ಬರುತ್ತಿದೆ ಮಾರುತಿ ಎರ್ಟಿಗಾ ಫೇಸ್ ಲಿಫ್ಟ್ ಮಾದರಿ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಅತಿ ಶೀಘ್ರದಲ್ಲೇ ಎರ್ಟಿಗಾ ಫೇಸ್ ಲಿಫ್ಟ್ ಬಹು ಬಳಕೆಯ ವಾಹನವನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಿದೆ. ಇದರಂಗವಾಗಿ 2015 ಆಗಸ್ಟ್ 20ರಂದು ಈ ಬಹುನಿರೀಕ್ಷಿತ ಕಾರಿನ ಭರ್ಜರಿ ಅನಾವರಣ ನಡೆಯಲಿದೆ.

ಉಪಯುಕ್ತ ವಿಭಾಗದಲ್ಲಿ ಮಾರುತಿಯ ಜನಪ್ರಿಯ ಮಾದರಿಯಾಗಿರುವ ಎರ್ಟಿಗಾ ಅತ್ಯುತ್ತಮ ಮಾರಾಟವನ್ನು ಗಿಟ್ಟಿಸಿಕೊಂಡಿತ್ತು. ಆದರೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ತನ್ನ ಜನಪ್ರಿಯ ಮಾದರಿಗೆ ತಾಜಾತನ ನೀಡಲು ಸಂಸ್ಥೆ ಮುಂದಾಗುತ್ತಿದೆ.

ಮಾರುತಿ ಎರ್ಟಿಗಾ

ಈ ಮೂಲಕ ಉತ್ತಮ ಮಾರಾಟವನ್ನು ಕಾಪಾಡಿಕೊಳ್ಳಲಾಗುವುದು. ನೂತನ ಎರ್ಟಿಗಾ 2015 ಇಂಡೋನೇಷ್ಯಾ ಮೋಟಾರು ಶೋದಲ್ಲಿ ಪ್ರದರ್ಶನಗೊಳ್ಳಲಿದೆ. ತದಾ ಬಳಿಕ ಭಾರತಕ್ಕೂ ಆಗಮನವಾಗಲಿದೆ.

ಪ್ರಮುಖವಾಗಿಯೂ
ಕಾರಿನ ಮುಂಭಾಗದ ಗ್ರಿಲ್ ಬದಲಾಗಲಿದ್ದು, ಹೆಚ್ಚಿನ ಕ್ರೋಮ್ ಸ್ಪರ್ಶತೆಯು ಕಂಡುಬರಲಿದೆ. ಅಲ್ಲದೆ ನೂತನ ಅಲಾಯ್ ವೀಲ್ ಜೊತೆಗೆ ಹೊಸ ಬಣ್ಣದ ಆಯ್ಕೆಯೂ ಇರಲಿದೆ.

ಕಾರಿನ ಒಳಮೈಯಲ್ಲೂ ಹೆಚ್ಚಿನ ಐಷಾರಾಮಿ ಸೌಲಭ್ಯಗಳನ್ನು ಒದಗಿಸುವುದು ಸಂಸ್ಥೆಯ ಇರಾದೆಯಾಗಿದೆ. ಹಾಗಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಹಾಗಿದ್ದರೂ ಸೆಲೆರಿಯೊ ಹಾಗೂ ಆಲ್ಟೊ ಕೆ10ನಲ್ಲಿರುವ ಮ್ಯಾನುವಲ್ ಆಟೋಮ್ಯಾಟಡ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ನೀಡುವ ಸಾಧ್ಯತೆಯಿದೆ.

ಭಾರತದಲ್ಲಿ ನೂತನ ಎರ್ಟಿಗಾ 2015 ವರ್ಷಾಂತ್ಯದಲ್ಲಿ ಅಥವಾ 2016 ಆಟೋ ಎಕ್ಸ್ ಪೋದಲ್ಲಿ ಪ್ರವೇಶವಾಗುವ ಸಾಧ್ಯತೆಯಿದೆ. ಏತನ್ಮಧ್ಯೆ ಅತಿ ಶೀಘ್ರದಲ್ಲೇ ಮಾರುತಿ ಸುಜುಕಿ ಎಸ್ ಕ್ರಾಸ್ ಬಿಡುಗಡೆ ಭಾಗ್ಯ ಕಾಣಲಿದೆ.

Article Published On: Friday, July 17, 2015, 7:40 [IST]
English summary
The Japanese manufacturer has confirmed that it will be showcasing a facelifted version of their MPV. The Ertiga with new design updates will be unveiled on 20th of August, 2015 at Indonesia Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+