವುಗಳಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಅಲಾಯ್ ವೀಲ್, ಕಪ್ಪು ವರ್ಣದ ಬಿ ಪಿಲ್ಲರ್, ಒಆರ್‌ವಿಎಂನಲ್ಲಿ ಟರ್ನ್ ಇಂಡಿಕೇಟರ್, ಲೆಥರ್ ಸೀಟು ಹೋದಿಕೆ, ಲೆಥರ್ ಹೋದಿಕೆಯ ಸ್ಟೀರಿಂಗ್, ಸ್ಟ್ಯಾರ್ಟ್ ಸ್ಟಾಪ್ ಬಟನ್ ಎಂಬಿತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಸಿಯಾಝ್ ಪೆಟ್ರೋಲ್ (ಝಡ್‌ಎಕ್ಸ್‌ಐ ಪ್ಲಸ್ ಆರ್‌ಎಸ್): 9.20 ಲಕ್ಷ ರು.
- ಸಿಯಾಝ್ ಸ್ಮಾರ್ಟ್ ಹೈಬ್ರಿಡ್ ಡೀಸೆಲ್ (ಝಡ್‌ಡಿಐ ಪ್ಲಸ್ ಎಸ್‌ಎಚ್‌ವಿಎಸ್ ಆರ್‌ಎಸ್): 10.28 ಲಕ್ಷ ರು.
- ಎಬಿಎಸ್,
- ಡ್ರೈವರ್ ಏರ್ ಬ್ಯಾಗ್,
- ಸಹ ಚಾಲಕ ಏರ್ ಬ್ಯಾಗ್,
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಕ್ಯಾಮೆರಾ,
- ಎಂಜಿನ್ ಇಂಮೊಬಿಲೈಜರ್
- ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
- ಅಲಾಯ್ ವೀಲ್,
- ಲೆಥರ್ ಸೀಟು ಹೋದಿಕೆ,
- ಸ್ಟ್ಯಾರ್ಟ್ ಸ್ಟಾಪ್ ಬಟನ್,
- ಎತ್ತರ ಹೊಂದಾಣಿಸಬಹುದಾದ ಡ್ರೈವರ್ ಸೀಟು,
- ರಿಯರ್ ಎಸಿ ವೆಂಟ್ಸ್,
- ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್,
- ಟಚ್ ಸ್ಕ್ರೀನ್ ಸ್ಮಾರ್ಟ್ ಪ್ಲೇ ಸಿಸ್ಟಂ,
- ಬ್ಲೂಟೂತ್ ಕನೆಕ್ಟಿವಿಟಿ,
- ನೇವಿಗೇಷನ್ ಸಿಸ್ಟಂ,
- ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್
- ಪಿಯರ್ಲ್ ಸ್ನೊ ವೈಟ್,
- ಮೆಟ್ಯಾಲಿಕ್ ಸಿಲ್ಕಿ ಸಿಲ್ವರ್,
- ಪಿಯರ್ಲ್ ಮಿಡ್ ನೈಟ್ ಬ್ಲ್ಯಾಕ್,
- ಪಿಯರ್ಲ್ ಮೆಟ್ಯಾಲಿಕ್ ಡಿಗ್ನಿಟಿ ಬ್ರೌನ್,
- ಮೆಟ್ಯಾಲಿಕ್ ಗ್ಲಿಸ್ನೆನಿಂಗ್ ಗ್ರೇ,
- ಮೆಟ್ಯಾಲಿಕ್ ಕ್ಲಿಯರ್ ಬೀಜ್,
- ಪಿಯರ್ಲ್ ಸಾಂಗ್ರಿಯಾ ರೆಡ್

ಸುರಕ್ಷತೆ

ವಿಶಿಷ್ಟತೆಗಳು

ಬಣ್ಣಗಳು

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಿರುವ ಸಿಯಾಝ್ ಇದುವರೆಗೆ 56,000 ಯುನಿಟ್ ಗಳಷ್ಟು ಮಾರಾಟಗೊಂಡಿದೆ. ಅಲ್ಲದೆ ಸಂಸ್ಥೆಯು ಇತ್ತೀಚೆಗಷ್ಟೇ 28.09 ಕೀ.ಮೀ. ಮೈಲೇಜ್ ಸಾಮರ್ಥ್ಯದ ಸ್ಮಾರ್ಟ್ ಹೈಬ್ರಿಡ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು.


Click it and Unblock the Notifications








