ಮಾರುತಿ, ಹ್ಯುಂಡೈನಿಂದ 1.27 ಲಕ್ಷ ರು.ಗಳ ವರೆಗೆ ಬೆಲೆ ಏರಿಕೆ
ದೇಶದ ಅಗ್ರ ವಾಹನ ತಯಾರಿಕ ಸಂಸ್ಥೆಗಳಾಗಿರುವ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಸಂಸ್ಥೆಗಳು 1.27 ಲಕ್ಷ ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿದೆ. ಇನ್ನೊಂದೆಡೆ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಹ ಇದಕ್ಕೆ ಸಮಾನವಾದ ನಿಲುವನ್ನು ಅನುಸರಿಸಿದೆ.
ಕೇಂದ್ರ ಸರಕಾರ ನೀಡಿಕೊಂಡು ಬರುತ್ತಿದ್ದ ಅಬಕಾಗಿ ಸುಂಕ ವಿನಾಯಿತಿಯನ್ನು ರದ್ದುಗೊಳಿಸಿರುವ ಕೆಲವೇ ದಿನಗಳಲ್ಲಿ ವಾಹನ ತಯಾರಿಕ ಸಂಸ್ಥೆಗಳು ಇಂತಹದೊಂದು ನಿಲುವನ್ನು ಅನುಸರಿಸಿದೆ.
ಪ್ರಮುಖವಾಗಿಯೂ ನಿರ್ಮಾಣ ವೆಚ್ಚ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ತೆರಿಗೆ ವಿನಾಯಿತಿ ಆರು ತಿಂಗಳ ವರೆಗೆ ಅಂದರೆ ಡಿಸೆಂಬರ್ 31ರ ವರೆಗೆ ವಿಸ್ತರಿಸಿತ್ತು.

ಮಾರುತಿ ಬೆಲೆ ಏರಿಕೆ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತನ್ನೆಲ್ಲ ಮಾದರಿಗಳಿಗೆ 7,850 ರು.ಗಳಿಂದ 31,600 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿತ್ತು.
ಹ್ಯುಂಡೈ ಚಾಟಿಯೇಟು
ಇನ್ನೊಂದೆಡೆ ದೇಶದ ಎರಡನೇ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಜನವರಿ 1ರಿಂದಲೇ ಅನ್ವಯವಾಗುವಂತೆಯೇ 15,000 ರು.ಗಳಿಂದ 1.27 ಲಕ್ಷ ರು.ಗಳ ವರೆಗೆ ಬೆಲೆ ಏರಿಕೆ ಪ್ರಕಟಿಸಿತ್ತು.
ಜನರಲ್ ಮೋಟಾರ್ಸ್ ದರ ಏರಿಕೆ
ಹಾಗೆಯೇ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಹ ತನ್ನೆಲ್ಲ ಮಾದರಿಗಳಿಗೆ ರು. 15,000 ರು.ಗಳಿಂದ 61,000 ರು.ಗಳ ವರೆಗೆ ಬೆಲೆ ಏರಿಕೆ ಘೋಷಿಸಿದೆ.
ಮಾರುತಿ ಮಾದರಿಗಳು ಎಷ್ಟು ದುಬಾರಿಯಾಗಲಿದೆ?
ಮಾರುತಿ ಆಲ್ಟೊ - ರು. 8,500 ರು.ಗಳಿಂದ 12,700 ರು.ಗಳ ವರೆಗೆ
ಈಗಿನ ಬೆಲೆ - 2.37 - 3.52 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ವ್ಯಾಗನಾರ್ - ರು. 12,500 ರು.ಗಳಿಂದ 15,700 ರು.ಗಳ ವರೆಗೆ
ಈಗಿನ ಬೆಲೆ - 3.48 - 4.35 ಲಕ್ಷ ರು.
ಮಾರುತಿ ಸ್ವಿಫ್ಟ್ - ರು. 15,850 ರು.ಗಳಿಂದ 25,150 ರು.ಗಳ ವರೆಗೆ
ಈಗಿನ ಬೆಲೆ - 4.42 - 6.95 ಲಕ್ಷ ರು.
ಮಾರುತಿ ಡಿಜೈರ್ - ರು. 17,500 ರು.ಗಳಿಂದ 26,650 ರು.ಗಳ ವರೆಗೆ
ಈಗಿನ ಬೆಲೆ - 4.85 - 7.32 ಲಕ್ಷ ರು.
ಮಾರುತಿ ಸೆಲೆರಿಯೊ - ರು. 13,600 ರು.ಗಳಿಂದ 17,200 ರು.ಗಳ ವರೆಗೆ
ಈಗಿನ ಬೆಲೆ - 3.76 - 4.78 ಲಕ್ಷ ರು.
ಮಾರುತಿ ಸಿಯಾಝ್ - ರು. 22,450 ರು.ಗಳಿಂದ 31,600 ರು.ಗಳ ವರೆಗೆ
ಈಗಿನ ಬೆಲೆ - 6.99 - 9.80 ಲಕ್ಷ ರು.
ಮಾರುತಿ ಎರ್ಟಿಗಾ - ರು. 18,750 ರು.ಗಳಿಂದ 27,750 ರು.ಗಳ ವರೆಗೆ
ಈಗಿನ ಬೆಲೆ - 5.8 - 8.49 ಲಕ್ಷ ರು.


Click it and Unblock the Notifications








